ಕೋಳಿಕ್ಕಾಲು ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

9
Published on

ಮುಳ್ಳೇರಿಯ: ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಹೋತ್ಸವ ಮಾರ್ಚ್ 6ರವರೆಗೆ ಜರಗುತ್ತಿದ್ದು, ಇದರ ಅಂಗವಾಗಿ ಮುಳ್ಳೇರಿಯ ಶ್ರೀ ಗಣೇಶ ಕಲಾ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶನಿವಾರ ಬೆಳಗ್ಗೆ ಜರುಗಿತು.

ಬ್ಯಾಂಡ್ ವಾದ್ಯ ವಾಲಗದೊಂದಿಗೆ ಮುತ್ತು ಕೊಡೆ, ಹಸಿರುವಾಣಿ, ಅಕ್ಕಿಮುಡಿ ಹೊತ್ತ ಭಕ್ತರು ಮುಳ್ಳೇರಿಯ ಪೇಟೆಯಾಗಿ ಬೇಂಗತ್ತಡ್ಕ ಮೂಲಕ ಪಾದಯಾತ್ರೆ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸಿದರು.

ಮೆರವಣಿಗೆಗೆ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಕೇಶವ ಕೆ.ಕೋಳಿಕ್ಕಾಲು, ಕಾರ್ಯದರ್ಶಿ ದೇವಾನಂದ ಮಾಸ್ತರ್, ಕೋಶಾಧಿಕಾರಿ ಗಣೇಶ ವತ್ಸ, ಕಾರಡ್ಕ ಪಂಚಾಯಿತಿ ಉಪಾಧ್ಯಕ್ಷೆ ಜನನಿ, ಪಂಚಾಯಿತಿ ಸದಸ್ಯ ರತ್ನಾಕರ, ಪ್ರಚಾರ ಸಮಿತಿ ಸಂಚಾಲಕ ವಿನು ಕೋಳಿಕ್ಕಾಲು, ಸುಧೀರ್ ಕುಮಾರ್ ರೈ, ಗೋಪಾಲಕೃಷ್ಣ ಕೊಲ್ಲಾಡಿ, ವಿನೋದ್ ಅಡ್ಕ, ಕೃಷ್ಣ ಕಾನಕ್ಕೋಡು, ರಾಜನ್ ಕೆ.ಕೆ, ರಾಜು ಗಾಡಿಗುಡ್ಡೆ, ಕೃಷ್ಣ, ಅಶೋಕ್ ಗಾಡಿಗುಡ್ಡೆ, ಶಿವರಾಮ ಬಲ್ಲಾಳ್, ಪ್ರೇಮಾ, ಉದಯ ಕೋಳಿಕ್ಕಾಲ್, ಅನೀಶ, ಜಯಲತಾ ಕಾನಕ್ಕೋಡು, ವಿದ್ಯಾ, ದಾಮೋದರ ಮೊದಲಾದವರು ನೇತೃತ್ವ ನೀಡಿದರು.

ಕ್ಷೇತ್ರದಲ್ಲಿ ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಉಗ್ರಾಣ ಮುಹೂರ್ತ ನೆರವೇರಿಸಿದರು. ನಂದಗೋಕುಲ ಭಜನಾ ಮಂಟಪದಲ್ಲಿ ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net