

ಬೆಂಗಳೂರು: ಶ್ರಾವಣ ಮಾಸದಲ್ಲಿ ಅನೇಕರ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದೆ ಅಡುಗೆ ಮಾಡುತ್ತಾರೆ. ಸದ್ಯ ಟೊಮ್ಯಾಟೊ ಬೆಲೆಯೂ ಹೆಚ್ಚಾಗಿರುವುದರಿಂದ ಆಲೂಗಡ್ಡೆ ಬಳಸಿ ಮಾಡುವ ರೆಸಿಪಿಯನ್ನು ಕೊಡುತ್ತಿದ್ದೇವೆ ನೋಡಿ...
ಬೇಕಾಗುವ ಪದಾರ್ಥಗಳು:
ಬೇಯಿಸಿದ ಮತ್ತು ಹೆಚ್ಚಿದ ನಾಲ್ಕು ಆಲೂಗಡ್ಡೆ
ಎರಡರಿಂದ ಮೂರು ಚಮಚ ದೇಸಿ ತುಪ್ಪ,
2 ಸ್ಪೂನ್ ಕಡಲೆಹಿಟ್ಟು
2 ಒಣ ಕೆಂಪು ಮೆಣಸಿನಕಾಯಿ
ಒಂದು ತುಂಡು ಶುಂಠಿ ( ನುಣ್ಣಗೆ ಕತ್ತರಿಸಿದ್ದು, ರುಚಿಗೆ ತಕ್ಕಂತೆ)
ಎರಡು ಹಸಿರು ಮೆಣಸಿನಕಾಯಿ (ನುಣ್ಣಗೆ ಕತ್ತರಿಸಿದ್ದು)
ಒಂದು ಚಿಟಿಕೆ ಇಂಗು
1 ಚಮಚ ಮೆಂತ್ಯ,
1 ಟೀಸ್ಪೂನ್ ಸೋಂಪು
1 ಟೀಸ್ಪೂನ್ ಕೊತ್ತಂಬರಿ
1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನಪುಡಿ
½ ಟೀಸ್ಪೂನ್ ಅರಿಶಿನ
ಮಾಡುವ ವಿಧಾನ
ಮೊದಲು ಗ್ಯಾಸ್ ಮೇಲೆ ದೊಡ್ಡ ಬಾಣಲೆಯಿಟ್ಟು, ಅದಕ್ಕೆ ತುಪ್ಪ ಹಾಕಿ.
ತುಪ್ಪ ಬಿಸಿಯಾದಾಗ, ಇಂಗು, ಹಸಿರು ಕೊತ್ತಂಬರಿ ಸೊಪ್ಪು ಮತ್ತು ಪುಡಿಮಾಡಿದ ಸೋಂಪು ಸೇರಿಸಿ.
ಈಗ ಒಣ ಕೆಂಪು ಮೆಣಸಿನಕಾಯಿ, ಶುಂಠಿಯ ಸಣ್ಣ ತುಂಡು ಸೇರಿಸಿ ಬೆರೆಸಿ.
ನಂತರ ಕಡಲೆಹಿಟ್ಟು ಹಾಕಿ ಅರ್ಧ ನಿಮಿಷ ಹುರಿಯಿರಿ.
ಈಗ ಎರಡು ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ, ಮೆಂತ್ಯ, ಅರಿಶಿನ ಮತ್ತು ಕಾರದಪುಡಿ ಸೇರಿಸಿ.
ಎಲ್ಲಾ ಮಸಾಲೆಗಳನ್ನು ಹುರಿದ ನಂತರ, ಬೇಯಿಸಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಹುರಿಯಿರಿ.
ಈಗ ಅದಕ್ಕೆ 2 ಕಪ್ ನೀರು ಮತ್ತು ಉಪ್ಪನ್ನು ಸೇರಿಸಿ. ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿದರೆ ಮುಗಿಯಿತು.