ಎಂಡೋವೆನಸ್​ ಲೇಸರ್​ ಯಶಸ್ವಿ ಶಸಚಿಕಿತ್ಸೆ: ಉಜಿರೆ ಎಸ್​.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಸಾಧನೆ

Bel_Laser-Treatment
Published on

ಬೆಳ್ತಂಗಡಿ: ಉಜಿರೆ ಎಸ್​.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಬ್ಬಿರುವ ರಕ್ತನಾಳದ ಸಮಸ್ಯೆ ಇದ್ದ 41 ವರ್ಷ ಹಾಗೂ 40 ವರ್ಷ ಪ್ರಾಯದ ಇಬ್ಬರಿಗೆ ಮೊದಲ ಬಾರಿಗೆ ಎಂಡೋವೆನಸ್​ ಲೇಸರ್​ ಶಸಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಶಸಚಿಕಿತ್ಸಾ ತ ಡಾ.ಕಿರಣ್​ ಹಾಗೂ ಅರಿವಳಿಕೆ ತಜ್ಞೆ ಡಾ.ಚೈತ್ರಾ ಆರ್​. ಶಸಚಿಕಿತ್ಸೆ ನಡೆಸಿದರು. ಶಸಚಿಕಿತ್ಸೆಗೆ ಒಳಗಾದ ಇಬ್ಬರೂ ಕಡಿಮೆ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ.

ಎಂಡೋವೆನಸ್​ ಲೇಸರ್​ ಶಸಚಿಕಿತ್ಸೆ ಎನ್ನುವುದು ಶಸಚಿಕಿತ್ಸೆ ಇಲ್ಲದೆ ಉಬ್ಬಿರುವ ರಕ್ತನಾಳಗಳಿಗೆ ನೀಡುವ ಚಿಕಿತ್ಸೆಯ ಹೊಸ ವಿಧಾನವಾಗಿದೆ. ಉಬ್ಬಿರುವ ರಕ್ತನಾಳಗಳನ್ನು ತೊಡೆದು ಹಾಕಲು ಇದು ಸುರತ ಮತ್ತು ಪರಿಣಾಮಕಾರಿ ಚಿಕಿತ್ಸೆ. ಈ ಚಿಕಿತ್ಸೆಯ ನಂತರ ರೋಗಿ ಬಹಳ ಬೇಗನೇ ಚೇತರಿಸಿಕೊಳ್ಳುತ್ತಾರೆ. ಈ ಶಸಚಿಕಿತ್ಸೆಯಲ್ಲಿ ಕಡಿಮೆ ನೋವು, ಕಡಿಮೆ ರಕ್ತಸ್ರಾವ ಹಾಗೂ ಸೋಂಕಿನ ಅಪಾಯ ತುಂಬಾ ಕಡಿಮೆ ಇರುತ್ತದೆ.

ಉಜಿರೆಯ ಎಸ್​.ಡಿ.ಎಂ ಮಲ್ಟಿ&ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕಿಯ ಸೇವೆ ದೊರೆಯುತ್ತಿದೆ. ನಗರ ಪ್ರದೇಶದ ಅಸ್ಪತ್ರೆಗಳಿಗೆ ಹೋಲಿಸಿದರೆ ಈ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಶಸಚಿಕಿತ್ಸೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಯಶಸ್ವಿ ಶಸಚಿಕಿತ್ಸೆಗಳ ಬಗ್ಗೆ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ ಹಾಗೂ ಡಿ.ಹರ್ಷೇಂದ್ರ ಕುಮಾರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net