ಸೌತ್ ಯುನೈಟೆಡ್ ಫುಟ್​ಬಾಲ್ ಕ್ಲಬ್​ನಿಂದ ಮೊಟ್ಟಮೊದಲ ಇಂಟರ್-ಸಿಟಿ ಟೂರ್ನಿ ಆಯೋಜನೆ

blank

ಬೆಂಗಳೂರು: ಸೌತ್ ಯುನೈಟೆಡ್ ಫುಟ್​ಬಾಲ್ ಕ್ಲಬ್ (SUFC) ಇಂಟರ್-ಸಿಟಿ ಟೂರ್ನಿಯ ಚೊಚ್ಚಲ ಆವೃತ್ತಿ ಜನವರಿ 11 ಮತ್ತು 12ರಂದು ಬೆಂಗಳೂರು ನಗರದ ಹಲಸೂರಿನ ಸೌತ್ ಯುನೈಟೆಡ್ ಫುಟ್​ಬಾಲ್ ಕ್ಲಬ್​ನಲ್ಲಿ ನಡೆಯಲಿದೆ. ಎಸ್​ಯುಎಫ್​ಸಿಯ ಬೆಂಗಳೂರು ಮತ್ತು ಪುಣೆ ಕೇಂದ್ರಗಳಿಂದ ಆರು ವಯೋಮಿತಿಯ ವಿಭಾಗಗಳಲ್ಲಿ 250ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ.

blank

ಇದು ಎಸ್​ಯುಎಫ್​ಸಿಯ ಪ್ರಥಮ-ಪ್ರಕಾರದ ಸ್ಪರ್ಧೆಯಾಗಿದ್ದು, ಈ ಟೂರ್ನಿಯಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಅಕಾಡೆಮಿ (SUFA) ಪುಣೆಯ ತಂಡಗಳು ಎಸ್​ಯುಎಫ್​ಎ ಬೆಂಗಳೂರು ತಂಡದ ವಿರುದ್ಧ ಸ್ಪರ್ಧಿಸಲಿದೆ. ಈ ಎರಡು ದಿನಗಳ ಆಕರ್ಷಕ ಟೂರ್ನಿಯು 250ಕ್ಕೂ ಹೆಚ್ಚು ಯುವ ಫುಟ್​ಬಾಲ್ ಆಟಗಾರರನ್ನು ಒಂದುಗೂಡಿಸುವ ಉದ್ದೇಶ ಹೊಂದಿದೆ. ತಳಮಟ್ಟದ ಫುಟ್​ಬಾಲ್ ಆಟಗಾರರು ತಮ್ಮ ಪ್ರಾಮುಖ್ಯತೆಯನ್ನು ಪ್ರದರ್ಶಿಸಲು ಬೆಂಗಳೂರಿನ ಆಧಾರಿತ ಕ್ಲಬ್‌ ವೇದಿಕೆಯನ್ನು ಒದಗಿಸುತ್ತದೆ.

ಉದಯೋನ್ಮುಖ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಈ ಟೂರ್ನಿಯನ್ನು ಆಯೋಜಿಸಲಾಗಿದೆ. ಸೌತ್ ಯುನೈಟೆಡ್ ಫುಟ್​ಬಾಲ್ ಕ್ಲಬ್ ಇಂಟರ್-ಸಿಟಿ ಟೂರ್ನಿಯು 7 ವಯೋಮಿತಿ, 9 ವಯೋಮಿತಿ, 11 ವಯೋಮಿತಿ, 13 ವಯೋಮಿತಿ, 15 ವಯೋಮಿತಿ ಮತ್ತು 17 ವಯೋಮಿತಿ ಸೇರಿ ಆರು ವಯೋಮಿತಿ ವಿಭಾಗಗಳನ್ನು ಒಳಗೊಂಡಿರುತ್ತದೆ. ಈ ಟೂರ್ನಿ ಎರಡು ದಿನಗಳ ಕಾಲ ನಡೆಯಲಿದ್ದು, ಕ್ರೀಡಾಪಟುಗಳು ಎರಡು ದಿನವೂ ಸ್ಪರ್ಧಿಸಲಿದ್ದಾರೆ. ಮೊದಲ ದಿನ ರೌಂಡ್- ರಾಬಿನ್ ಪಂದ್ಯಗಳು ಮತ್ತು ಎರಡನೇ ದಿನ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಈ ಟೂರ್ನಿ ಹೈ-ವೋಲ್ಟೇಜ್ ಮ್ಯಾಚ್ ಗಳನ್ನು ನೀಡುವುದರ ಜತೆಗೆ ಭಾಗವಹಿಸುವವರಿಗೆ ಫುಟ್​ಬಾಲ್ ಪರಿಸರದಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಸಹ ನೀಡುತ್ತದೆ.

