More

    ವಿದೇಶದಲ್ಲಿ ಯುವತಿ ಜತೆ ಸಿಕ್ಕಿಬಿದ್ದ ಖ್ಯಾತ ನಟ..ಕ್ಯಾಮೆರಾ ನೋಡಿ ಮುಖ ಮುಚ್ಚಿಕೊಂಡು ಓಡಿದ!

    ಮುಂಬೈ: ತಮಿಳು ನಟ ವಿಶಾಲ್ ಇನ್ನೂ ಮದುವೆಯಾಗಿಲ್ಲ, ಈ ಹಿಂದೆ ಹೈದರಾಬಾದ್‌ನ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಆದರೆ ಕಾರಣಾಂತರಗಳಿಂದ ಅದನ್ನು ರದ್ದುಗೊಳಿಸಲಾಯಿತು. ಯಾರೊಂದಿಗೂ ಸಂಬಂಧ ಹೊಂದಿಲ್ಲ ಎಂಬ ಊಹಾಪೋಹಗಳನ್ನು ನಟ  ನಿರಾಕರಿಸಿದರು. ಇದೀಗ ಮತ್ತೆ ಅಂತಹದ್ದೇ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚಿನ ವೀಡಿಯೊದಲ್ಲಿ ವಿಶಾಲ್ ಅಪರಿಚಿತ ಮಹಿಳೆಯೊಂದಿಗೆ ನ್ಯೂಯಾರ್ಕ್ ನಗರದಲ್ಲಿ ಅಡ್ಡಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಕ್ಯಾಮರಾ ಇದೆ ಎಂದು ಗೊತ್ತಾಗಿ ವಿಶಾಲ್ ಅವರ ಮುಖವನ್ನು ಮರೆಮಾಡಿ ಗೆಳತಿ ಜತೆ  ಓಡಿ ಹೋಗಿದ್ದಾರೆ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

    ವಿಡಿಯೋದಲ್ಲಿ ಏನಿದೆ?: ನಟ ವಿಶಾಲ್ ನ್ಯೂ ಯಾರ್ಕ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ನಟ ವಿಶಾಲ್ ಕೂಡ ಗೆಳತಿ ಜೊತೆ ನೈಟ್ ವಾಕ್ ಮಾಡಿದ್ದಾರೆ. ಕೆಂಪು ಬಣ್ಣದ ಸ್ವೆಟರ್‌ನಲ್ಲಿ ವಿಶಾಲ್ ಮತ್ತು ಕೆಂಪು ಬಣ್ಣದ ಸ್ವೆಟರ್‌ನಲ್ಲಿ ಗೆಳತಿ ಕಾಣಿಸಿಕೊಂಡಿದ್ದಾರೆ. ಗೆಳತಿ ಜತೆ ವಾಕ್​ ಮಾಡಿಕೊಂಡು ಬರುತ್ತಿದ್ದಾಗ,  ಪಾದಾಚಾರಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಕ್ಯಾಮೆರಾ ನೋಡುತ್ತಿದ್ದಂತೆ ವಿಶಾಲ್ ತಮ್ಮ ಮುಖ ಮಾತ್ರವಲ್ಲದೆ ಆ ಗೆಳತಿ ಮುಖ ಕೂಡ ಮುಚ್ಚಿಕೊಂಡು ಓಡಿ ಹೋಗಿದ್ದಾರೆ.

    ವಿಶಾಲ್ ಜೊತೆ ಇರುವ ಆ ಗೆಳತಿ ಯಾರು? ಯಾಕೆ ಮುಖ ಮುಚ್ಚಿಕೊಂಡರು? ಯಾವ ಸಂಬಂಧ ಇಲ್ಲ ಅಂದ್ಮೇಲೆ ಯಾಕೆ ಓಡಿ ಹೋಗಬೇಕಿತ್ತು? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೆಟ್ಟಿಗರು.  ವಿಶಾಲ್ ಅಭಿಮಾನಿಗಳು ಇದು ಫೇಕ್ ವಿಡಿಯೋ ಎನ್ನುತ್ತಾರೆ.

    ಈ ದೃಶ್ಯಾವಳಿಯು ನೆಟಿಜನ್‌ಗಳಲ್ಲಿ ತೀವ್ರವಾದ ಊಹಾಪೋಹವನ್ನು ಹುಟ್ಟುಹಾಕಿದೆ, ಮುಂಬರುವ ಚಲನಚಿತ್ರಕ್ಕಾಗಿ ಇದು ಕಾರ್ಯತಂತ್ರದ ಪ್ರಚಾರದ ಕ್ರಮದ ಭಾಗವಾಗಿರಬಹುದು ಎಂದು ಹಲವರು ಊಹಿಸಿದ್ದಾರೆ.ಶೀಘ್ರದಲ್ಲೇ, ಈ ಬಗ್ಗೆ ಸ್ಪಷ್ಟತೆಗೆ ಬರಬಹುದು.

    ‘ಬಾ ಬಾರೋ ರಸಿಕ’ ನಟಿ ಆಶಿತಾ ಈಗಲೂ ಸಖತ್​ ಬೋಲ್ಡ್​; ಫೋಟೋ ನೋಡಿದ್ರೆ ಕಳೆದು ಹೋಗುವುದು ಪಕ್ಕಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts