More

    ಅಂತಹ ಮೈಂಡ್​ಲೆಸ್​ ಚಿತ್ರ ನೋಡುವುದಿಲ್ಲ … ‘ಕೆಜಿಎಫ್​ 2’ ಬಗ್ಗೆ ಕಿಶೋರ್​ ಮಾತು

    ಬೆಂಗಳೂರು: ಇತ್ತೀಚೆಗಷ್ಟೇ ಟ್ವಿಟರ್​ ಖಾತೆ ಸಸ್ಪೆಂಡ್​ ಆದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದರು ನಟ ಕಿಶೋರ್​. ಆ ನಂತರ ತನ್ನ ಖಾತೆಯು ವಿವಾದಿತ ಟ್ವೀಟ್​ಗಳಿಂದ ಸಸ್ಪೆಂಡ್​ ಆಗಿಲ್ಲ, ಹ್ಯಾಕ್​ ಆಗಿದ್ದರಿಂದ ಮುಂದಾಗುವ ತೊಂದರೆಗಳನ್ನು ತಪ್ಪಿಸುವುದಕ್ಕೆ ಸಸ್ಪೆಂಡ್​ ಮಾಡಲಾಗಿದೆ ಎಂದು ಹೇಳುವ ಮೂಲಕ ಪ್ರಕರಣವನ್ನು ತಿಳಿಗೊಳಿಸಿದ್ದರು.

    ಇದನ್ನೂ ಓದಿ: ಯಕ್ಷಗಾನ ಥ್ರಿಲ್ಲರ್ ಯಾನ; ವಿಜಯವಾಣಿ ಸಿನಿಮಾ ವಿಮರ್ಶೆ

    ಈಗ ಅವರ ಹೇಳಿಕೆಯೊಂದು ವಿವಾದಕ್ಕೆ ತಿರುಗಿದೆ. ‘ಕೆಜಿಎಫ್​ 2’ ಚಿತ್ರದ ಬಗ್ಗೆ ಕಿಶೋರ್​ ಆಡಿರುವ ಮಾತುಗಳು ಯಶ್​ ಅಭಿಮಾನಿಗಳನ್ನು ಕೆರಳಿಸಿದೆ. ಇಷ್ಟಕ್ಕೂ ಆಗಿದ್ದೇನೆಂದರೆ, ‘ಕೆಜಿಎಫ್​ 2’ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ತಾನು ಅಂತಹ ಮೈಂಡ್​ಲೆಸ್​ ಚಿತ್ರವನ್ನು ನೋಡುವುದಿಲ್ಲ ಎಂದು ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ನಾನು ಆ ಚಿತ್ರವನ್ನು ನೋಡಿಲ್ಲ. ಅಂತಹ ಮೈಂಡ್​ಲೆಸ್​ ಸಿನಿಮಾಗಳನ್ನು ನೋಡುವುದಕ್ಕಿಂತ ಸಣ್ಣ ಅಥವಾ ಅಷ್ಟೇನೂ ಯಶಸ್ವಿಯಲ್ಲದ ಚಿತ್ರಗಳನ್ನು ನೋಡುವುದಕ್ಕೆ ಇಷ್ಟಪಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ಈ ಮಾತು ಕೇಳಿ ಯಶ್​ ಅಭಿಮಾನಿಗಳು ಸಹಜವಾಗಿಯೇ ಸಿಟ್ಟಾಗಿದ್ದಾರೆ.

    ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಕತ್ರೀನಾ ಕೈಫ್​? ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ …

    ಇಷ್ಟಕ್ಕೂ ಕಿಶೋರ್​ ಹೀಗೆ ಮಾತನಾಡಿದ್ದೆಲ್ಲಿ ಅಥವಾ ಉತ್ತರಿಸಿದ್ದು ಯಾರಿಗೆ? ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಆದರೆ, ಅವರ ಮಾತುಗಳ ಬಗೆ ಸೋಷಿಯಲ್​ ಮೀಡಿಯದಲ್ಲಿ ಚರ್ಚೆಯಂತೂ ಜೋರಾಗಿದೆ.

    ಗಂಡಸರಿಗೆ ಮಾತ್ರ ಅಫೇರ್​ ಇಟ್ಟುಕೊಳ್ಳುವ ಹಕ್ಕಿದೆ ಎಂದಿದ್ದರಂತೆ ಸಲ್ಮಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts