ತಮಿಳು ನಟನಿಗೆ 45 ಲಕ್ಷ ರೂ. ಟೋಪಿ ಹಾಕಿದ ಅವರದೇ ಸಂಸ್ಥೆ ಮಹಿಳಾ ಉದ್ಯೋಗಿ!

vishal-20160926
Published on

ಕಾಲಿವುಡ್​ ನಟ ವಿಶಾಲ್​ ನಟನೆ ಜತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ವಿಶಾಲ್​ ಫಿಲಂ ಫ್ಯಾಕ್ಟರಿ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಹಲವು ಸಿನಿಮಾಗಳು ಸಿದ್ಧವಾಗಿವೆ. ಇದೀಗ ಇದೇ ವಿಶಾಲ್​ ಫಿಲಂ ಫ್ಯಾಕ್ಟರಿ ಮಹಿಳಾ ಉದ್ಯೋಗಿಯೊಬ್ಬರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ಸಂಸ್ಥೆಯ ಮ್ಯಾನೇಜರ್​ ಹರಿ ಎಂಬುವವರು ವಡಾಪಳನಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಕಳೆದ ಆರು ವರ್ಷಗಳಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಒಟ್ಟು 45 ಲಕ್ಷ ರೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಇತ್ತೀಚೆಗಷ್ಟೇ ಸಂಸ್ಥೆಯ ಮಹಿಳಾ ಉದ್ಯೋಗಿ 45 ಲಕ್ಷ ಮೊತ್ತ ನೀಡಿ ಮನೆ ಖರೀದಿಸಿದ್ದರು. ಈ ಖರೀದಿಯ ಬಗ್ಗೆ ಅನುಮಾನಗೊಂಡ ಮ್ಯಾನೇಜರ್​, ವಿಚಾರಣೆ ಮಾಡಿದ್ದಾರೆ. ಆ ವೇಳೆ ಸತ್ಯ ಬೆಳಕಿಗೆ ಬಂದಿದ್ದು, ದೂರು ನೀಡಿದ್ದಾರೆ.

ಇತ್ತೀಚೆಗಷ್ಟೇ ವಿಶಾಲ್​ ನಾಯಕತ್ವದ ಚಕ್ರ ಚಿತ್ರದ ಟ್ರೇಲರ್​ ಬಿಡುಗಡೆಯಾಗಿತ್ತು. ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಕನ್ನಡ ಟ್ರೇಲರ್​ಅನ್ನು ರಾಕಿಂಗ್​ ಸ್ಟಾರ್ ಯಶ್ ಬಿಡುಗಡೆಗೊಳಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net