ಶಿಥಿಲಾವಸ್ಥೆಯಲ್ಲಿ ಕಿಂಡಿ ಅಣೆಕಟ್ಟು: ಸಾರ್ವಜನಿಕರು ಸಂಚರಿಸದಂತೆ ಬ್ಯಾರಿಕೇಡ್ ಅಳವಡಿಕೆ

barricade
Published on

ಸುಳ್ಯ: ಪೆರುವಾಜೆ ಕಡೆಯಿಂದ ಕೊಡಿಯಾಲ ಸಂಪರ್ಕಿಸುವ ಏನಡ್ಕ ಸಾರಕರೆ ಕಿಂಡಿ ಅಣೆಕಟ್ಟಿನ ಮೇಲೆ ಸಾರ್ವಜನಿಕರು ಸಂಚರಿಸದಂತೆ ಪಂಚಾಯಿತಿ ಬ್ಯಾರಿಕೇಡ್ ಅಳವಡಿಸಿದೆ.

ಬೆಳ್ಳಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೊಡಿಯಾಲ ಗ್ರಾಮಲೆಕ್ಕಾಧಿಕಾರಿಗಳು ಸೋಮವಾರ ಭೇಟಿ ನೀಡಿ ಬ್ಯಾರಿಕೇಡ್ ಅಳವಡಿಸಿರುವುದಾಗಿ ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಶಿಥಿಲಗೊಂಡ ಕಿಂಡಿ ಅಣೆಕಟ್ಟನ್ನು ಸುಳ್ಯ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಇಒ ವೀಕ್ಷಿಸಿ ದುರಸ್ತಿಗೆ ಸೂಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net