ಕೇವಲ ಸ್ಪರ್ಧೆಯಷ್ಟೇ ಅಲ್ಲ ಇದರ ಆಚೆಗೂ ಟೂರ್ನಿ ಯುವ ಆಟಗಾರರಿಗೆ ವಿಶಿಷ್ಟ ಅನುಭವಗಳನ್ನು ಒದಗಿಸುತ್ತಿದೆ. ಸೌತ್ ಯುನೈಟೆಡ್ ಸ್ಪೋರ್ಟ್ಸ್ ಫೌಂಡೇಷನ್‌ನ ಸ್ಪೋರ್ಟಿಂಗ್ ಡೈರೆಕ್ಟರ್ ಟೆರಿ ಫೀಲನ್ ಅವರನ್ನು ಭೇಟಿಯಾಗುವ ಮತ್ತು ಕ್ಲಬ್‌ನ ಹಿರಿಯ ತಂಡದ ಆಟಗಾರರೊಂದಿಗೆ ಸಂವಹನ ಕಾರ್ಯಕ್ರಮ ಕೂಡ ಇರಲಿದೆ. ಜತೆಗೆ ಜನವರಿ 11ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಬೆಂಗಳೂರು ಎಫ್‌ಸಿ ಮತ್ತು ಮೊಹಮ್ಮದನ್ ಎಸ್‌ಸಿ ನಡುವಿನ ಇಂಡಿಯನ್ ಸೂಪರ್ ಲೀಗ್ (ISL) ಪಂದ್ಯದ ವೀಕ್ಷಣೆ ಸಹ ಆಯೋಜಿಸಿದೆ.

ಈ ಟೂರ್ನಿಯು ಎಸ್​ಯುಎಫ್​ಸಿಯ ಹೊಸ ವಸತಿ ಅಕಾಡೆಮಿ ಕಾರ್ಯಕ್ರಮಕ್ಕಾಗಿ ಸ್ಕೌಟಿಂಗ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರು ಸ್ಕಾಲರ್ ಶಿಪ್ ಗೆ ಆಯ್ಕೆಯಾಗುವ ಅವಕಾಶವನ್ನು ಪಡೆಯಲಿದ್ದಾರೆ. ಈ ಕಾರ್ಯಕ್ರಮದ ಉದ್ದೇಶ ತಳಮಟ್ಟದ ಮತ್ತು ವೃತ್ತಿಪರ ಅಭಿವೃದ್ಧಿಯ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಆಟಗಾರರ ಪ್ರಗತಿಗೆ ಸ್ಪಷ್ಟವಾದ ಮಾರ್ಗವನ್ನು ಒದಗಿಸಲು ಸಮಗ್ರ ತರಬೇತಿಯನ್ನು ಕಲ್ಪಿಸುವುದಾಗಿದೆ.

ಈ ಟೂರ್ನಿಯ ಬಗ್ಗೆ ಮಾತನಾಡಿದ ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್‌ನ ಸಿಇಒ ಪ್ರಣವ್ ಟ್ರೆಹಾನ್ ಅವರು, ‘ಎಸ್‌ಯುಎಫ್‌ಸಿ ಇಂಟರ್-ಸಿಟಿ ಟೂರ್ನಿ ಭಾರತದಲ್ಲಿ ತಳಮಟ್ಟದ ಫುಟ್‌ಬಾಲ್ ಅನ್ನು ಪ್ರೋತ್ಸಾಹಿಸಿಸುವುದಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ಯುವ ಆಟಗಾರರಿಗೆ ಪಂದ್ಯದ ಅನುಭವವನ್ನು ಪಡೆಯಲು ಮತ್ತು ಚಿಕ್ಕ ವಯಸ್ಸಿನಿಂದಲೇ ತಂತ್ರಗಳನ್ನು ಕಲಿಯಲು ಅವಕಾಶಗಳನ್ನು ಸೃಷ್ಟಿಸುವುದಾಗಿದೆ. ಈ ಪ್ರತಿಭಾವಂತ ಕ್ರೀಡಾಪಟುಗಳ ಉಜ್ವಲ ಭವಿಷ್ಯಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸುವ ಅತ್ಯುತ್ತಮ ಫುಟ್‌ಬಾಲ್, ಶಿಕ್ಷಣ ಮತ್ತು ಸಮುದಾಯ-ನಿರ್ಮಾಣವನ್ನು ಒಟ್ಟುಗೂಡಿಸುವ ವೇದಿಕೆಯನ್ನು ಒದಗಿಸಲು ನಾವು ಉತ್ಸುಕರಾಗಿದ್ದೇವೆ’ ಎಂದರು.

