ಬಳ್ಳಮಂಜ ಕ್ಷೇತ್ರದ ಕೊಡಿ ಮರ ಮೆರವಣಿಗೆ

New Project (7)
Published on

ಬೆಳ್ತಂಗಡಿ: ಮಚ್ಚಿನ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಧ್ವಜಸ್ತಂಭದ ಔರಕ್ಷ ಮುಹೂರ್ತ ನೆರವೇರಿತು.

ತಣ್ಣೀರುಪಂತ ಗ್ರಾಮದ ಅಲಕ್ಕೆ ಬೈಲಿನ ಕುಟುಂಬಸ್ಥರು ದಾನವಾಗಿ ನೀಡಿದ ಕೊಡಿ ಮರವನ್ನು ಮೆರವಣಿಗೆ ಮೂಲಕ ಡಾ.ದೇರೆಬೈಲ್ ಶಿವಪ್ರಸಾದ್ ತಂತ್ರಿ ಮಾರ್ಗದರ್ಶನದಲ್ಲಿ ಅಲಕ್ಕೆಯಿಂದ ಬಳ್ಳಮಂಜಕ್ಕೆ ತರಲಾಯಿತು.

ಆನುವಂಶಿಕ ಆಡಳಿತ ಮೊಕ್ತ್ತೇಸರ ಡಾ.ಎಂ.ಹರ್ಷ ಸಂಪಿಗೆತ್ತಾಯ, ಶಾಸಕ ಹರೀಶ್ ಪೂಂಜ, ಪ್ರಮುಖರಾದ ಅನಂತಾರಾಮ್ ಜೋಗಿತ್ತಾಯ, ರಾಜೇಶ್ ಶೆಟ್ಟಿ ನವಶಕ್ತಿ, ವಿಜಯಚಂದ್ರ, ಶ್ರೀ ಕ್ಷೇತ್ರ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವಿಟ್ಠಲ ಶೆಟ್ಟಿ ಮೂಡಯೂರು, ವಕೀಲ ಬದರಿನಾಥ್ ಸಂಪಿಗೆತ್ತಾಯ, ಗಂಗಾಧರ್ ಭಟ್, ಕಳಿಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ವಕೀಲರ ಸಂದ ಅಧ್ಯಕ್ಷ ವಸಂತ ಮರಕಡ, ದುಗ್ಗಪ್ಪ ಗೌಡ, ಸತೀಶ್ ಕಾರಂದೂರು, ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ, ರಾಜಶೇಖರ್ ಶೆಟ್ಟಿ, ವಿದ್ಯಾಸಾಗರ ಶಾಲಾ ಸಂಚಾಲಕ ವೆಂಕಟ ರೆಡ್ಡಿ, ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ರುಕ್ಕಿಣಿ, ಉಪಾಧ್ಯಕ್ಷೆ ಸೋಮಾವತಿ, ಮಾಜಿ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ, ಪದ್ಮನಾಭ ಸುವರ್ಣ, ಮಾಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ನಾರಾಯಣ ಶೆಟ್ಟಿ ಮೊದಲಾದವರಿದ್ದರು.

ಬಳಿಕ ತಾರೆಮಾರು ಸುಂದರಿ ಹಾಗೂ ವಿಟ್ಠಲ ಶೆಟ್ಟಿ ಮತ್ತು ಮಕ್ಕಳ ವತಿಯಿಂದ ರಂಗಪೂಜೆ ಹಾಗೂ ಅನ್ನದಾನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net