ಕುಳೂರು ಶಾಲಾ ವ್ಯವಸ್ಥಾಪನಾ ಸಮಿತಿ ಮಹಾಸಭೆ

meeting
ಕುಳೂರು ಶಾಲಾ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಸತೀಶ್ ಎಲಿಯಾಣ ಮಾತನಾಡಿದರು. ಮುಖ್ಯಶಿಕ್ಷಕಿ ಮಾಲತಿ, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಚರಿತಾ ಚಿನಾಲ ಉಪಸ್ಥಿತರಿದ್ದರು.
Published on

ಮಂಜೇಶ್ವರ: ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ವ್ಯವಸ್ಥಾಪನಾ ಸಮಿತಿಯ ಮಹಾಸಭೆ ನಡೆಯಿತು.

ಅಧ್ಯಕ್ಷತೆ ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯಶಿಕ್ಷಕಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಚರಿತ ಚಿನಾಲ ಉಪಸ್ಥಿತರಿದ್ದರು. ಶಿಕ್ಷಕಿ ಸೌಮ್ಯಾ ಪಿ.ಕಳೆದ ಶೈಕ್ಷಣಿಕ ವರ್ಷದ ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಲೆಕ್ಕಪತ್ರ ಮಂಡಿಸಿದರು.

ನೂತನ ಶಾಲಾ ವ್ಯವಸ್ಥಾಪನಾ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಜಯರಾಜ್ ಶೆಟ್ಟಿ ಚಾರ್ಲ, ಉಪಾಧ್ಯಕ್ಷರಾಗಿ ಸತೀಶ್ ಎಲಿಯಾಣ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತಿಭಾ ಕುಳಬೈಲು, ಸುಚರಿತ ಚಿನಾಲ, ಬಟ್ಯಪ್ಪ ಹೊಸಗದ್ದೆ ಕುಳೂರು, ಅಶ್ವಿತ ಕೇಮಜಲ್, ಭುಜಂಗ ಮೂಲ್ಯ ಎಲಿಯಾಣ, ಹರಿಣಾಕ್ಷಿ ಕೇಮಜಾಲ್, ಶ್ವೇತಾ ಕೇಮಜಾಲ್, ಹೇಮಲತ ಕುಳೂರು, ರವಿರಾಜ್ ಚಿಗುರುಪಾದೆ, ಸತೀಶ್ ಚಿನಾಲ, ಉಷ ಆದರ್ಶನಗರ, ಶಕೀಲ ಕರಿಪ್ಪಾರ್, ಆಯಿಶ ಕುಳೂರು, ಕವಿತ ಎಲಿಯಾಣ, ಮಮತ ಆದರ್ಶನಗರ ಆಯ್ಕೆಯಾದರು.

ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಉಷಾ ಆದರ್ಶನಗರ, ಉಪಾಧ್ಯಕ್ಷೆಯಾಗಿ ಹೇಮಲತ ಕುಳೂರು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕವಿತ ಎಲಿಯಾಣ, ಶಕೀಲ ಕರಿಪ್ಪಾರ್, ಪ್ರತಿಭಾ ಕುಳಬೈಲು, ಸುಚರಿತ ಚಿನಾಲ, ಶ್ವೇತಾ ಕೇಮಜಾಲ್, ಅಶ್ವಿತ ಕೇಮಜಾಲ್, ಹರಿಣಾಕ್ಷಿ ಕೇಮಜಾಲ್, ವಿನೋದ ಸುಣ್ಣಾರ, ನಯನ ಕುಳೂರು, ಪ್ರೇಮಲತ ಕುಳೂರು ಆಯ್ಕೆಯಾದರು. ಪ್ರಿ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅನುಪಮ ಚಿನಾಲ ಆಯ್ಕೆಯಾದರು. ಶಿಕ್ಷಕಿ ಅಶ್ವಿನಿ ಎಂ ಸ್ವಾಗತಿಸಿ, ಶ್ವೇತ ಇ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net