ಆತ​ ಮುಂಚಿನಂತಿಲ್ಲ ಹಣ, ಖ್ಯಾತಿ ಬಂದ ಬಳಿಕ ಸಾಕಷ್ಟು ಬದಲಾದ; ಕೊಹ್ಲಿ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ಟೀಮ್​ ಇಂಡಿಯಾ ಆಟಗಾರ

Virat Kohli
Published on

ನವದೆಹಲಿ: ಟೀಮ್​ ಇಂಡಿಯಾ ಮಾಜಿ ನಾಯಕ, ರನ್​ ಮೆಷಿನ್​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ ಮೈದಾನದಲ್ಲಿ ತಮ್ಮ ಅಗ್ರೆಷನ್​ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಆಗಿಂದಾಗಿ ಸುದ್ದಿಯಾಗುತ್ತಿರುತ್ತಾರೆ. ಟೀಮ್​ ಇಂಡಿಯಾ ನೂತನ ಕೋಚ್​ ಗೌತಮ್​ ಗಂಭೀರ್​ ಹಾಗೂ ವಿರಾಟ್​ ಕೊಹ್ಲಿ ಮೈದಾನದಲ್ಲಿ ಪ್ರತಿ ಬಾರಿ ಎದುರಾದಾಗಲೂ ಜಗಳವಾಡಿಕೊಂಡಿದ್ದಾರೆ. ಈ ವಿಚಾರ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಈ ಬಗ್ಗೆ ಮಾತನಾಡಿರುವ ಟೀಮ್​ ಇಂಡಿಯಾ ಆಟಗಾರ ಅಮಿತ್​ ಮಿಶ್ರಾ ಪರೋಕ್ಷವಾಗಿ ವಿರಾಟ್​ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ. ಈ ಸುದ್ದು ಸಖತ್​ ವೈರಲ್​ ಆಗುತ್ತಿದೆ.

ಈ ಕುರಿತು ಮಾತನಾಡಿರುವ ಅಮಿತ್​ ಮಿಶ್ರಾ, 2023ರಲ್ಲಿ ಬೆಂಗಳೂರಿನಲ್ಲಿ ನಡೆದ ಲಖನೌ ಹಾಗೂ ಆರ್​ಸಿಬಿ ನಡುವಿನ ಪಂದ್ಯದಲ್ಲಿ ವೇಗಿ ನವೀನ್​ ಉಲ್​ ಹಕ್​ ಹಾಗೂ ಗೌತಮ್​ ಗಂಭೀರ್​ ಜೊತೆಗೆ ವಿರಾಟ್​ ಜಗಳವಾಡಿದರು. ಆ ಬಳಿಕ ಮೂವರಿಗು ದಂಡ ವಿಧಿಸಲಾಗಿತ್ತು. ಆ ಬಳಿಕ ಮೂವರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿಕೊಂಡು ಮಾತನಾಡಲು ಶುರು ಮಾಡಿದರು. ಆದರೆ, ಅಂದು ಕೊಹ್ಲಿ ಆಡಿದ ಮಾತುಗಳು ನನಗೆ ಈಗಲೂ ನೆನಪಿದೆ.

ವಿರಾಟ್​ ಆಟವಾಡುವ ವೇಳೆ ಎದುರಾಳಿ ತಂಡದ ಆಟಗಾರರನ್ನು ನಿಂದಿಸಲು ಶುರು ಮಾಡದನು. ಕೈಲ್​ ಮೇಯರ್ಸ್​, ನವೀನ್​ ಉಲ್​ ಹಕ್​ ಅವರಿಗೆ ಅಸಹ್ಯಕರ ಸಹ್ನೆಗಳನ್ನು ತೋರಿಸಿದ. ವಿರಾಟ್​ ಹೆಚ್ಚು ಖ್ಯಾತಿ ಗಳಿಸಿದಂತೆ ಆತನ ನಡವಳಿಕೆಯಲ್ಲಿ ಮತ್ತು ಬೇರೆಯವರನ್ನು ನೋಡುವ ರೀತಿಯಲ್ಲಿ ಸಾಕಷ್ಟು ಬದಲಾಗಿದೆ. ನಾನು ಈ ವಿಚಾರವಾಗಿ ಅವನ ಜೊತೆ ಮಾತನಾಡುವುದನ್ನು ಬಿಟ್ಟಿದ್ದೇನೆ.

ನಾನು ಭಾರತ ತಂಡದಲ್ಲಿ ಆಡಿ ಹಲವು ದಿನಗಳಾಗಿವೆ. ಐಪಿಎಲ್ ವೇಳೆ ರೋಹಿತ್ ಅವರನ್ನು ಭೇಟಿಯಾದರೆ ಅವರು ನನ್ನೊಂದಿಗೆ ಬಹಳ ತಮಾಷೆ ಮಾಡ್ತಾರೆ. ತುಂಬಾ ಆತ್ಮೀಯವಾಗಿ ವರ್ತಿಸುತ್ತಾರೆ, ಒಬ್ಬರ ಮೇಲೆ ಒಬ್ಬರು ಜೋಕ್ ಮಾಡಿಕೊಳ್ಳತ್ತೇವೆ. ಆತ ಸ್ಟಾರ್ ಪ್ಲೇಯರ್ ಆದರೂ ಆತನೊಂದಿಗೆ ರ್ಯಾಪೋ ಅದೇ ರೀತಿ ಇದೆ. ವಿಶ್ವಕಪ್ ಜೊತೆ ಹಲವು ಟೂರ್ನಿಗಳಲ್ಲಿ ಟ್ರೋಫಿ ಗೆದ್ದ ನಾಯಕರಾಗಿದ್ದಾರೆ.

ವಿರಾಟ್ ಕೊಹ್ಲಿ ಮಾತ್ರ ಬಹಳ ಬದಲಾವಣೆ ಆಗಿದ್ದಾರೆ. ನಾವು ಇಬ್ಬರು ಮಾತನಾಡದೆ ಬಹಳ ದಿನ ಆಗಿದೆ. ಫೇಮ್, ಪವರ್ ಬಂದ ಮೇಲೆ ಕೊಹ್ಲಿ ಸ್ನೇಹಿತರನ್ನು ಕಾರಣ ಇಲ್ಲದೆಯೇ ಮರೆತು ಹೋಗಿದ್ದಾರೆ. ಆದರೆ ನಾನು ಅಂತಹ ವ್ಯಕ್ತಿ ಅಲ್ಲ. 14 ವರ್ಷದಿಂದ ನನಗೆ ಚೀಕು ಗೊತ್ತು, ಆತ ಸಮೋಸ, ರಾತ್ರಿ ವೇಳೆ ಪಿಜ್ಜಾ ತಿನ್ನುತ್ತಿದ್ದ. ಕೊಹ್ಲಿಗೂ, ಚೀಕುಗೂ ಬಹಳ ವ್ಯತ್ಯಾಸ ಇದೆ. ಇಬ್ಬರು ಎದುರಾದ ವೇಳೆ ನನ್ನೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಾರೆ, ಆದರೆ, ಆತ ನಮ್ಮೊಂದಿಗೆ ಚೀಕು ಆಗಿ ಇರೋದಿಲ್ಲ ಎಂದು ಕ್ರಿಕೆಟಿಗ ಅಮಿತ್​​ ಮಿಶ್ರಾ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net