PHOTO GALLERY| ಚಿರು ಫೋಟೋ ಇಟ್ಟುಕೊಂಡು ಸೀಮಂತ ಶಾಸ್ತ್ರ ಮಾಡಿಸಿಕೊಂಡ ಮೇಘನಾ ರಾಜ್​

meghana raj chiranjeevi sarja
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದಿ. ಚಿರಂಜೀವಿ ಸರ್ಜಾರ ಪತ್ನಿ ಮೇಘನಾ ರಾಜ್​ ಅವರಿಗೆ ಭಾನುವಾರ ಸೀಮಂತ ಶಾಸ್ತ್ರ ನಡೆದಿದೆ. ಮೇಘನಾ ತುಂಬು ಗರ್ಭಿಣಿ. ಎರಡೂ ಕುಟುಂಬಗಳು ಚಿರು ಅಗಲಿಕೆಯ ನೋವಿನಲ್ಲಿದ್ದು, ಸರಳವಾಗಿ ಸೀಮಂತ ಶಾಸ್ತ್ರ ನೆರವೇರಿಸಲಾಗಿದೆ. ಕುಟುಂಬದ ಆಪ್ತರಷ್ಟೇ ಶುಭ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಚಿರು ಮತ್ತು ಮೇಘನಾ ಇಬ್ಬರೂ 2018ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡೇ ವರ್ಷಕ್ಕೆ ಅಂದರೆ 2020ರ ಜೂನ್​ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಅಂದಿನಿಂದ ದುಃಖದ ಮಡುವಿನಲ್ಲೇ ಇರುವ ಎರಡೂ ಕುಟುಂಬ ಚಿರು ಮಗುವಿನ ಆಗಮನಕ್ಕಾಗಿ ಕಾಯುತ್ತಿದೆ.

ಪತಿಯ ದೊಡ್ಡ ಕಟೌಟ್​ ಅನ್ನು ಪಕ್ಕದಲ್ಲೇ ಇಟ್ಟುಕೊಂಡು ಮೇಘನಾ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಆ ಮೂಲಕ ಚಿರು ತನ್ನ ಜತೆಯಲ್ಲೇ ಇದ್ದಾರೆ ಎಂದು ಭಾವಿಸಿದ್ದಾರೆ. ಮೇಘನಾರ ಸೀಮಂತ ಶಾಸ್ತ್ರದ ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net