

ಬೆಳ್ತಂಗಡಿ: ನಿಮ್ಮೊಳಗಿನ ಮಾತು ಆಡಲು ಶುರುವಾದರೆ ನೀವು ಗುರುಗಳಾಗಿರುತ್ತೀರಿ. ಎಲ್ಲ ಜವಾಬ್ದಾರಿಗಳ ಮಜಲುಗಳು, ನಿದ್ದೆ&ಮುದ್ದೆಗಳ ಸವಾಲುಗಳ ನಡುವೆ ಜೀವನವನ್ನು ಸಾಗಿಸಬೇಕು. ಅರಿವೇ ಗುರುವಾಗಬೇಕು ಎಂದು ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಹೇಳಿದರು.
ಉಜಿರೆ ಶ್ರೀ ಧ.ಮಂ.ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಕೃಷ್ಣ ಜಗತ್ತಿನ ಮೊದಲ ಗುರು. ಅರ್ಜುನ ಗಾಂಢೀವ ಕೆಳಗಿರಿಸಿದಾಗ ಶ್ರೀ ಕೃಷ್ಣ ಅರ್ಜುನನಲ್ಲಿ ಮೊದಲು ಕೇಳಿದ ಮಾತು, ನಿನ್ನನ್ನು ನೀನು ಉದ್ಧರಿಸಿಕೋ ಎಂಬುವುದು ಎಂದರು.
ಪ್ರಾಂಶುಪಾಲ ಪ್ರಮೋದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ೇಮಪಾಲನಾಧಿಕಾರಿ ಯುವರಾಜ್ ಪೂವಣಿ ಹಾಗೂ ಉಪಪ್ರಾಂಶುಪಾಲ ಡಾ.ರಾಜೇಶ್ ಬಿ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಮೇಧಾ ಗಾಂವ್ಕರ್ ಶಿಕ್ಷಕರ ದಿನದ ಮಹತ್ವ ಪ್ರಸ್ತುತಪಡಿಸಿದರು. ಧನ್ಯಾ ಮತ್ತು ಸೌಜನ್ಯಾ ಅತಿಥಿ ಪರಿಚಯ ಮಾಡಿದರು. ಸ್ವಪ್ನಾ ಸ್ವಾಗತಿಸಿದರು. ಶ್ರದ್ಧಾ ವಂದಿಸಿದರು. ಸಾ ಮತ್ತು ನಿಜ ಕುಲಾಲ್ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಿಂದ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸತಿಕ ಕಾರ್ಯಕ್ರಮಗಳು ನಡೆದವು.