ಕೂಟೇಲು-ಸಂಕೇಶ ಮಣಿಯೇರು ಕಿರುಸೇತುವೆ ಕುಸಿತ

New Project (18)
Published on

ಕೊಕ್ಕಡ: ಪಟ್ರಮೆಯ ಕೂಟೇಲು ಸಂಕೇಶ ಮಣಿಯೇರು ಸಂಪರ್ಕದ ಪರಿಶಿಷ್ಟ ಜಾತಿ ಕಾಲನಿಯ ಪಂಚಾಯಿತಿ ರಸ್ತೆಯ ಕಿರು ಸೇತುವೆ ಶುಕ್ರವಾರ ಸುರಿದ ಮಳೆಯ ಅಬ್ಬರಕ್ಕೆ ಕುಸಿಯಲಾರಂಭಿಸಿದೆ.

ಸೇತುವೆಯು ಪಟ್ರಮೆ ಮುಖ್ಯ ರಸ್ತೆಯ ಪ್ರಾರಂಭದಲ್ಲೇ ನೂರು ಮೀಟರ್ ಅಂತರದಲ್ಲಿ ಇರುವುದಾಗಿದ್ದು, ಇದೇ ಸೇತುವೆಯನ್ನು ದಾಟಿಕೊಂಡು ಮೂವತ್ತು ಕುಟುಂಬಕ್ಕಿಂತಲೂ ಹೆಚ್ಚು ಜನರು ಸಂಚರಿಸಬೇಕಾಗಿದೆ.

ಸೇತುವೆ ಮಾತ್ರವಲ್ಲದೆ ಈ ಪ್ರದೇಶದ ರಸ್ತೆಯು ಕೂಡ ಸಂಚಾರಕ್ಕೆ ಅಯೋಗ್ಯವಾದ ರಸ್ತೆಯಾಗಿ ಪರಿಣಮಿಸಿದ್ದು, ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ‘ಎಸ್‌ಟಿ, ಎಸ್‌ಸಿ ಕಾಲನಿಗಿಲ್ಲ ರಸ್ತೆ ಭಾಗ್ಯ’ ಎಂಬ ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಲಾಗಿತ್ತು. ಇನ್ನೇನು ರಸ್ತೆಯ ಸ್ಥಿತಿಯ ಬಗ್ಗೆ ಎರಡು ಬಾರಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಹತ್ರ ವ್ಯವಹಾರವನ್ನು ಇಲ್ಲಿನ ಸ್ಥಳೀಯರು ಕೂಡ ನಡೆಸಿದ್ದರು.

ಕಳೆದ ಹಲವು ವರ್ಷಗಳಿಂದ ಬಹಳಷ್ಟು ಮಂದಿ ಈ ರಸ್ತೆ ಅಭಿವೃದ್ಧಿ ಮಾಡಿಕೊಡುವಂತೆ ಮನವಿ ಮಾಡಿದ್ದರೂ ಸಂಬಂಧಪಟ್ಟ ಇಲಾಖೆ ಈ ಕಡೆ ಗಮನಹರಿಸಿಲ್ಲ. ಈ ರಸ್ತೆಯಿಂದ ಅನಾಹುತ ಸಂಭವಿಸಿದಲ್ಲಿ ಅಧಿಕಾರಿಗಳೇ ನೇರ ಹೊಣೆಗಾರರು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net