More

  ಅಂತಾರಾಷ್ಟ್ರೀಯ ಐಷಾರಾಮಿ ಫ್ಯಾಷನ್ ಕಂಪನಿಗೆ ರಾಯಭಾರಿಯಾದ ನಟಿ ಕೃತಿ ಸನನ್​

  ಮುಂಬೈ: ರಾಷ್ಟ್ರ ಪ್ರಶಸ್ತಿ ವಿಜೇತೆ, ಬಾಲಿವುಡ್​ ಬ್ಯೂಟಿ ಕೃತಿ ಸನನ್ ಇದೀಗ ಅಂತಾರಾಷ್ಟ್ರೀಯ ಐಷಾರಾಮಿ ಫ್ಯಾಷನ್ ಕಂಪನಿಯೊಂದಕ್ಕೆ ರಾಯಭಾರಿಯಾದ ಸುದ್ದಿ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.

  ಇದನ್ನೂ ಓದಿ: ರಷ್ಯಾದ ಪ್ಸ್ಕೋವ್ ನಗರದ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ, 4 ವಿಮಾನಗಳಿಗೆ ಹಾನಿ

  69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 ರಲ್ಲಿ ‘ಮಿಮಿ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದ ಕೃತಿ ಸನನ್​, ತಮ್ಮ ಅಭಿಮಾನಿಗಳು ಸೇರಿದಂತೆ ಕುಟುಂಬದವರಿಗೆ, ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದರು. 2021 ರಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಗೊಂಡ ಈ ಚಿತ್ರದಲ್ಲಿ ಕೃತಿ ನಟನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಅಂತಾರಾಷ್ಟ್ರೀಯ ಬ್ರ್ಯಾಂಡ್​ವೊಂದಕ್ಕೆ ಬ್ರಾಂಡ್ ಅಂಬಾಸಿಡರ್​ ಆಗುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

  ಇದನ್ನೂ ಓದಿ: ಮದ್ಯ ಸೇವಿಸಿ ವಿದ್ಯಾರ್ಥಿಗಳಿಗೆ ನಿಂದನೆ; ಶಾಲಾ ಶಿಕ್ಷಕ ಅಮಾನತು

  ಗಿಯಾನಿ ವರ್ಸೇಸ್ ಸ್ಥಾಪಿಸಿದ ಇಟಾಲಿಯನ್ ಐಷಾರಾಮಿ ಫ್ಯಾಷನ್ ಕಂಪನಿಯಾದ ‘ವರ್ಸೇಸ್‌’ಗೆ ಕೃತಿ ಸನನ್​, ಭಾರತೀಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡ ನಟಿ, ಮಿಲನ್‌ನಲ್ಲಿ ನಡೆದ ಫಾಲ್-ವಿಂಟರ್ 2023 ಕಾರ್ಯಕ್ರಮದ ವೇಳೆ ಧರಿಸಿದ್ದ ಕಪ್ಪು ಉಡುಪನ್ನು ಪೋಸ್ಟ್​ ಮಾಡುವ ಮುಖೇನ ತಿಳಿಸಿದ್ದಾರೆ,(ಏಜೆನ್ಸೀಸ್). 

  ತಲೈವಾ ನಟನೆಯ ‘ಜೈಲರ್’​ ಒಟಿಟಿಗೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts