More

    ನೆಟ್​ಫ್ಲಿಕ್ಸ್​​ನಲ್ಲಿ ಬರಲಿದೆ ಧನುಷ್ ‘ಜಗಮೇ ತಾಂಧಿರಮ್’; ಪ್ರಸಾರದ ದಿನಾಂಕ ಇಲ್ಲಿದೆ ನೋಡಿ..

    ಚೆನ್ನೈ: ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ ಕಾಲಿವುಡ್ ಸ್ಟಾರ್ ಧನುಷ್ ಅವರ ಜಗಮೇ ತಾಂಧಿರಮ್ ಚಿತ್ರ ಇದೀಗ ಚಿತ್ರಮಂದಿರದ ಬದಲು ಓಟಿಟಿಯಲ್ಲಿ ರಿಲೀಸ್ ಆಗಲು ಸಿದ್ಧತೆ ಮಾಡಿಕೊಂಡಿದೆ. ಅದರಂತೆ ದಿನಾಂಕವೂ ನಿಗದಿಯಾಗಿದೆ.

    ಇದನ್ನೂ ಓದಿ: ಕರೊನಾ ನಡುವೆಯೂ ಚಿತ್ರೀಕರಣ ಮುಂದುವರೆಸಿದ ರಜನಿಕಾಂತ್​

    ಹೌದು, ಕಾರ್ತಿಕ್​ ಸುಬ್ಬರಾಜು ನಿರ್ದೇಶನದಲ್ಲಿ ಸಿದ್ಧವಾಗಿರುವ ಜಗಮೇ ತಾಂಧಿರಮ್ ಚಿತ್ರ ನೆಟ್​ಫ್ಲಿಕ್ಸ್‘ನಲ್ಲಿ ಜೂನ್ 18ಕ್ಕೆ ಬಿಡುಗಡೆ ಆಗಲಿದೆ. ಈ ವಿಚಾರವನ್ನು ಸ್ವತಃ ನೆಟ್​ಫ್ಲಿಕ್​ ಹೇಳಿಕೊಂಡಿದ್ದು, ಚಿತ್ರತಂಡವೂ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ.


    ಗ್ಯಾಂಗಸ್ಟರ್ ಡ್ರಾಮಾ ಶೈಲಿಯ ಈ ಸಿನಿಮಾದಲ್ಲಿ ಗ್ಯಾಂಗ್​ಸ್ಟರ್ ಸುರುಲಿಯಾಗಿ ಧನುಷ್​ ಪಾತ್ರ ಮೂಡಿಬಂದಿದ್ದು, ಐಶ್ವರ್ಯಾ ಲಕ್ಷ್ಮೀ, ಕಲೈಅರಸನ್, ಸೇರಿ ಹಲವು ಖ್ಯಾತನಾಮ ಕಲಾವಿದರು ಚಿತ್ರದ ಭಾಗವಾಗಿದ್ದಾರೆ. ತಮಿಳಿನ ಜತೆಗೆ ತೆಲುಗಿನಲ್ಲಿಯೂ ಜಗಮೇ ತಂತ್ರಮ್ ಹೆಸರಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. -ಏಜೆನ್ಸೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts