24 ಕ್ಯಾರೆಟ್ ಗೋಲ್ಡ್ ಸೀರೆಯಲ್ಲಿ ಕಾಣಿಸಿಕೊಂಡ ನಟಿ ಕೃತಿ ಸನೋನ್

Kriti Sanon
Published on

ಮುಂಬೈ: ಬಹುನಿರೀಕ್ಷಿತ ಸಿನಿಮಾವಾದ ಆದಿಪುರುಷ ಚಿತ್ರದ ಟ್ರೈಲರ್ ಮುಂಬೈನಲ್ಲಿ ಬಿಡುಗಡೆಯಾಯಿತು. ಟ್ರೇಲರ್ ಲಾಂಚ್ ಕಾರ್ಯಕ್ರಮವೊಂದರಲ್ಲಿ ನಟಿ ಕೃತಿ ಸನೋನ್ ಕಾಣಿಸಿಕೊಂಡಿರುವುದು ನೆಟ್ಟಿಗರನ್ನು ಸೆಳೆಯುತ್ತಿದೆ.

ಕೃತಿ ಸನೋನ್​ ಅವರು ಧರಿಸಿದ ಸೀರೆ ತುಂಬ ವಿಶೇಷವಾಗಿದೆ. ಈ ಸೀರೆಯ ಬಾರ್ಡರ್​ನಲ್ಲಿ 24 ಕ್ಯಾರೆಟ್​ ಗೋಲ್ಡ್​ ಇದೆ. ವಿನ್ಯಾಸಕಾರರಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಡಿಸೈನ್ ಮಾಡಿದ್ದ ಸೀರೆ ಅದಾಗಿತ್ತು. ಈ ಸೀರೆ ಧರಿಸಿ ಬಂದಿದ್ದ ಕೃತಿ ಸನೋನ್​ ಅವರು ಎಲ್ಲರ ಗಮನ ಸೆಳೆದರು. ಅವರ ಫೋಟೋಗಳು ವೈರಲ್​ ಆಗಿವೆ.

ಕೃತಿ ಧರಿಸಿದ್ದ ಸೀರೆ 'ಜರ್ಡೋಜಿ ಬಾರ್ಡರ್‌ನೊಂದಿಗೆ ಮಿಶ್ರಿತ ಬಿಳಿ ಖಾದಿ ಸೀರೆ ಮತ್ತು 24-ಕ್ಯಾರೆಟ್ ಚಿನ್ನದ ವಿಂಟೇಜ್ ಕೇರಳದ ಕಾಟನ್ ಸೀರೆ ಇದಾಗಿದೆ' ಎಂದು ಡಿಸೈನರ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಬಹುಬೇಡಿಕೆಯ ನಟಿಯಾಗಿ ಕೃತಿ ಸನೋನ್​ ಗುರುತಿಸಿಕೊಂಡಿದ್ದಾರೆ. ‘ಆದಿಪುರುಷ್​’ ಚಿತ್ರದಲ್ಲಿ ಅವರು ನಟಿಸಿದ್ದು, ಅದರ ಬಿಡುಗಡೆಗಾಗಿ ಅಭಿಮಾನಿಗಳು ಕಾದಿ​ದ್ದಾರೆ. ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಭಗವಾನ್ ರಾಮನಾಗಿ ಮತ್ತು ಕೃತಿ ಸನೋನ್ ಸೀತಾ ದೇವಿಯಾಗಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net