ಖೋಖೋ ವಿಶ್ವಕಪ್​ಗೆ ಕರ್ನಾಟಕದ ಗೌತಮ್​, ಚೈತ್ರಾ ಆಯ್ಕೆ; ಪ್ರತಿಕ್​, ಪ್ರಿಯಾಂಕಾಗೆ ಭಾರತ ತಂಡದ ಸಾರಥ್ಯ

web kho kho
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಜನವರಿ 13ರಿಂದ ನವದೆಹಲಿಯಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ಖೋಖೋ ವಿಶ್ವಕಪ್​ಗೆ ಆತಿಥೇಯ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಪ್ರಕಟಗೊಂಡಿದ್ದು, ಮಹಾರಾಷ್ಟ್ರದ ಪ್ರತಿಕ್​ ವೈಕರ್​ ಮತ್ತು ಪ್ರಿಯಾಂಕಾ ಇಂಗಲೆ ಕ್ರಮವಾಗಿ ನಾಯಕ ಮತ್ತು ನಾಯಕಿಯಾಗಿ ನೇಮಕಗೊಂಡಿದ್ದಾರೆ. ಕರ್ನಾಟಕದ ಗೌತಮ್​ ಎಂ.ಕೆ. ಪುರುಷರ ತಂಡದಲ್ಲಿ ಮತ್ತು ಚೈತ್ರಾ ಬಿ. ಮಹಿಳಾ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.

ಬೆಂಗಳೂರಿನ 24 ವರ್ಷದ ಗೌತಮ್​ ಆಲ್ರೌಂಡರ್​ ಆಗಿದ್ದು, 2009ರಿಂದಲೂ ಖೋಖೋ ಆಡುತ್ತ ಬಂದಿದ್ದಾರೆ. ಆಟೋ ಚಾಲಕನ ಪುತ್ರನಾಗಿರುವ ಗೌತಮ್​, ಅಲ್ಟಿಮೇಟ್​ ಖೋಖೋ ಲೀಗ್​ನಲ್ಲಿ ಒಡಿಶಾ ತಂಡದ ಪರ ಗಮನಸೆಳೆದಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುರದ ರೈತನ ಪುತ್ರಿಯಾಗಿರುವ ಚೈತ್ರಾ, ಈಗಾಗಲೆ 30ಕ್ಕೂ ಹೆಚ್ಚು ಬಾರಿ ಕರ್ನಾಟಕ ಖೋಖೋ ತಂಡದಲ್ಲಿ ಭಾಗಿಯಾಗಿದ್ದಾರೆ. ಚೈತ್ರಾ ಎರಡನೇ ವರ್ಷದ ಬಿಪಿಇಎಡ್​ ವಿದ್ಯಾರ್ಥಿನಿಯಾಗಿದ್ದಾರೆ. ಇವರಿಬ್ಬರೂ ಟೂರ್ನಿಗೆ ಪೂರ್ವಭಾವಿಯಾಗಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿದ್ದ ಮತ್ತೋರ್ವ ಕನ್ನಡತಿ ಮೋನಿಕಾ ಕೊನೇಕ್ಷಣದಲ್ಲಿ ಸ್ಥಾನ ವಂಚಿತರಾಗಿದ್ದಾರೆ.

ಜನವರಿ 19ರವರೆಗೆ 7 ದಿನಗಳ ಕಾಲ ನಡೆಯಲಿರುವ ಟೂರ್ನಿಯ ಪುರುಷರ ವಿಭಾಗದಲ್ಲಿ 20 ಮತ್ತು ಮಹಿಳಾ ವಿಭಾಗದಲ್ಲಿ 19 ತಂಡಗಳು ಸ್ಪರ್ಧಿಸಲಿವೆ. ಪಾಕಿಸ್ತಾನ ವೀಸಾ ಸಮಸ್ಯೆ ಮತ್ತು ಕೆನಡಾ ತಂಡ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಟೂರ್ನಿಯಿಂದ ಕೊನೇಕ್ಷಣದಲ್ಲಿ ಹಿಂದೆ ಸರಿದಿದೆ.

ಭಾರತ ಪುರುಷರ ಖೋಖೋ ತಂಡ: ಪ್ರತಿಕ್​ ವೈಕರ್​ (ನಾಯಕ), ಪ್ರಬಾನಿ ಸಬರ್​, ಮೆಹುಲ್​, ಸಚಿನ್​ ಭರ್ಗೊ, ಸುಯಶ್​ ಗರ್ಗಟೆ, ರಾಮ್​ಜಿ ಕಶ್ಯಪ್​, ಶಿವ ಪೊಥಿರ್​ ರೆಡ್ಡಿ, ಆದಿತ್ಯ ಗನ್​ಪುಲೆ, ಗೌತಮ್​ ಎಂ.ಕೆ, ನಿಖಿಲ್​ ಬಿ, ಆಕಾಶ್​ಕುಮಾರ್​, ಸುಬ್ರಮಣಿ ವಿ, ಸುಮನ್​ ಬರ್ಮನ್​, ಅಂಕಿತ್​ ಪೋತೆ, ಎಸ್​. ರಾಕೆಸನ್​ ಸಿಂಗ್​.

ಮೀಸಲು ಆಟಗಾರರು: ಅಕ್ಷಯ್​ ಬಂಗರೆ, ರಾಜ್ಯವರ್ಧನ್​ ಶಂಕರ್​ ಪಾಟೀಲ್​, ವಿಶ್ವನಾಥ್​ ಜಾನಕಿರಾಮ್​.

ಮಹಿಳಾ ತಂಡ: ಪ್ರಿಯಾಂಕಾ ಇಂಗಲೆ (ನಾಯಕಿ), ಅಶ್ವಿನಿ ಶಿಂಧೆ, ರೇಶ್ಮಾ ರಾಥೋಡ್​, ಬಿಲಾರ್​ ದೇವಜಿಭಾಯ್​, ನಿರ್ಮಲಾ ಭಾಟಿ, ನೀತಾ ದೇವಿ, ಚೈತ್ರಾ ಬಿ., ಸುಭಾಶ್ರೀ ಸಿಂಗ್​, ಮಗೈ ಮಜ್ಹಿ, ಅಂಶು ಕುಮಾರಿ, ವೈಷ್ಣವಿ ಭಜರಂಗ್​, ನಸ್ರೀನ್​ ಶೇಕ್​, ಮೀನು, ಮೋನಿಕಾ, ನಾಜಿಯಾ ಬಿಬಿ.

ಮೀಸಲು ಆಟಗಾರ್ತಿಯರು: ಸಂಪದ ಮೋರೆ, ರಿತಿಕಾ ಸಿಲೋರಿಯಾ, ಪ್ರಿಯಾಂಕಾ ಭೋಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net