More

    ಅನುಪಮಾ, ತರುಣ್ ಚಾಂಪಿಯನ್

    ಅಸ್ತಾನಾ: ಭಾರತದ ಉದಯೋನ್ಮುಖ ಷಟ್ಲರ್‌ಗಳಾದ ಅನುಪಮಾ ಉಪಾಧ್ಯಾಯ ಹಾಗೂ ತರುಣ್ ಮನ್ನೆಪಲ್ಲಿ ಕಜಾಕಿಸ್ತಾನ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
    ಶನಿವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ೈನಲ್ ಪಂದ್ಯದಲ್ಲಿ 19 ವರ್ಷದ ಅನುಪಮಾ 21-15, 21-16ರಿಂದ ದೇಶಭಾಂದವೆ ಇಶಾರಾಣಿ ಬರುವಾ ಎದುರು ಗೆಲುವು ದಾಖಲಿಸಿದರು. 41 ನಿಮಿಷ ಕಾದಾಟದಲ್ಲಿ ಮೇಲುಗೈ ಸಾಧಿಸಿದ ಅನುಪಮಾ, ಎರಡನೇ ಇಂಟರ್‌ನ್ಯಾಷನಲ್ ಚಾಲೆಂಜ್ ಪ್ರಶಸ್ತಿ ತನ್ನದಾಗಿಸಿಕೊಂಡರು. ಮಾರ್ಚ್‌ನಲ್ಲಿ ಪೋಲಿಶ್ ಇಂಟರ್‌ನ್ಯಾಷನಲ್ ಚಾಲೆಂಜ್ ಟೂರ್ನಿಯಲ್ಲೂ ಚಾಂಪಿಯನ್ ಆಗಿದ್ದರು.

    ಪುರುಷರ ವಿಭಾಗದಲ್ಲಿ 22 ವರ್ಷದ ತರುಣ್ 21-10, 21-19 ರಿಂದ 8ನೇ ಶ್ರೇಯಾಂಕಿತ ಮಲೇಷ್ಯಾದ ಸೊಂಗ್ ಜೊ ವೆನ್ ಎದುರು ಗೆದ್ದು ಚೊಚ್ಚಲ ಅಂತಾರಾಷ್ಟ್ರೀಯ ಪ್ರಶಸ್ತಿಯ ಒಲಿಸಿಕೊಂಡರು. ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಸೀನಿಯರ್ ವಿಭಾಗದಲ್ಲಿ ತರುಣ್ ರನ್ನರ್‌ಅಪ್ ಆಗಿದ್ದರು.
    ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸಂಯ್ ಶ್ರೀವತ್ಸ ಧನರಾಜ್- ಮನೀಶಾ ಕೆ. ಜೋಡಿ 21-9, 7-21, 12-21ರಿಂದ ಮಲೇಷ್ಯಾದ ವಾಂಗ್ ಟಿಯೆನ್ ಸಿ ಮತ್ತು ಲಿಮ್ ಚಿವ್ ಸಿಯೆನ್ ಎದುರು ನಿರಾಸೆ ಅನುಭವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts