ರಾಜೀನಾಮೆ ನೀಡುವ ಮುನ್ನ ಸಿಎಂಗೆ ಕರೆ ಮಾಡಿದ್ದ ಈಶ್ವರಪ್ಪ; ಹೊರಬಿತ್ತು ಸ್ಫೋಟಕ ಮಾಹಿತಿ

eswarappa
Published on

ಬೆಂಗಳೂರು: ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಕೆ.ಎಸ್​ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಅವರು, ಈಶ್ವರಪ್ಪ ನವರು ಸಂಜೆ ನನಗೆ ಕರೆ ಮಾಡಿದ್ದರು. ಬಹಳ ಯೋಚನೆ ಮಾಡಿದ್ದು, ನನಗೆ ಇದರಲ್ಲಿ ಸಂಪೂರ್ಣ ವಿಶ್ವಾಸ ಇದೆ. ಎಳ್ಳು ಕಾಳಷ್ಟು ಪಾತ್ರ ಇಲ್ಲ, ತಪ್ಪಿಲ್ಲ ಎಂದು ಹೇಳಿದರು.

ಆದ್ರೆ ಈಗ ಅದರಿಂದ ಇರುಸು-ಮುರುಸು ಆಗುತ್ತೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಎಲ್ಲರೂ ಮಾತಾಡ್ತಾರೆ. ಸತ್ಯ ಹೊರಬರುವವರೆಗು ಈ ಸ್ಥಾನದಲ್ಲಿ ಇರಲ್ಲ ಎಂದು ಹೇಳಿ ರಾಜೀನಾಮೆ ನೀಡಿದ್ದಾರೆ ಎಂದರು.
ಕಾಂಗ್ರೆಸ್​​​ನವರ ಬೇಡಿಕೆಗೆ ರಾಜೀನಾಮೆ ನೀಡಿಲ್ಲ, ಸ್ವತ ಈಶ್ವರಪ್ಪ ಅವರೇ ನೈತಿಕ ಜವಾಬ್ದಾರಿ ಹೊತ್ತು ನೀಡಿದ್ದಾರೆ. ಹೈಕಮಾಂಡ್​​ನಿಂದ ಒತ್ತಡ ಇರಲಿಲ್ಲ ಎಂದು ಸಿಎಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net