ಕುಲ್ಕುಂದ ಶ್ರೀಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

Sub_OtteKola
Published on

ಸುಬ್ರಹ್ಮಣ್ಯ: ಕುಲ್ಕುಂದದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲ, ಬ್ರಹ್ಮಕಲಶಾಭಿಷೇಕದ ವಾರ್ಷಿಕೋತ್ಸವ ಸಂಪನ್ನಗೊಂಡಿತು.

ಸಂಜೆ ಭಂಡಾರ ತೆಗೆದ ಬಳಿಕ ಮೆರವಣಿಗೆ ನಡೆಯಿತು. ಮೇಲೇರಿಗೆ ಅಗ್ನಿಸ್ಪರ್ಶ ವೇಳೆ ಅಸಂಖ್ಯಾತ ಭಕ್ತರು ಎಣ್ಣೆ ಸಮರ್ಪಿಸಿ ಹರಕೆ ತೀರಿಸಿದರು. ರಾತ್ರಿ ಶ್ರೀ ದೈವದ ಕುಲ್ಚಾಟು ನಡಾವಳಿ ನಡೆದು ದೈವದ ಅಗ್ನಿಪ್ರವೇಶ ನೆರವೇರಿತು. ಮಾರಿಕಳ ಹಾಗೂ ದೈವದಲ್ಲಿ ಭಕ್ತರು ಅರಿಕೆ ನಿವೇದಿಸಿ, ಕಾಣಿಕೆ ಅರ್ಪಿಸಿದರು. ಗುಳಿಗ ದೈವದ ನಡಾವಳಿ ಜರುಗಿತು.

ದೈವಸ್ಥಾನದ ಪ್ರಧಾನ ಪೂಜಾರಿ ರಾಮಚಂದ್ರ ಮಣಿಯಾಣಿ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಗೌರವಾಧ್ಯಕ್ಷ ಎಂ. ಚಂದ್ರಹಾಸ ಭಟ್, ಕಾರ್ಯಾಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯದರ್ಶಿ ರಾಜೇಶ್ ಎನ್.ಎಸ್, ಸಂಚಾಲಕ ವೇಣುಗೋಪಾಲ ಎನ್.ಎಸ್, ಕೋಶಾಧಿಕಾರಿ ರತ್ನಾಕರ ಸುಬ್ರಹ್ಮಣ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ವೆಂಕಟ್ರಾಜ್, ಆಡಳಿತ ಸಮಿತಿ ಸದಸ್ಯರಾದ ಎಂ.ಹರೀಶ್ ಕಾಮತ್, ಗೋಪಾಲ ಮಲೆ, ರಾಜೇಶ್ ಕುಲ್ಕುಂದ, ಸುರೇಶ್ ಉಜಿರಡ್ಕ, ಕೃಷ್ಣ ಮಣಿಯಾಣಿ, ರಾಜೇಶ್ ಕಾಶಿಕಟ್ಟೆ, ನವೀನ್ ಮಣಿ, ವಿಮಲಾ ರಂಗಯ್ಯ, ರವಿ ಕಕ್ಕೆಪದವು, ಜಯಪ್ರಕಾಶ್ ಜಾಡಿಮನೆ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು. ಒತ್ತೆಕೋಲ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಾಸಕಿಯಿಂದ ಪ್ರಸಾದ ಸ್ವೀಕಾರ

ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಆಗಮಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಸಾದ ಸ್ವೀಕರಿಸಿದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕೆ., ಕುಕ್ಕೆ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಉದ್ಯಮಿಗಳಾದ ನಾಗೇಶ್ ಆಶ್ರಯ, ಸರ್ವೋತ್ತಮ ಕಾಮತ್ ಪ್ರಸಾದ ಸ್ವೀಕರಿಸಿದರು. ಕುಲ್ಚಾಟು ನಡಾವಳಿ ಸಂದರ್ಭ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಅಭಿಲಾಷ್, ನಿಕಟಪೂರ್ವ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್ ಎಂ.ಡಿ. ಆಗಮಿಸಿ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net