

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದ್ದು, ಈಶ್ವರಪ್ಪರ 'ತಲೆದಂಡ'ಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಮೃತನ ಕುಟುಂಬಕ್ಕೆ ನ್ಯಾಯ ಕೊಡಬೇಕು, ಸಚಿವ ಈಶ್ವರಪ್ಪರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಇದೀಗ ಈ ಕೇಸ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಂಟ್ರಿಕೊಟ್ಟಿದ್ದು, ಸೋಮವಾರ ಸ್ಫೋಟಕ ರಹಸ್ಯ ಬಿಚ್ಚಿಡುವುದಾಗಿ ಹೇಳಿದ್ದಾರೆ.
ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ಸಿಡಿ ತಯಾರಿಸಿದವರೇ ಸಂತೋಷ್ ಕೇಸ್ನಲ್ಲೂ ಇನ್ವಾಲ್ ಆಗಿದ್ದಾರೆ. ಅವರು ಗೋಮುಖ ವ್ಯಾಘ್ರದಂತಿದ್ದು, ಸತ್ಯ ಹರಿಶ್ಚಂದ್ರನ ಮಕ್ಕಳಂತೆ ಟಿವಿ ಮುಂದೆ ಪೋಸ್ ಕೊಡ್ತಿದ್ದಾರೆ. ಸಿಡಿ ಕೇಸ್ ಹಾಗೂ ಯಡಿಯೂರಪ್ಪನವರ ಕೇಸ್ ಎರಡನ್ನೂ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು. ನಮ್ಮ ಹೈಕಮಾಂಡ್ನಿಂದ ಅನುಮತಿ ಪಡೆದು ನಾನು ಸೋಮವಾರ 11 ಗಂಟೆಗೆ ಗೋಕಾಕದಲ್ಲಿ ಪ್ರೆಸ್ಮೀಟ್ ನಡೆಸುವೆ. ಅಂದು ಡಿಟೇಲ್ ಆಗಿ ಮಾತಾಡುವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.