

ವಿಜಯವಾಣಿ ಸುದ್ದಿಜಾಲ ಸುಳ್ಯ
ಈ ಜಗತ್ತನ್ನು ಕಟ್ಟುವವರು ಇಂಜಿನಿಯರ್ಗಳು. ಕಾಲ ಕಾಲಕ್ಕೆ ಆಗುವ ತಾಂತ್ರಿಕ ಸಮಸ್ಯೆ ಪರಿಹರಿಸಿ ತಾಂತ್ರಿಕ ವಿಷಯಗಳಲ್ಲಿ ಅಪ್ಡೇಟ್ ಆಗುತ್ತಾ ಆಧುನಿಕ ಜಗತ್ತನ್ನು ನಿರ್ಮಿಸುವ ಜವಾಬ್ದಾರಿ ಯುವ ಇಂಜಿನಿಯರ್ಗಳ ಮೇಲೆ ಇದೆ ಎಂದು ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ನ ಪ್ರಾಂಶುಪಾಲ ಡಾ.ಕೆ.ಎನ್.ಸುಬ್ರಹ್ಮಣ್ಯ ಹೇಳಿದರು.
ಸುಳ್ಯದ ಅಮರಶ್ರೀಭಾಗ್ನ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಅಕಾಡೆಮಿ ಆ್ ಲಿಬರಲ್ ಎಜುಕೇಶನ್ ಕಮಿಟಿ ಬಿ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಎ.ಒ.ಎಲ್.ಇ. ಕಮಿಟಿ ಬಿ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್ ಕಾಲೇಜು ಮ್ಯಾಗಜಿನ್ ಬಿಡುಗಡೆ ಮಾಡಿದರು. ಕೆವಿಜಿ ಡೆಂಟಲ್ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಮೌರ್ಯ ಆರ್.ಕುರುಂಜಿ ಉಪಸ್ಥಿತರಿದ್ದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜು ಸಿಇಒ, ವಿಟಿಯು ಬೆಳಗಾವಿಯ ಎಕ್ಸಿಕ್ಯುಟಿವ್ ಕೌನ್ಸಿಲ್ ಮೆಂಬರ್ ಡಾ.ಉಜ್ವಲ್ ಯು.ಜೆ. ಪ್ರಾಸ್ತಾವಿಕ ಮಾತನಾಡಿದರು.
ಪ್ರಾಂಶುಪಾಲ ಡಾ.ಸುರೇಶ್ ವಿ., ಕಾಲೇಜು ಮ್ಯಾಗಜಿನ್ನ ಪ್ರಧ್ನಾ ಸಂಪಾದಕಿ ಡಾ.ಸವಿತಾ ಸಿ.ಕೆ. ಮಾತನಾಡಿದರು. ಡೀನ್ ಅಕಾಡೆಮಿಕ್ ಪ್ರೊೆಸರ್ ಡಾ.ಪ್ರಜ್ಞಾ ಎಂ.ಆರ್. ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿಭಾಗ ಮುಖ್ಯಸ್ಥರಾದ ಡಾ.ಚಂದ್ರಶೇಖರ್, ಡಾ.ಕುಸುಮಾಧರ್, ಡಾ.ಕೃಷ್ಣಾನಂದ, ಪ್ರೊ.ರಾಮಚಂದ್ರ ಕಾಮತ್ ಪದವಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪ ಪ್ರಾಂಶುಪಾಲ ಡಾ.ಶ್ರೀಧರ್ ವಂದಿಸಿದರು. ಪ್ರೊ.ಕೃಷ್ಣರಾಜ್ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರೊ.ಭವ್ಯ, ಪ್ರೊ.ಅಶ್ವಿಜ ಸಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಆಡಳಿತಾಧಿಕಾರಿ ನಾಗೇಶ್ ಕೊಚ್ವಿ, ಉಪನ್ಯಾಸಕರು ಉಪಸ್ಥಿತರಿದ್ದರು.
ತಂತ್ರಜ್ಞಾನ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಇರುತ್ತದೆ. ತಂತ್ರಜ್ಞಾನಗಳು ಪ್ರತಿ ಕ್ಷಣ ಔಟ್ಡೇಟ್ ಆಗುತ್ತಾ ಇರುತ್ತದೆ. ಆದ್ದರಿಂದ ಬದಲಾವಣೆಗೆ ತಕ್ಕಂತೆ ಇಂಜಿನಿಯರ್ ತಮ್ಮ ಜ್ಞಾನ ವೃದ್ಧಿಸುವ ಕೆಲಸ ಮಾಡಬೇಕು. ಡಾ.ಕೆ.ಎನ್.ಸುಬ್ರಹ್ಮಣ್ಯ, ಪ್ರಾಂಶುಪಾಲರು, ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್