ಕ್ರೀಡೆ ಮತ್ತು ಶಿಕ್ಷಣವನ್ನು ಸಂಪರ್ಕಿಸಲು ಎಸ್​ಯುಎಫ್​ಸಿಯ ಉದ್ದೇಶಕ್ಕೆ ಅನುಗುಣವಾಗಿ, ಈ ಟೂರ್ನಿಯು ಕ್ಲಬ್‌ನ ಶೀಘ್ರದಲ್ಲಿ ಪ್ರಾರಂಭವಾಗುವ ವಸತಿ ಅಕಾಡೆಮಿ ಕಾರ್ಯಕ್ರಮವನ್ನು ಪರಿಚಯಿಸುವ ವಿಶೇಷ ಅಧಿವೇಶನವನ್ನು ಒಳಗೊಂಡಿರುತ್ತದೆ. ಇದು ಶೈಕ್ಷಣಿಕ ಮತ್ತು ಫುಟ್‌ಬಾಲ್ ತರಬೇತಿಯನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ.

ಪಂದ್ಯಾವಳಿಯ ಭಾಗವಾಗಿ, ಎಸ್​ಯುಎಫ್​ಸಿಯ ಮುಖ್ಯ ಸ್ಕೌಟ್ ಮತ್ತು ವಿಶ್ಲೇಷಕ, ಇಂದ್ರೇಶ್ ನಾಗರಾಜನ್, ಆಟಗಾರರಿಗೆ ವಿಶೇಷ ಕಾರ್ಯಗಾರವನ್ನು ನಡೆಸಲಿದ್ದು, ವೀಡಿಯೊ ವಿಶ್ಲೇಷಣೆಯನ್ನು ಬಳಸಿಕೊಂಡು ಪ್ರಮುಖ ಫುಟ್‌ಬಾಲ್ ಪರಿಕಲ್ಪನೆಗಳನ್ನು ಅರ್ಥಮಾಡಿಸಲಿದ್ದಾರೆ. ಈ ಕಾರ್ಯಾಗಾರವು ಆಟಗಾರರ ವೀಕ್ಷಣೆ, ಪ್ರತಿಬಿಂಬ ಮತ್ತು ಕಾರ್ಯಕ್ಷಮತೆಯ ಕೌಶಲ್ಯಗಳನ್ನು ಸುಧಾರಿಸುವ ಮೂಲಕ ಅವರ ಕಲಿಕೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

