ಕೋಡಿ ಬಿಲ್ಲವ ಸಂಘ ವಾರ್ಷಿಕ ಮಹಾಸಭೆ

gan-8
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕೋಡಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ, ಸಮಿತಿ ರಚನೆ ಕೋಡಿಯ ಚಕ್ರಮ್ಮ ಸಭಾಭವನದಲ್ಲಿ ಭಾನುವಾರ ನಡೆಯಿತು. ಗೌರವ ಮುಖ್ಯ ಸಲಹೆಗಾರರಾಗಿ ಕೋಡಿ ಗೋಪಾಲ್ ಪೂಜಾರಿ, ಗೌರವಾಧ್ಯಕ್ಷರಾಗಿ ಕೋಡಿ ಶಂಕರ್ ಪೂಜಾರಿ, ಅಧ್ಯಕ್ಷರಾಗಿ ಕೋಡಿ ಗಂಗಾಧರ್ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ್ ಮಾಸ್ಟರ್, ಪದಾಧಿಕಾರಿಗಳಾಗಿ ಬಾಬು ಪೂಜಾರಿ, ವಿಠಲ್ ಪೂಜಾರಿ, ತೇಜ ಪೂಜಾರಿ, ಅಶೋಕ್ ಜಿ.ಪೂಜಾರಿ, ನಾರಾಯಣ ಪೂಜಾರಿ, ಕೋಡಿ ಯೋಗೀಶ್ ಪೂಜಾರಿ, ರಾಮಕೃಷ್ಣ ಎಂ.ಪೂಜಾರಿ, ಸಂತೋಷ್ ಪೂಜಾರಿ ಆಯ್ಕೆಯಾದರು.

ಮಹಿಳಾ ಘಟಕದ ಗೌರವ ಸಲಹೆಗಾರರಾಗಿ ಬೇಬಿ ಮಂಜುನಾಥ್ ಪೂಜಾರಿ, ಗೌರವಾಧ್ಯಕ್ಷೆಯಾಗಿ ಸುಶೀಲಾ ಪೂಜಾರಿ, ಅಧ್ಯಕ್ಷೆಯಾಗಿ ಸುರೇಖಾ ಎಂ.ಪೂಜಾರಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳಾಗಿ ಸುಶೀಲಾ ಗೋಪಾಲ್ ಪೂಜಾರಿ, ಶೋಭಾ ಮೋಹನ್ ಪೂಜಾರಿ, ಸರೋಜಾ ಪೂಜಾರಿ, ಬೇಬಿ ಪೂಜಾರಿ, ವೀಣಾ ಪೂಜಾರಿ, ಲಕ್ಷ್ಮೀ ಅಣ್ಣಯ್ಯ ಪೂಜಾರಿ, ಸುಜಾತಾ ಚಂದ್ರ ಪೂಜಾರಿ, ಶೈಲಾ ಉದಯ್ ಪೂಜಾರಿ, ರೇಣುಕಾ ಆಯ್ಕೆಯಾದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಪಡೆದ ಬಿಲ್ಲವ ಸಮಾಜದ ವಿದ್ಯಾರ್ಥಿಗಳಾದ ಮನೀಶ್ ಪೂಜಾರಿ, ಧೃತಿಕಾ ಪೂಜಾರಿ, ಪ್ರಣಮ್ಯಾ ಪೂಜಾರಿ ಅವರಿಗೆ ವಿದ್ಯಾರ್ಥಿವೇತನ ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net