VIDEO| ಭಾರತ ಮೂಲದ ವ್ಯಕ್ತಿಯಿಂದ ಕೊರಿಯನ್​ ಯುಟ್ಯೂಬರ್​ಗೆ ಲೈಂಗಿಕ ಕಿರುಕುಳ

korean assault
Published on

ಹಾಂಗ್​ಕಾಂಗ್​: ಕೊರಿಯಾ ಮೂಲದ ಮಹಿಳಾ ಯೂಟ್ಯೂಬರ್​ಗೆ ಭಾರತ ಮೂಲದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹಾಂಗ್​ಕಾಂಗ್​ನಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕೊರಿಯಾ ಮೂಲದ ಮಹಿಳೆ ಹಾಂಗ್​ಕಾಂಗ್​ನ ಸಬ್​ವೇ ಮೆಟ್ರೋ ನಿಲ್ದಾಣದ ಬಳಿ ವಿಡಿಯೋ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಬರುವ ವ್ಯಕ್ತಿ ನೀವು ಯಾವ ಕಡೆ ಹೋಗಬೇಕು ಬನ್ನಿ ನಾನು ಸಹಾಯ ಮಾಡುತ್ತೇನೆಂದು ಹೇಳುತ್ತಾ ಆಕೆಯನ್ನು ಹಿಂಬಾಲಿಸಲು ಶುರು ಮಾಡುತ್ತಾನೆ.

ಮಹಿಳೆ ಆತನಿಂದ ತಪ್ಪಿಸಿಕೊಂಡರು ಮುಂದೆ ಹೋದರು ಬಿಡದ ದುರುಳ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಕೃತಿ ಮೆರೆಯುತ್ತಾನೆ. ಆಕೆ ಸಹಾಯಕ್ಕಾಗಿ ಅಂಗಲಾಚಿದರು ಯಾರು ಆಕೆಯ ನೆರವಿಗೆ ಯಾರು ಬರುವುದಿಲ್ಲ. ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಅಮಿತ್​ ಎಂದು ಗುರುತಿಸಲಾಗಿದ್ದು, ಈತ ಹಾಂಗ್​ಕಾಂಗ್​ನಲ್ಲಿರುವ ರಾಜಸ್ಥಾನ ಮೂಲದ ಹೋಟೆಲ್​ ಒಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಎಂದು ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್​ ವ್ಲಾಗರ್​ಗಳು ಹಾಗೂ ಕೆಂಟೆಂಟ್​ ಕ್ರಿಯೇಟರ್​ಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಜನನಿಬಿಡ ಪ್ರದೇಶಗಳಲ್ಲಿ ಕೃತ್ಯ ಎಸಗಲಾಗುತ್ತಿದೆ. ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ ಎಂದು ನಟ್ಟಿಗರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net