More

    ಲಕ್ಷ..ಲಕ್ಷ ಬೆಲೆ ಬಾಳುತ್ತದೆ ಕೃತಿ ಸನೋನ್ ಕೈಲಿರುವ ಬ್ಯಾಗ್​

    ಮುಂಬೈ: ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಬಗ್ಗೆ ಪ್ರತಿಯೊಂದು ವಿಷಯವನ್ನು ತಿಳಿದೊಕೊಳ್ಳಲು ಕಾಯುತ್ತಿರುತ್ತಾರೆ. ಇದಕ್ಕೆ ತಕ್ಕಂತೆ ಸಿನಿಮಾ ತಾರೆಯರು ತಾವು ಮಾಡುವ ಕೆಲಸಗಳು, ಧರಿಸುವ ಉಡುಪು ಇತ್ಯಾದಿ ವಿಷಯಗಳಿಂದ ಅಭಿಮಾನಿಗಳ ಗಮನಸೆಳೆಯತ್ತಿರುತ್ತಾರೆ. ಇದೀಗ ಬಾಲಿವುಡ್ ನಟಿ ಕೃತಿ ಸನೋನ್ ಚಳಿಗಾಲದ ಉಡುಪು ಧರಿಸಿ, ದುಬಾರಿ ಬೆಲೆಯ ಬ್ಯಾಗ್​ ಕೈಯಲ್ಲಿ ಹಿಡಿದು ವಿಮಾನ ನಿಲ್ದಾಣದಲ್ಲಿ ಕ್ಯಾಮರಾಗೆ ಪೋಸ್ ನೀಡಿ ನೋಡುಗರಲ್ಲಿ ಅಚ್ಚರಿ ಮೂಡಿಸಿದ್ದಾರೆ.

    ತಮ್ಮ ನಟನೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಪ್ರತಿಭಾವಂತ ನಟಿ ಕೃತಿ ಸನೋನ್ ತಮ್ಮ ವಿಶೇಷ ಹಾಗೂ ಸೊಗಸಾದ ಫ್ಯಾಶನ್​​ಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಬೆಳ್ಳಂಬೆಳಗ್ಗೆಯೇ ಮುಂಬೈನ ಏರ್​​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಹಸಿರು ಬಣ್ಣದ ಉಲ್ಲನ್​​ನಿಂದ ಹೆಣೆದ ತುಂಬುತೋಳಿನ ಸ್ವೆಟರ್ ಧರಿಸಿದ್ದು, ತಿಳಿ ನೀಲಿ ಬಣ್ಣದ ಡೆನಿಮ್ ಜೀನ್ಸ್‌ ಧರಿಸಿದ್ದಾರೆ.

    ಚಳಿಗಾಲದ ಉಡುಪು ಧರಿಸಿ ವಿಮಾನ ನಿಲ್ದಾಣದಲ್ಲಿ ಮಿಂಚಿದ ಕೃತಿ ಸನೋನ್, ಎಲ್ಲರ ಗಮನ ಸೆಳೆದಿದ್ದು ಕೃತಿ ಅವರ ಡ್ರೆಸ್​​. 2.36 ಲಕ್ಷ ರೂ. ಮೌಲ್ಯದ ಲೂಯಿ ವಿಟಾನ್ ಬ್ಯಾಗ್. ಚಳಿಗಾಲ ಸಮೀಪಿಸುತ್ತಿದ್ದಂತೆ ಸಖತ್​​ ಸರಳ ಉಡುಗೆಯಲ್ಲಿ ಕೃತಿ ಸನೋನ್​​ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

    ಉಡುಪಿನ ಆಕರ್ಷಣೆಯನ್ನು ಹೆಚ್ಚಿಸಲು ನಟಿ  ದುಬಾರಿ ಲೂಯಿ ವಿಟಾನ್ ಲೂಪ್ ಹೋಬೋ ರಿವರ್ಸ್ ಮೊನೊಗ್ರಾಮ್ ಕ್ಯಾನ್ವಾಸ್ ಬ್ಯಾಗ್ ಅನ್ನು ಆಯ್ಕೆ ಮಾಡಿದರು. 2,36,000 ರೂ. ಚಿನ್ನದ ಬಣ್ಣದ ಹಾರ್ಡ್‌ವೇರ್‌ನೊಂದಿಗೆ ಅರ್ಧ ಚಂದ್ರನ ಆಕಾರದ ಕ್ಲಾಸಿ ಬ್ಯಾಗ್ ಮತ್ತು ಅದರ ಮೇಲೆ ಬ್ರ್ಯಾಂಡ್‌ನ ಐಕಾನಿಕ್ ಮೊನೊಗ್ರಾಮ್ ಮಾದರಿಯೊಂದಿಗೆ ಹೊಂದಾಣಿಕೆ ಮಾಡಬಹುದಾದ ಚರ್ಮದ ಪಟ್ಟಿ ಇದೆ. ಈ ಬ್ಯಾಗ್​ ನೋಡಿದ ಅಭಿಮಾನಿಗಳು ಬ್ಯಾಗ್​ ಬೆಲೆಯನ್ನು ಅಂತರ್​ಜಾಲದಲ್ಲಿ ಹುಡುಕಾಡಿದ್ದಾರೆ. ನಂತರ ಈ ಬ್ಯಾಗ್​ನ ಬೆಲೆ ತಿಳಿದು ಇಷ್ಟೊಂದು ದುಬಾರಿ ನಾ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

    ಕೃತಿ ಸನೋನ್ ಬಾಲಿವುಡ್ ನಲ್ಲಿ ನಂಬರ್ ಒನ್ ನಾಯಕಿಯಾಗಿ ವಿಶೇಷ ಮನ್ನಣೆ ಪಡೆದರು. ಇತ್ತೀಚೆಗೆ ಆದಿಪುರುಷ ಚಿತ್ರದಲ್ಲಿ ಕೃತಿ ಸನನ್ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಆದಿಪುರುಷ ಸಿನಿಮಾ ಹೇಳಿಕೊಳ್ಳುವ ಸಕ್ಸಸ್ ನೀಡಲಿಲ್ಲ. ಸಾಲು ಸಾಲು ಸಿನಿಮಾಗಳು ಫ್ಲಾಪ್ ಆದ್ರೂ ಕೃತಿ ಆದಾಯ ಕಡಿಮೆ ಆಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts