ಚೆನ್ನೈ: ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಆವೃತ್ತಿಗೆ ವಿದ್ಯುಕ್ತ ತೆರೆಬಿದ್ದಿದೆ. ಆರಂಭದಿಂದಲೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡ ನಿನ್ನೆ (ಮೇ 26) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಪಂದ್ಯದ ನಂತರ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, ನಾವು ಒಂದು ತಂಡವಾಗಿ ಸಾಧಿಸಲು ಬಯಸಿದ್ದು ಇದನ್ನೇ. ನಿರ್ಣಾಯಕ ಸಮಯದಲ್ಲಿ ಎಲ್ಲರೂ ಚೆನ್ನಾಗಿ ಆಡಿದರು. ಇದರಿಂದ ನನಗಾಗುತ್ತಿರುವ ಆನಂದವನ್ನು ಬಣ್ಣಿಸಲಾಗದು. ಈ ಯಶಸ್ಸಿಗಾಗಿ ನಾನು ಹಲವು ವರ್ಷಗಳಿಂದ ಕಾಯುತ್ತಿದ್ದೆ. ಈ ಸೀಸನ್ನಲ್ಲಿ ನಾವು ಅದ್ಭುತವಾಗಿ ಆಡಿದ್ದೇವೆ. ಮೊದಲ ಪಂದ್ಯದಂತೆ ಫೈನಲ್‌ನಲ್ಲೂ ಅದೇ ಉತ್ಸಾಹದಿಂದ ಹೋರಾಡಿದೆವು. ಯಾವುದೇ ಪರಿಸ್ಥಿತಿ ಬಂದರೂ ಒಬ್ಬರಿಗೊಬ್ಬರು ನಿಂತುಕೊಂಡೆವು. ಈ ಯಶಸ್ಸಿನಿಂದ ನಮಗೆ ತುಂಬಾ ಸಂತೋಷವಾಗಿದೆ ಎಂದು ಅಯ್ಯರ್ ಹೇಳಿದರು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಆರಂಭದಿಂದಲೂ ಅತ್ಯಂತ ಆಕ್ರಮಣಕಾರಿ ಆಟವಾಡಿದರು. ಈ ಅದ್ಭುತ ಸೀಸನ್ಗಾಗಿ ಧನ್ಯವಾದಗಳು. ಸ್ಪರ್ಧೆ ಇದ್ದಾಗ ಮಾತ್ರ ನಮ್ಮಲ್ಲಿರುವ ಪ್ರತಿಭೆ ಹೊರಬರುತ್ತದೆ. ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಭಾವಿಸುತ್ತೇವೆ. ಇದಕ್ಕಾಗಿ ಎಸ್ಆರ್ಎಚ್ಗೆ ಧನ್ಯವಾದ ಹೇಳುತ್ತೇವೆ. ಕೊನೆಯವರೆಗೂ ಪಂದ್ಯ ನಮ್ಮ ಕೈಯಲ್ಲಿತ್ತು. ಇಂತಹ ಅಧಿಕ ಒತ್ತಡದ ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ಅವರಂತಹ ಸ್ಟಾರ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ತಂಡಕ್ಕೆ ಸಾಕಷ್ಟು ಲಾಭವಾಯಿತು. ಆಂಡ್ರೆ ರಸೆಲ್, ಸುನಿಲ್ ನರೈನ್, ಹರ್ಷಿತ್ ರಾಣಾ, ವೆಂಕಟೇಶ್ ಅಯ್ಯರ್ ಸೇರಿದಂತೆ ಎಲ್ಲರೂ ಸಹಕರಿಸಿದರು. ಎಲ್ಲ ಹುಡುಗರು ಸರಿಯಾದ ಸಮಯದಲ್ಲಿ ತಂಡವನ್ನು ಬೆಂಬಲಿಸಿದರು. ಇದು ನಮಗೆ ಅದ್ಭುತ ಸೀಸನ್ ಆಗಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದರು.
