ಪುತ್ತಿಗೆ ಕ್ಷೇತ್ರದಲ್ಲಿ ಕೃಷ್ಣೋತ್ಸವ ಆಮಂತ್ರಣ ಬಿಡುಗಡೆ

New Project (26)
Published on

ಮೂಡುಬಿದಿರೆ: ಇಲ್ಲಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 109ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ ಆಶ್ರಯದಲ್ಲಿ ಅಮರನಾಥ್ ಶೆಟ್ಟಿ ವೃತ್ತದ ಬಳಿ ನಡೆಯುವ ಕೃಷ್ಣೋತ್ಸವ 2025 ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು.

ಕ್ಷೇತ್ರದ ಆನುವಂಶಿಕ ಮೊಕ್ತೇಸರ ಕುಲದೀಪ ಎಂ.ಚೌಟರ ಅರಮನೆ ಆಮಂತ್ರಣ ಬಿಡುಗಡೆಗೊಳಿಸಿದರು. ಶಾಸಕ ಉಮಾನಾಥ್ ಕೋಟ್ಯಾನ್, ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಪ್ರಮುಖರಾದ ಕೆ.ಪಿ.ಜಗದೀಶ್ ಅಧಿಕಾರಿ, ರಾಜೇಂದ್ರ ಜೈನ್, ಗಂಗಾಧರ್ ಶೆಟ್ಟಿ, ರಾಜೇಶ್ ಕೋಟೆಗಾರ್, ಬಂಟರ ಸಂಘ ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಹೆಗಡೆ, ಅಶ್ವಿತ್ ಶಿರ್ತಾಡಿ, ಪ್ರಶಾಂತ್ ಗುರುಸ್ವಾಮಿ ಒಂಟಿಕಟ್ಟೆ, ಮಂಜುನಾಥ ರೈ, ನಾಗವರ್ಮ ಜೈನ್, ಜವನೆರ್ ಬೆದ್ರ ಫೌಂಡೇಶನ್ ಸ್ಥಾಪಕ ಅಮರ್ ಕೋಟೆ, ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟಿ ರಂಜೀತ್ ಶೆಟ್ಟಿ, ಯುವ ಸಂಘಟನೆ ಸಂಚಾಲಕ ನಾರಾಯಣ ಪಡುಮಲೆ, ಸಹ ಸಂಚಾಲಕ ರಾಜೇಶ್, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಪೂಜಾರಿ, ರಕ್ತನಿಧಿ ಸಂಚಾಲಕ ಮನು ಒಂಟಿ ಕಟ್ಟೆ, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್, ಸೌಮ್ಯಾ ಗಣೇಶ್, ಭಕುತಿ ಭಜನಾ ವೃಂದ ಪ್ರಮುಖರಾದ ಸುಕನ್ಯ, ಅಮಿತಾ ಬನ್ನಡ್ಕ, ಸಂಘಟನೆ ಸದಸ್ಯರಾದ ಲಕ್ಷ್ಮೀ, ರಾಧಾ, ಅಭಿಲಾಷ್, ಗುರು , ಸಚಿನ್ ಪದ್ದೋಡಿ ಶರತ್ ಅಲಂಗಾರು ಉಪಸ್ಥಿತರಿದ್ದರು. ಸಂಘಟನೆ ಯುವಜನ ಸಬಲೀಕರಣ ಸಂಚಾಲಕ ಸಂದೀಪ್ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net