ವಿದ್ಯೆ, ವಿನಯ ಮೈಗೂಡಿಸಿದರೆ ಯಶಸ್ವಿ ಭವಿಷ್ಯ : ಶ್ರೇಯಾ ಎಂ.ಜೆ.ಸುಳ್ಯ ಕರೆ

New Project (26)
Published on

ಕಿನ್ನಿಗೋಳಿ: ಮಕ್ಕಳು ಎಳವೆಯಲ್ಲಿಯೇ ವಿದ್ಯೆ, ವಿನಯ, ಸನ್ನಡತೆ ಮೈಗೂಡಿಸಿಕೊಂಡು ಸಾಧನೆ ವಾಡಬೇಕು. ಇದರಿಂದ ಯಶಸ್ವಿ ಭವಿಷ್ಯ ರೂಪಿಸಲು ಸಾಧ್ಯ ಎಂದು ಸುಳ್ಯ ಎನ್.ಎಂ.ಸಿ. ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಶ್ರೇಯಾ ಎಂ.ಜೆ.ಸುಳ್ಯ ಹೇಳಿದರು.

ಕಿನ್ನಿಗೋಳಿಯಲ್ಲಿ ಇತ್ತೀಚೆಗೆ ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ವಾಯ್ಸ ಆಫ್ ಆರಾಧನಾ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮಕ್ಕಳ ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಶಾಲೆಯ ವಿದ್ಯಾರ್ಥಿ ಕೇಶವ ಭಟ್ ಮಕ್ಕಳ ಹಬ್ಬ ಉದ್ಘಾಟಿಸಿದರು. ಅರ್ಚಿತ್ ಕಶ್ಯಪ್ ಮೂಡುಬಿದಿರೆ ವಿರಚಿತ ಲಿಟ್ಲ್ ಬರ್ಡ್ ಚಾಂಪಿಂಗ್ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹವ್ಮಾಯೀ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್, ತನು ಇಲೆಕ್ಟ್ರಿಕಲ್ಸ್‌ನ ಅಜಿತ್ ಕೆರೆಕಾಡು, ಮೂಡುಬಿದಿರೆ ಜಾನಪದ ಅಕಾಡೆಮಿ ತಾಲೂಕು ಟಕದ ಅಧ್ಯಕ್ಷೆ ಪದ್ಮಶ್ರೀ ಭಟ್, ಅರುಣ ಅಜೆಕಾರು, ಮೂಲ್ಕಿ ಹೋಬಳಿ ಕಸಾಪ ಅಧ್ಯಕ್ಷ ಜೊಸ್ಸಿ ಪಿಂಟೋ, ಸಾಯಿನಾಥ ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದರು.

ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಉಪನ್ಯಾಸಕ ಪು.ಗುರುಪ್ರಸಾದ್ ಭಟ್ ನಿರೂಪಿಸಿದರು. ಬಳಿಕ ಮಕ್ಕಳ ಕವಿಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net