More

    ನಾರಿ ನಿನಗೊಂದು ಸ್ಯಾರಿ ಭಟ್ಕಳ‌ ವಿಜೇತರು

    ಭಟ್ಕಳ: ಕನ್ನಡದ ನಂ1 ದಿನಪತ್ರಿಕೆ `ವಿಜಯವಾಣಿ’ ಆಯೋಜಿಸಿದ್ದ `ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ವಿಜೇತರ ಆಯ್ಕೆ ಪ್ರಕ್ರಿಯು ತಾಲೂಕಿನ ಸರ್ಪನಕಟ್ಟೆ ವೀರ ಸಾವರ್ಕರ್ ಸಮಾಜ ಸೇವಾ ಸಮಿತಿಯ ಸಭಾಭವನದಲ್ಲಿ ಮಂಗಳವಾರ ನಡೆಯಿತು.
    ಸ್ಪರ್ಧಾರ್ಥಿಗಳು ಭರ್ತಿ ಮಾಡಿದ ಉತ್ತರದ ಚೀಟಿಗಳಲ್ಲಿ ಐದನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ, ಮಹಿಳಾ ಉದ್ಯಮಿ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಹೆಕ್ಕಿದರು. ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಯಿತು.


    ವಿಜೇತರ ಘೋಷಣೆಯ ನಂತರ ಮಾತನಾಡಿದ ಮಹಿಳಾ ಉದ್ಯಮಿ ಶಿವಾನಿ ಶಾಂತಾರಾಮ ಭಟ್ಕಳ ಅವರು, ಇಂದಿನ ಜನಾಂಗದಲ್ಲಿ ಮೊಬೈಲ್, ಟಿವಿಯ ಗೀಳಿನಿಂದ‌ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. `ವಿಜಯವಾಣಿ’ ಮಹಿಳೆಯರಲ್ಲಿ ಓದುವ ಹವ್ಯಾಸ ಬೆಳೆಸಲು ಅಪರೂಪದ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಹಿಂದು ಸಂಸ್ಕೃತಿ, ಆರೋಗ್ಯ ಮುಂತಾದ ವಿಷಯಗಳ ಕುರಿತ ಹಲವು ನನ್ನ ಅಚ್ಚುಮೆಚ್ಚಿನ ಲೇಖನಗಳು, ವಸ್ತುನಿಷ್ಠ ವರದಿಗಳು `ವಿಜಯವಾಣಿ’ಯಲ್ಲಿ ಪ್ರಕಟವಾಗುತ್ತವೆ. ಗ್ರಾಮೀಣ ಭಾಗದ ಮೂಲೆಗಳಿಂದಲೂ ಈ ಸ್ಪರ್ಧೆಗೆ ಮಹಿಳೆಯರು ಸ್ಪಂದನೆ ನೀಡಿದ್ದು ಪತ್ರಿಕೆಯ ವ್ಯಾಪಕತೆಯನ್ನು ತೋರುತ್ತದೆ ಎಂದರು.
    ಯಲ್ವಡಿಕವೂರು ಗ್ರಾಪಂ ಅಧ್ಯಕ್ಷೆ ಪಾರ್ವತಿ ಚಂದ್ರು ಗೊಂಡ, `ವಿಜಯವಾಣಿ’ ಪತ್ರಿಕೆ ಆಯೋಜಿಸಿದ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆಯನ್ನು ಗ್ರಾಮೀಣ ಪ್ರದೇಶದಲ್ಲಿ ಮಾಡಿದ್ದು, ಖುಷಿಯಾಗಿದೆ ಎಂದರು.

    ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಲಕ್ಷ್ಮೀನಾರಾಯಣ ನಾಯ್ಕ, ಮಹಿಳೆಯರು ವಿದೇಶಿ ಉಡುಪುಗಳಿಗೆ ಮಾರು ಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ `ವಿಜಯವಾಣಿ’ ಸೀರೆಯ ಬಗ್ಗೆ ಸ್ಪರ್ಧೆ ಆಯೋಜಿಸಿ ಮಾದರಿಯಾಗಿದೆ ಎಂದರು.
    ಯಲ್ವಡಿಕವೂರು ಮಹಾಸತಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಪಲ್ಲವಿ ಮಾತನಾಡಿ, ಭಾರತದಲ್ಲಿ ಸೀರೆಗೆ ತನ್ನದೇ ಆದ ಮಹತ್ವ ಇದೆ. ಸೀರೆ ಹಿಂದು ಸಂಸ್ಕೃತಿಯ ಪ್ರತೀಕ. `ವಿಜಯವಾಣಿ’ ಸೀರೆ ಉಡುವ ನಾರಿಗೆ ಸ್ಪರ್ಧೆ ಆಯೋಜಿಸುವ ಮೂಲಕ ಸೀರೆಯ ಮಹತ್ವ ತಿಳಿಸುತ್ತಿರುವುದು ಸಂತಸದ ಸಂಗತಿ ಎಂದರು. ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ನಾಯ್ಕ, “ವಿಜಯವಾಣಿ” ಜಿಲ್ಲಾ ವರದಿಗಾರ ಸುಭಾಸ ಧೂಪದಹೊಂಡ, ಯಲ್ವಡಿಕವೂರು ಮಹಾಸತಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ವಿಜಯವಾಣಿ ಭಟ್ಕಳ ವರದಿಗಾರ ರಾಮಚಂದ್ರ ಕಿಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


    ಉತ್ತಮ ಸ್ಪಂದನೆ
    ಆಗಸ್ಟ್ 1ರಿಂದ ಸೆಪ್ಟೆಂಬರ್ 15ರವರೆಗೆ ಜರುಗಿದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. “ವಿಜಯವಾಣಿ” ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಓದುಗರು ಪ್ರತಿ ದಿನ ಉತ್ತರಗಳನ್ನು ಭರ್ತಿ ಮಾಡಿ “ವಿಜಯವಾಣಿ” ಕಚೇರಿಗೆ ತಲುಪಿಸಿದ್ದರು. ಸ್ಪರ್ಧೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಮಂಗಳವಾರ ಭಟ್ಕಳ ಕ್ಷೇತ್ರದ ಐವರು ಅದೃಷ್ಟಶಾಲಿಗಳ ಆಯ್ಕೆ ನಡೆದಿದ್ದು. ಶಿರಸಿ ಕ್ಷೇತ್ರದ ಆಯ್ಕೆ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದೆ. ಶೀಘ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಇತರ 4 ವಿಧಾನಸಭಾ ಕ್ಷೇತ್ರಗಳ ವಿಜೇತರ ಆಯ್ಕೆ ಪ್ರಕ್ರಿಯೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ.


    ವಿಜೇತರಿವರು
    *ಮಂಗಲಾ ನಾಯ್ಕ, ಪೊಲೀಸ್ ಕ್ವಾಟ್ರಸ್ , ಸಾಗರ ರಸ್ತೆ ಭಟ್ಕಳ
    *ಆಶಾ ಎಸ್.ಭಟ್, ಜನತಾ ಕಾಲನಿ , ಬೆಂಗ್ರೆ, ಭಟ್ಕಳ
    *ಸಾವಿತ್ರಿ ಎಂ.ಭಟ್, ಮುರ್ಡೇಶ್ವರ, ಭಟ್ಕಳ
    *ರಕ್ಷಾ ರಾಘವೇಂದ್ರ ನಾಯ್ಕ, ಶಿರಾಲಿ ಭಟ್ಕಳ
    *ಈರಮ್ಮ ಅಮಕೂಸ್ ಗೌಡ ಖರ್ವಾ ಹೊನ್ನಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts