ಪರಕ್ಕಿಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ : ವೇಷಧಾರಿ ಮಕ್ಕಳ ಶೋಭಾಯಾತ್ರೆ

New Project (4)
Published on

ಮಧೂರು: ಪರಕ್ಕಿಲದಲ್ಲಿ ತರುಣ ಕಲಾವೃಂದ ನೇತೃತ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶ್ರೀಕೃಷ್ಣ-ರಾಧಾ ವೇಷಧಾರಿ ಮಕ್ಕಳ ಶೋಭಾಯಾತ್ರೆ ನಡೆಯಿತು. ತರುಣ ಕಲಾವೃಂದ ಅಧ್ಯಕ್ಷ ರಾಮಕಿಶೋರ್ ಆಸ್ರ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು. ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು.

ಆಯುರ್ವೇದ ವೈದ್ಯೆ ಡಾ.ಪಲ್ಲವಿ ಹಾಗೂ ಕರ್ನಾಟಕ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರನ್, ವಕೀಲ ಬಾಲಕೃಷ್ಣ ನಾಯರ್ ಶುಭಾಶಂಸನೆಗೈದರು. ನಿವೃತ್ತ ತಹಸೀಲ್ದಾರ್ ಬಾಲಕೃಷ್ಣ ಉಳಿಯ, ತರುಣ ಕಲಾವೃಂದ ಮಹಿಳಾ ಸಮಿತಿ ಅಧ್ಯಕ್ಷೆ ದೀಪ ಉಳಿಯ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ., ಪ್ಲಸ್ ಟು ಮತ್ತು ಪದವಿ ಪರೀಕ್ಷೆಗಳಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಓಣಂ ಹಾಗೂ ಅಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಠಲ ಗಟ್ಟಿ, ಅಜಿತ್ ಕುಮಾರ್, ದೃಶಿತ್, ಜಗದೀಶ್, ಸಮಿತಿ ಸದಸ್ಯರು ನೇತೃತ್ವ ವಹಿಸಿದ್ದರು. ಮಹಿಳಾ ಸಮಿತಿ ಕಾರ್ಯದರ್ಶಿ ಜಯಪ್ರಭಾ ದಿನೇಶ್ ಹಾಗೂ ಸದಸ್ಯರಾದ ಪ್ರಮೀಳಾ, ರಮ್ಯಾ, ದೃಶ್ಯ, ರಂಜಿತಾ ಮತ್ತು ಇತರರು ಸಹಕರಿಸಿದರು. ಪರಕ್ಕಿಲ ಶ್ರೀ ಮಹಾದೇವ ಬಾಲಗೋಕುಲದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಿತಿ ಕಾರ್ಯದರ್ಶಿ ಪದ್ಮರಾಜ ಪರಕ್ಕಿಲ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕಿ ದಿವ್ಯಾ ಗಟ್ಟಿ ಪರಕ್ಕಿಲ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶರಣ್ಯಾ ನಾರಾಯಣನ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net