blank

ಎಸ್​ಯುಎಫ್​ಸಿ ಇಂಟರ್-ಸಿಟಿ ಟೂರ್ನಿ ಪಾಲುದಾರರ ಸಹಾಯವನ್ನು ಪಡೆದುಕೊಂಡಿದೆ. ಫುಡ್ ಮತ್ತು ಬೆವರೇಜ್ ಪಾಲುದಾರರಾಗಿ ಗ್ರಿಲ್ ಎನ್ ಚಿಲ್ ಸೇರಿಕೊಂಡಿದ್ದು, ಟೂರ್ನಿ ಅವಧಿಯಲ್ಲಿ ಭಾಗವಹಿಸುವವರಿಗೆ ಆಹಾರದ ವ್ಯವಸ್ಥೆಯನ್ನು ನೀಡಲಿದ್ದಾರೆ. ಹೊಸ್ಮಟ್ ಆಸ್ಪತ್ರೆಯು ಮೆಡಿಕಲ್ ಪಾಲುದಾರರ ಪ್ರಮುಖ ಪಾತ್ರ ವಹಿಸಿ ಸ್ಥಳದಲ್ಲಿಯೇ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸುತ್ತದೆ. ಶಿಕ್ಷಣ ಪಾಲುದಾರರಾಗಿ ಪ್ರೊಸ್​ ಎಜು, ಕ್ರೀಡೆಗಳು ಮತ್ತು ಶಿಕ್ಷಣ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಪುಮಾ ಇಂಡಿಯಾ ಮರ್ಚಂಡೈಸ್ ಪಾಲುದಾರರಾಗಿ ತನ್ನ ಬೆಂಬಲವನ್ನು ಮುಂದುವರೆಸಿದ್ದು, ವಿಜೇತರು ಮತ್ತು ರನ್ನರ್-ಅಪ್‌ಗಳಿಗೆ ರಿಯಾಯಿತಿ ಕೂಪನ್‌ಗಳನ್ನು ನೀಡುತ್ತದೆ. ಫೋರ್ಜಾ ಫುಟ್‌ಬಾಲ್ ಲಾಜಿಸ್ಟಿಕ್ಸ್ ಪಾಲುದಾರರಾಗಿ ಸೇರುತ್ತಿದೆ ಹಾಗು ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆಯು ಯುವ ಕ್ರೀಡಾಪಟುಗಳಿಗೆ ಬೋರ್ಡಿಂಗ್ ಮತ್ತು ವಸತಿಗೆ ಸಹಾಯ ಮಾಡುತ್ತದೆ. ಹೆಲ್ತಿ ಪ್ಲಾಟರ್ಸ್ ಕೂಡ ಪುಣೆಯ ಸ್ನ್ಯಾಕ್ ಪಾಲುದಾರರಾಗಿ ಸೇರಿಕೊಂಡಿದೆ. ಈ ಟೂರ್ನಿ ತಳಮಟ್ಟದ ಪ್ರತಿಭೆಯನ್ನು ಬೆಳೆಸುವಲ್ಲಿ , ಕ್ರೀಡೆ ಮತ್ತು ಶಿಕ್ಷಣದ ನಡುವೆ ಸೇತುವೆ ನಿರ್ಮಿಸುವಲ್ಲಿ ಸೌತ್ ಯುನೈಟೆಡ್ ಫುಟ್​ಬಾಲ್ ಕ್ಲಬ್ ಪ್ರಮುಖ ಪಾತ್ರವಹಿಸಲಿದೆ.

ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಜಸ್​ಪ್ರೀತ್​ ಬುಮ್ರಾ ಉಪನಾಯಕ?

TAGGED:
Share This Article

Health Tips | ತುಪ್ಪ & ಜೇನುತುಪ್ಪವನ್ನು ಒಟ್ಟಿಗೆ ತಿನ್ನುವುದು ವಿಷಕಾರಿಯೇ?; ಇಲ್ಲಿದೆ ಹೆಲ್ತಿ ಮಾಹಿತಿ

ತುಪ್ಪ ಮತ್ತು ಜೇನುತುಪ್ಪ ಎರಡೂ ವ್ಯಕ್ತಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಯುರ್ವೇದದಲ್ಲಿ ಇವೆರಡನ್ನೂ ಬಹಳ ಮುಖ್ಯವೆಂದು…

ತೂಕ ಇಳಿಸಲು ಫ್ರೂಟ್ಸ್​​ ಅಥವಾ ಜ್ಯೂಸ್​​​​ ಯಾವುದು ಉತ್ತಮ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಬೇಸಿಗೆಕಾಲ ಮಾತ್ರವಲ್ಲ ಬಹಳಷ್ಟು ಜನರು ಆರೋಗ್ಯದ ದೃಷ್ಟಿಯಿಂದ ಫ್ರೂಟ್​ ಜ್ಯೂಸ್​​​ ಅನ್ನು ಕುಡಿಯುತ್ತಾರೆ. ಹಣ್ಣುಗಳ ರಸ…

ಚಳಿಗಾಲದಲ್ಲಿ ಈ ಜ್ಯೂಸ್ ಕುಡಿದರೆ ಸಾಕು….ಸರ್ವ ರೋಗಕ್ಕೂ ಮದ್ದು spinach juice

spinach juice: ಚಳಿಗಾಲದಲ್ಲಿ ಹಲವು ರೀತಿಯ ಸಮಸ್ಯೆಗಳು ಕಾಡುತ್ತವೆ.  ಚಳಿಗಾಲದಲ್ಲಿ ಒಂದು ಜ್ಯೂಸ್ ಸೇವಿಸುವುದರಿಂದ ಹಲವಾರು…