ಬದ್ಧತೆಯಿರುವ ಸದಸ್ಯರ ಸೇವೆ ಅರ್ಥಪೂರ್ಣ : ವಸಂತ್ ಕುಮಾರ್

installation ceremony
ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಪದಗ್ರಹಣ ಸಮಾರಂಭ ಹಾಗೂ ಸ್ಥಾಪನಾ ದಿನಾಚರಣೆ ಮಂಚಿಯ ಲಯನ್ಸ್ ನಡೆಯಿತು. ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಸಂತ್ ಕುಮಾರ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಯೂಜಿನ್ ಲೋಬೋ ಮತ್ತಿತರರಿದ್ದರು.
Published on

ಬಂಟ್ವಾಳ: ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸ್ಥಾಪನಾ ದಿನಾಚರಣೆ ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ಲಯನ್ಸ್ ಕ್ಲಬ್‌ಗೆ ಸಾಮಾನ್ಯ ಸದಸ್ಯನಾಗಿ ಸೇರಿ ಬೇರೆ ಬೇರೆ ಅವಕಾಶಗಳನ್ನು ಬಳಸಿಕೊಂಡಾಗ ಉನ್ನತ ಹಂತಕ್ಕೆ ತಲುಪಲು ಸಾಧ್ಯವಿದೆ. ಅನೇಕ ಮಹನೀಯರು ಲಯನ್ಸ್ ಕ್ಲಬ್ನ್ನು ಮನ್ನಡೆಸಿಕೊಂಡು ಬಂದಿದ್ದಾರೆ. ಬದ್ಧತೆಯಿರುವ ಸದಸ್ಯರು ಕ್ಲಬ್‌ಗೆ ಸೇರ್ಪಡೆಯಾದಾಗ ಸೇವೆಗೆ ಅರ್ಥ ಬರುತ್ತದೆ ಎಂದರು.

ನೂತನ ಅಧ್ಯಕ್ಷರಾಗಿ ಯೋಗೀಶ್ ಆಳ್ವ, ಕಾರ್ಯದರ್ಶಿಯಾಗಿ ರಾಮಪ್ರಸಾದ್ ರೈ ತಿರುವಾಜೆ, ಕೋಶಾಧಿಕಾರಿಯಾಗಿ ಚಿತ್ತರಂಜನ್ ಕೆ.ಆರ್. ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಪ್ರಾಂತೀಯ ಅಧ್ಯಕ್ಷ ಯೂಜಿನ್ ಲೋಬೋ, ನೂತನ ಅಧ್ಯಕ್ಷ ಯೋಗೀಶ್ ಆಳ್ವ , ನಿರ್ಗಮನ ಅಧ್ಯಕ್ಷೆ ರಮಾ ಜಿ. ಆಚಾರ್ ಮಾತನಾಡಿದರು.

ಸ್ಥಾಪಕ ಸದಸ್ಯ ವಿಠಲ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸೇವಾ ಕಾರ್ಯಕ್ರಮದ ಅಂಗವಾಗಿ ಲಾನುಭವಿಗಳಿಗೆ ಆರ್ಥಿಕ ನೆರವಿನ ಚೆಕ್ ನೀಡಲಾಯಿತು. ಪದಗ್ರಹಣಾಕಾರಿ ವಸಂತ ಕುಮಾರ್ ಶೆಟ್ಟಿ, ನಿರ್ಗಮನ ಅಧ್ಯಕ್ಷೆ, ಕಾರ್ಯದರ್ಶಿ, ಕೋಶಾಧಿಕಾರಿಯನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳು ಹಾಗೂ ಬಾಲನಟ ತನ್ಮಯ್ ಅವರನ್ನು ಅಭಿನಂದಿಸಲಾಯಿತು. ವಲಯಾಧ್ಯಕ್ಷ ಸಂದೇಶ್ ಶೆಟ್ಟಿ, ನಿರ್ಗಮನ ಕಾರ್ಯದರ್ಶಿ ರಾಜಲಕ್ಷ್ಮೀ, ನಿರ್ಗಮನ ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ಉಪಸ್ಥಿತರಿದ್ದರು. ಇಬ್ಬರು ನೂತನ ಸದಸ್ಯರನ್ನು ಕ್ಲಬ್‌ಗೆ ಸೇರಿಸಿಕೊಳ್ಳಲಾಯಿತು.

ನಿರ್ಗಮನ ಅಧ್ಯಕ್ಷೆ ರಮಾ ಜಿ. ಆಚಾರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ರಾಮಪ್ರಸಾದ್ ರೈ ತಿರುವಾಜೆ ವಂದಿಸಿದರು. ಉಮಾನಾಥ ರೈ ಮೇರಾವು ಕಾರ್ಯಕ್ರಮ ನಿರೂಪಿಸಿದರು. ನಿಶ್ಚಲ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಖಂಡಿಗ, ರಮಾನಂದ ನೂಜಿಪ್ಪಾಡಿ, ಬಾಲಕೃಷ್ಣ ಸೆರ್ಕಳ, ಸಂತೋಷ್ ಡಿಸೋಜಾ ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net