

ಗುರುಪುರ: ಮಂಗಳೂರಿನ ಕೋಡಿಕಲ್‌ನಿಂದ ಪಡೀಲ್‌ವರೆಗಿನ ನೂತನ ಕೆಎಸ್ಸಾರ್ಟಿಸಿ ಬಸ್ ಸೇವೆಗೆ ಶಾಸಕ ಡಾ.ಭರತ್ ಶೆಟ್ಟಿ ಬುಧವಾರ ಚಾಲನೆ ನೀಡಿದರು.
ಶಾಸಕರು ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಎಲ್ಲ ಕೆಲಸ ಕಾರ್ಯಗಳಿಗೆ ಈ ಬಸ್ ಸೇವೆಯಿಂದ ಬಹಳಷ್ಟು ಅನುಕೂಲವಾಗಲಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಗ ಈಡೇರಿದೆ ಎಂದರು.
ಕೋಡಿಕಲ್-ಪಡೀಲ್‌ವರೆಗೆ ಸರ್ಕಾರಿ ಬಸ್ ಸೇವೆ ಆರಂಭಿಸಲು ಶ್ರಮಿಸಿರುವ ಕೋಡಿಕಲ್ ದೇರೆಬೈಲ್ 17ನೇ ಉತ್ತರ ವಾರ್ಡ್ ಹಾಗೂ ಬಂಗ್ರಕೂಳೂರು 16ನೇ ವಾರ್ಡ್ ಇಬ್ಬರು ನಿಕಟಪೂರ್ವ ಕಾರ್ಪೊರೇಟರ್‌ಗಳಿಗೆ ಕೋಡಿಕಲ್ ನಾಗರಿಕರು ಅಭಿನಂದನೆ ಸಲ್ಲಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಮೇಯರ್ ಮನೋಜ್ ಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಕಿಶೋರ್ ಬಾಬು, ವಾರ್ಡ್ ಅಧ್ಯಕ್ಷ ರವಿಪ್ರಸಾದ್, ವಾರ್ಡ್ ಕಾರ್ಯದರ್ಶಿ ಭರತ್ ಕೋಡಿಕಲ್, ಮಂಡಲ ಕಾರ್ಯದರ್ಶಿ ಆನಂದ, ಪಕ್ಷದ ಹಿರಿಯರಾದ ಲೋಕನಾಥ ಬಂಗೇರ, ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಯಲಕ್ಷ್ಮೀ ಎನ್., ವಿಶ್ವ ಹಿಂದು ಪರಿಷತ್ ಬಜರಂಗದಳ ಖಂಡ ಸಮಿತಿ ಪ್ರಮುಖರು, ಪ್ರಖಂಡ ಪ್ರಮುಖರು, ಜಿಲ್ಲಾ ಪ್ರಮುಖರು, ಬೂತ್ ಅಧ್ಯಕ್ಷ ಶರತ್ ಪಾಲ್ದಡಿ, ಅವಿನಾಶ್, ಸೌಪರ್ಣಿಕ, ಹರಿಪ್ರಸಾದ್, ಪ್ರವೀಣ್ ಸಂಗಮ್, ಗಣೇಶ್ ರೈ ಪಾಲ್ದಡಿ, ರಾಘವ ಶೆಟ್ಟಿ, ಶಿವರಾಜ್ ಶೆಟ್ಟಿ, ಯುವ ಮೋರ್ಚಾ ಮಂಡಲ ಸದಸ್ಯರಾದ ಕಾರ್ತಿಕ್, ಮಂಜುನಾಥ ಆರ್.ಕೆ., ಬಾಲಕೃಷ್ಣ ಕೋಡಿಕಲ್, ಚೇತನ್ ಕಟ್ಟೆ, ಧನಂಜಯ ಕಟ್ಟೆ, ಯಶವಂತ ಕಟ್ಟೆ, ಮಿಥುನ್ ಕೋಡಿಕಲ್, ವಿನೋದ್ ಕಟ್ಟೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.