

ಬೆಂಗಳೂರು: ಇಂದು(ಅ.17) ದಿ. ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ 'ಕ್ಷತ್ರಿಯ' ಸಿನಿಮಾ ತಂಡ ಚಿರು ಅಭಿಮಾನಿಗಳಿಗೆ ನಂಬಲಾಗದ ಸರ್ಪ್ರೈಸ್ ಕೊಟ್ಟಿದೆ.
ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಸಾವಿಗೂ ಮೊದಲೇ ಚಿರು ಅನುಭವಿಸಿದ್ದರು..! ಸಂಭ್ರಮದಲ್ಲಿ ಕೇಕ್ ತಿನ್ನಿಸಿದ್ದಾರೆ ಚಿರು... ಮಗುವನ್ನ ಮುದ್ದಾಡಿರುವ ಝಲಕ್ನಲ್ಲಿ ಕಾಣಿಸಿಕೊಂಡಿದ್ದಾರೆ ಯುವ ಸಾಮ್ರಾಟ್. ರಿಯಲ್ ಲೈಫ್ನಲ್ಲಿ ಚಿರು ಅನುಭವಿಸಲಾಗದ್ದು ರೀಲ್ ನಲ್ಲಿ ಆಗಿದೆ. ಈ ದೃಶ್ಯಗಳು ಮನಕಲಕುವಂತಿವೆ.
ನಟ ಚಿರಂಜೀವಿ ಸರ್ಜಾಗೆ ಇಂದು 36ನೇ ಹುಟ್ಟುಹಬ್ಬ. ಬರ್ತ್ಡೇ ಪ್ರಯುಕ್ತ ಚಿರು ನಟನೆಯ ‘ಕ್ಷತ್ರಿಯ’ ಸಿನಿಮಾದ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ, 'ನಮ್ಮೊಂದಿಗೆ, ನಿಮ್ಮೊಂದಿಗೆ, ಎಂದೆಂದಿಗೂ ಇರೋ ಚಿರಂಜೀವಿ ಸರ್ಜಾ ಚಿರಂಜೀವಿನೇ' ಎಂದು ಹೇಳಿದೆ.
ಚಿರು ಇಲ್ಲದ ಮೊದಲ ವರ್ಷದ ಜನ್ಮದಿನವನ್ನು ಕುಟುಂಬಸ್ಥರು ಆಚರಿಸಿದ್ದಾರೆ. ಚಿರು ಇದ್ದಿದ್ದರೆ ಇಂದಿಗೆ 35 ವರ್ಷ ಪೂರೈಸಿ 36ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಇಂದೇ ಜೂ.ಚಿರು ನಿರೀಕ್ಷೆಯಲ್ಲಿ ಸರ್ಜಾ ಕುಟುಂಬ ಇದೆ.