ಪಂದ್ಯ ವಿಚಾರಕ್ಕೆ ಬರುವುದಾದರೆ, ನಿನ್ನೆ (ಮೇ 26) ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಕೇವಲ 18.3 ಓವರ್ಗಳಲ್ಲಿ 113 ರನ್ ಗಳಿಗೆ ಆಲೌಟಾಯಿತು. ಯಾವುದೇ ಹಂತದಲ್ಲೂ ಬ್ಯಾಟಿಂಗ್‌ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಐಪಿಎಲ್ ಹರಾಜಿನಲ್ಲಿ 24.75 ಕೋಟಿ ರೂ.ಗೆ ಕೋಲ್ಕತ್ತ ಪಾಲಾದ ವೇಗಿ ಮಿಚೆಲ್ ಸ್ಟಾರ್ಕ್ ಆರಂಭಿಕ ದಾಳಿ ನಡೆಸಿದರು. ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ (2) ಅವರನ್ನು ಔಟ್ ಮಾಡಿದರು. ನಂತರದ ಓವರ್‌ನಲ್ಲಿ ವೈಭವ್ ಅರೋರಾ, ಟ್ರಾವಿಸ್ ಹೆಡ್ ಡಕ್ ಔಟ್ ಮಾಡಿದರು. ಇದಾದ ಬಳಿಕ ಸ್ಟಾರ್ಕ್ ತ್ರಿಪಾಠಿ ಅವರನ್ನು ಔಟ್ ಮಾಡಿದರು. ಆ ನಂತರ ಎಸ್ಆರ್ಎಚ್ ತಂಡ ಯಾವ ಹಂತದಲ್ಲೂ ಚೇತರಿಕೆ ಕಾಣಲಿಲ್ಲ. ನಾಯಕ ಪ್ಯಾಟ್ ಕಮ್ಮಿನ್ಸ್ (24) ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್ ಆಯಿತು. ಮಾರ್ಕ್ರಾಮ್ 20ರನ್ ಗಳಿಸಿದರು. ಕೋಲ್ಕತ್ತ ಬೌಲರ್‌ಗಳು ಎಲ್ಲಾ ವಿಕೆಟ್‌ಗಳನ್ನು ಪಡೆದರು. ಆಂಡ್ರೆ ರಸೆಲ್ 3 ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ, ನರೈನ್ ಮತ್ತು ಅರೋರಾ ಒಂದು ವಿಕೆಟ್ ಪಡೆದರು.
ಹೈದರಾಬಾದ್ ನೀಡಿದ 114ರನ್ಗಳ ಗುರಿ ಬೆನ್ನತ್ತಿದ ಕೆಕೆಆರ್, 10.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114 ರನ್ ಕಲೆಹಾಕಿ ವಿಜಯೋತ್ಸವ ಆಚರಿಸಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (52) ಅತ್ಯುತ್ತಮ ಆಟವಾಡಿದರು. (ಏಜೆನ್ಸೀಸ್)
SRH ಒಡತಿ ಕಾವ್ಯಾ ಮಾರನ್ ಡೇಟ್ ಮಾಡಿದವರ ಪಟ್ಟಿಯಲ್ಲಿ 10 ವರ್ಷ ಕಿರಿಯ ಆಟಗಾರನೂ ಇದ್ದಾನಂತೆ!?
ಹಳೆಯ ಘಟನೆ ಕೆದಕಿ SRH ತಂಡವನ್ನು ಅವಮಾನಿಸಿದ ಶಾರುಖ್ ಖಾನ್! ಇದನ್ನು ನಿರೀಕ್ಷೆ ಮಾಡಿರ್ಲಿಲ್ಲ ಅಂದ್ರು ಫ್ಯಾನ್ಸ್
ಗೆದ್ದಿದ್ದು ಕೆಕೆಆರ್ ಆದ್ರೆ ಟ್ರೆಂಡ್ ಆಗಿದ್ದು ಕಾವ್ಯಾ ಮಾರನ್! ಕ್ಯಾಮೆರಾಗೆ ಮುಖ ತೋರದೆ ಕಣ್ಣೀರಿಟ್ಟ SRH ಒಡತಿ