ಆರೋಗ್ಯಕರ ಜೀವನ ಪದ್ಧತಿಗೆ ಸಪ್ತಾಹ : ದಂತ ತಪಾಸಣಾ ಶಿಬಿರದಲ್ಲಿ ವರ್ಷಾ ಕಾಮತ್ ಹೇಳಿಕೆ

New Project (25)
Published on

ಮೂಡುಬಿದಿರೆ: ದಂತ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಬಹುಮುಖ್ಯ. ಆರೋಗ್ಯಕರ ಜೀವನ ಪದ್ಧತಿಗೋಸ್ಕರ ಹಲವು ಕಾರ್ಯಕ್ರಮಗಳನ್ನು ಜೇಸಿ ಸಪ್ತಾಹದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಜೆಸಿಐ ಅಧ್ಯಕ್ಷರಾದ ವರ್ಷಾ ಕಾಮತ್ ಹೇಳಿದರು.

ಮೂಡುಬಿದಿರೆ ಮಾಡರ್ನ್ ಡೆಂಟಲ್ ಕ್ಲಿನಿಕ್‌ನಲ್ಲಿ ಜೆಸಿಐ ಮೂಡುಬಿದಿರೆ ತ್ರಿಭುವನ್-ಜೇಸಿ ಸಪ್ತಾಹ ಅಂಗವಾಗಿ ಕ್ರೀಡೆ ಹಾಗೂ ಸ್ವಾಸ್ಥೃ ಧ್ಯೇಯದೊಂದಿಗೆ ದಂತ ತಪಾಸಣಾ ಉಚಿತ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಪರ್ವೀನ್ ಜಾವೇದ್ ಶೇಖ್ ಮತ್ತು ತಂಡದವರು ರೋಗಿಗಳಿಗೆ ಉಚಿತ ತಪಾಸಣೆ, ಸಮಾಲೋಚನೆ ನೀಡಿ, ದಂತ ಚಿಕಿತ್ಸಾ ಕಿಟ್ ವಿತರಿಸಿದರು. ಕಾರ್ಯದರ್ಶಿ ಶ್ರವಣ್ ಕುಮಾರ್, ಪೂರ್ವ ಅಧ್ಯಕ್ಷರಾದ ಜೆಸಿ ಸಂತೋಷ್ ಕುಮಾರ್, ಸುನೀಲ್ ಕುಮಾರ್, ಶಾಂತಲಾ ಆಚಾರ್ಯ, ಸದಸ್ಯರಾದ ಮಲ್ಲಿಕಾ ಸುನೀಲ್, ಉಮೇಶ್ ಭಟ್, ಯೋಜನಾ ನಿರ್ದೇಶಕ ಫರಾಜ್ ಮತ್ತು ಉದ್ಯಮಿ ದಿನೇಶ್ ಕಾಮತ್ ಉಪಸ್ಥಿತರಿದ್ದರು.

ಜೇಸಿ ಸಪ್ತಾಹದ ಅಂಗವಾಗಿ ಶ್ರೀ ಮಹಾವೀರ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ನಡೆಯಿತು. ನ್ಯೂ ವೈಬ್ರೆಂಟ್ ಪಿ.ಯು. ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹರೀಶ್ ನಂಬಿಯಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜೆಸಿಐ ಅಧ್ಯಕ್ಷೆ ವರ್ಷಾ ಕಾಮತ್, ಪ್ರಾಂಶುಪಾಲ ರಾಧಾಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net