ಮುದುಕನಾದರೂ ಕ್ಯೂಟ್​ ಹುಡುಗನ ಪಾತ್ರ ಮಾಡಿದರೆ ಯಾರು ನೋಡ್ತಾರೆ? ಕೆಆರ್​ಕೆ ಪ್ರಶ್ನೆ

Sharukh Khan - KRK - Final
Published on

ಮುಂಬೈ: ಬಾಲಿವುಡ್​ನ ಸ್ವಯಂಘೋಷಿತ ನಂಬರ್​ ಒನ್​ ವಿಮರ್ಶಕ ಕಮಾಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ, ಎಲ್ಲ ಸ್ಟಾರ್​ ನಟರ ಕಾಲೆಳೆಯುತ್ತಲೇ ಇರುತ್ತಾರೆ. ಅದರಲ್ಲೂ ಶಾರೂಖ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಅವರನ್ನು ಒಂದಲ್ಲ ಒಂದು ಕಾರಣಕ್ಕೆ ಹೀಯಾಳಿಸುತ್ತಲೇ ಇರುವ ಕೆಆರ್​ಕೆ, ಅದೇ ಕಾರಣಕ್ಕೆ ಸಾಕಷ್ಟು ಜನಪ್ರಿಯತೆಯನ್ನೂ ಪಡೆದಿದ್ದಾರೆ.

ಇದೀಗ ಶಾರೂಖ್​ ಖಾನ್ ಅವರನ್ನು ಕೆಆರ್​ಕೆ ಮತ್ತೆ ಕಾಲೆಳೆದಿದ್ದಾರೆ. ಶಾರೂಖ್​ ಖಾನ್​ ಮುದುಕ, ಅವರಿಗೆ ಯಾವ ರೀತಿಯ ಪಾತ್ರಗಳನ್ನು ಮಾಡಬೇಕೆಂಬುದೇ ಗೊತ್ತಿಲ್ಲ ಎಂದು ಹೀಯಾಳಿಸಿದ್ದಾರೆ. ಅದಕ್ಕೆ ಕಾರಣ, ಶಾರೂಖ್​ ಖಾನ್​ ಇತ್ತೀಚೆಗೆ ಒಪ್ಪಿಕೊಂಡಿರುವ ಒಂದಿಷ್ಟು ಹೊಸ ಚಿತ್ರಗಳು. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಒಂದು ಚಿತ್ರದಲ್ಲಿ ಶಾರೂಖ್​​ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಇದಕ್ಕೆ ಕಾರಣವಾಗಿದೆ.

ಈ ಕುರಿತು ಟ್ವೀಟ್​ ಮಾಡಿರುವ ಕೆಆರ್​ಕೆ, 'ಶಾರೂಖ್​ ಯಾಕೆ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವಿಷಯವೇ ಅರ್ಥವಾಗುವುದಿಲ್ಲ. ಅಟ್ಲಿಗೆ ಹಿಂದಿ ಪ್ರೇಕ್ಷಕರ ಅಭಿರುಚಿ ಗೊತ್ತಿಲ್ಲ. ಶಾರೂಖ್​ ಸಮಸ್ಯೆ ಏನು ಗೊತ್ತಾ? ಅವರು ಕಥೆಗಳನ್ನು ನಂಬುವುದಕ್ಕಿಂತ ಹೆಚ್ಚಾಗಿ ತಂತ್ರಜ್ಱರನ್ನು ನಂಬುತ್ತಾರೆ. 'ಪಠಾಣ್​' ತರಹದ ಚಿತ್ರಗಳಲ್ಲಿ ನಟಿಸಿದರೆ, ಜನ ಇಷ್ಟಪಡುವುದಿಲ್ಲ ಎಂದು ಶಾರೂಖ್​ ಖಾನ್​ಗೆ ಗೊತ್ತಿಲ್ಲ' ಎಂದು ಕೆಆರ್​ಕೆ ಹೇಳಿದ್ದಾರೆ.

'ಎಲ್ಲ ಸ್ಟಾರ್​ಗಳು ಮಾಡುವ ತಪ್ಪುಗಳನ್ನೇ ಶಾರೂಖ್​ ಸಹ ಪದೇಪದೇ ಮಾಡುತ್ತಿದ್ದಾರೆ. ಅವರಿಗೆ 56 ವರ್ಷವಾಗಿದೆ. ಮುದುಕನಾದರೂ ಅವರಿಗೆ ಇನ್ನೂ ಕ್ಯೂಟ್​​ ಹುಡುಗನ ಪಾತ್ರಗಳನ್ನು ಮಾಡುವ ಆಸೆ. ಅದೆಲ್ಲ ಜನರಿಗೆ ಇಷ್ಟವಾಗುವುದಿಲ್ಲ ಎಂಬ ವಿಷಯ ಅವರಿಗೆ ಅರ್ಥವಾಗುವುದಿಲ್ಲ. ಬಾಲಿವುಡ್​ ನಟಿರಿಗೆ ಚಿಕ್ಕ ಹುಡುಗಿಯರ ಜತೆಗೆ ಕ್ಯೂಟ್​ ಹುಡುಗ ಪಾತ್ರ ಮಾಡುವ ಅಭ್ಯಾಸವಾಗಿ ಬಿಟ್ಟಿದೆ. ಅದರಿಂದ ಅವರು ಆಚೆಗೇ ಬರುವುದಿಲ್ಲ' ಎಂದು ಕೆಆರ್​ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಟ್ವೀಟ್​ಗಳಿಗೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net