More

    ವಿವೇಕ ವಿದ್ಯಾರ್ಥಿ ಪರೀಕ್ಷೆ ವಿಜೇತರಿಗೆ ಪ್ರಶಸ್ತಿ ಪ್ರದಾನ

    ರಾಣೆಬೆನ್ನೂರ: ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿವೇಕ ವಿದ್ಯಾರ್ಥಿ ಲಿಖಿತ ಪರೀಕ್ಷೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೋಮವಾರ ಆಶ್ರಮದ ಆವರಣದಲ್ಲಿ ಪ್ರಶಸ್ತಿ ವಿತರಿಸಲಾಯಿತು.
    ರಾಜ್ಯ ಮಟ್ಟದಲ್ಲಿ 2ನೇ ರ‌್ಯಾಂಕ್ ಪಡೆದ ಹೊಸರಿತ್ತಿ ಸರ್ಕಾರಿ ಹಳ್ಳಿಕೇರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸೃಷ್ಠಿ ಅಂಗಡಿ, 7ನೇ ರ‌್ಯಾಂಕ್ ಪಡೆದ ಹಿರೇಬಿದರಿ ಸರ್ಕಾರಿ ಶಾಲೆಯ ಚಂದನ ಆರ್.ಎಲ್., 10ನೇ ರ‌್ಯಾಂಕ್ ಪಡೆದ ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆಯ ಪೂಜಾ ಪಾಟೀಲ ಅವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪ್ರಮಾಣಪತ್ರ ನೀಡಲಾಯಿತು.
    ಜಿಲ್ಲಾ ಮಟ್ಟದಲ್ಲಿ 8ನೇ ತರಗತಿ ವಿಭಾಗದಲ್ಲಿ ಲಯನ್ಸ್ ಶಾಲೆಯ ದಿವ್ಯಾ ತುಮಕೂರ ಪ್ರಥಮ, ಬ್ಯಾಡಗಿಯ ಆದರ್ಶ ಸೆಂಟ್ರಲ್ ಸ್ಕೂಲ್‌ನ ವೈಭವಿ ದ್ವಿತೀಯ, ಲಯನ್ಸ್ ಶಾಲೆಯ ತೇಜಸ್ವಿನಿ ದೇಸಾಯಿ ತೃತೀಯ ಸ್ಥಾನ, 9ನೇ ತರಗತಿ ವಿಭಾಗದಲ್ಲಿ ಹಾವೇರಿಯ ಚನ್ನಬಸಪ್ಪ ಮಾಗಾವಿ ಶಾಲೆಯ ನಂದನಾ ಮಲ್ಲಾಡದ ಪ್ರಥಮ, ಹೊಸರಿತ್ತಿ ಸರ್ಕಾರಿ ಶಾಲೆಯ ಲಕ್ಷ್ಮೀ ಬ್ಯಾಹಟ್ಟಿಮಠ ದ್ವಿತೀಯ, ಕಮದೋಡ ಅಂಬೇಡ್ಕರ್ ಸ್ಕೂಲ್‌ನ ಪ್ರೀಯಾ ಕಂಬಳಿ ತೃತೀಯ ಸ್ಥಾನ, 10ನೇ ತರಗತಿ ವಿಭಾಗದಲ್ಲಿ ಹಿರೇಬಿದರಿ ಸರ್ಕಾರಿ ಹೈ ಸ್ಕೂಲ್‌ನ ರಕ್ಷಿತಾ ಪ್ರಥಮ, ತುಮ್ಮಿನಕಟ್ಟಿ ಸರ್ಕಾರಿ ಶಾಲೆಯ ಸುಜಾತಾ ದ್ವಿತೀಯ, ಮಾಕನೂರ ಮುರಾರ್ಜಿ ದೇಸಾಹಿ ವಸತಿ ಶಾಲೆಯ ನಾಗರತ್ನ ಹದಡಿ ಹಾಗೂ ರೇನ್‌ಬೋ ಶಾಲೆಯ ಲಕ್ಷ್ಮೀ ಎಂ.ಎಲ್. ತೃತೀಯ ಸ್ಥಾನ ಪಡೆದಿದ್ದು, ಇವರಿಗೂ ನಗದು ಬಹುಮಾನ ಹಾಗೂ ಪ್ರಶಸ್ತಿ ಪ್ರಮಾಣಪತ್ರ ನೀಡಲಾಯಿತು.
    ಬಿಇಒ ಎಂ.ಎಚ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಹಾಗೂ ಸ್ವಾಮಿ ಆತ್ಮದೀಪಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು.
    ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ, ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ, ಓಂ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಮನೋಜ ಸಾವಕಾರ, ರೇನ್ ಬೋ ವಸತಿ ಶಾಲೆಯ ಅಧ್ಯಕ್ಷ ಡಾ. ಸುರೇಶ ಸಿ.ಟಿ. ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts