ಉಪ್ಪಳ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಪೈವಳಿಕೆ ಶಾಖೆಯ ಇಪ್ಪತ್ತನೇ ವಾರ್ಷಿಕ ಮಹಾಸಭೆ ಮತ್ತು ಗಣಪತಿ ಹವನ ಸಾಮೂಹಿಕ ಸತ್ಯನಾರಾಯಣ ಪೂಜೆ ಕುಲಾಲ ಸಮಾಜ ಮಂದಿರ ಕಾಯರ್‌ಕಟ್ಟೆಯಲ್ಲಿ ಜರಗಿತು.
ಪೈವಳಿಕೆ ಕುಲಾಲ ಸಂಘ ಅಧ್ಯಕ್ಷ ಬಾಬು ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಪುರುಷೋತ್ತಮ ಕುಲಾಲ್ ಕಲ್ಬಾವಿ, ಡಾ.ದುಗ್ಗಪ್ಪ ಕಜೆಕ್ಕಾರು, ಜಯಂತಿ ವಾಂತಿಜಾಲು, ಪುರುಷೋತ್ತಮ ಕೊಲ್ಯ, ಗಣೇಶ ಕೆ.ಟಿ, ರವೀಂದ್ರ ಮನ್ನಿಪಾಡಿ, ರಾಮಮೂಲ್ಯ ಅಂಗಡಿಮಾರು ಮುಂತಾದವರು ಮಾತನಾಡಿದರು.
ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಮಕ್ಕಳಿಗಾಗಿ ಪ್ರತಿಭಾ ಕಾರಂಜಿ, ಬಳಿಕ ನಾರಾಯಣ ಕುಲಾಲ್ ಗೂಳಿಮೂಲೆ ಅವರ ನಿರ್ದೇಶನದಲ್ಲಿ ರತಿ ಕಲ್ಯಾಣ ಎಂಬ ಯಕ್ಷಗಾನ ನಡೆಯಿತು.
ಲೀಲಾವತಿ ಟೀಚರ್, ಸದಾನಂದ ಕೊಡಂದೂರು, ಆನಂದ ಪೆರ್ಮುದೆ, ಶಂಕರ ಕುಂಜತ್ತೂರು, ಬಾಲಕೃಷ್ಣ ದೀಕ್ಷ, ತಿಮ್ಮಪ್ಪ ಕುಲಾಲ್ ತೆಂಕಮಜಲು, ರಾಮ ಬಂಗೇರ ಮೀಂಜ ಕೋರಿಕಾರು, ಸೀನ ಮಾಸ್ತರ್, ಡಾ.ಯೋಗೀಶ್, ಐತಪ್ಪ ಮಾಸ್ತರ್ ಬಂಗಳೆ, ವಿಶ್ವನಾಥ, ಶ್ರೀಧರ ಕನಿಯಾಲ ಮುಂತಾದವರು ಉಪಸ್ಥಿತರಿದ್ದರು. ರಾಮಚಂದ್ರ ಪಿಲಿಂಗುರಿ ವರದಿ ಮಂಡಿಸಿದರು. ಸದಾನಂದ ಅಮ್ಮೇರಿ ಸ್ವಾಗತಿಸಿ, ಯಶವಂತ ವಂದಿಸಿದರು.