blank

ವಾರದಲ್ಲಿ ಎರಡು ಬಾರಿ ಈ ಜ್ಯೂಸ್​ ಕುಡಿದರೆ ಸಾಕು ನಿಮ್ಮ ಕಿಡ್ನಿಗಳು ಫುಲ್​ ಕ್ಲೀನ್​ ಆಗಿಬಿಡುತ್ತವೆ! Kidney Health

Kidney Health

Kidney Health : ಮೂತ್ರಪಿಂಡಗಳನ್ನು ಮಾನವ ದೇಹದ ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಈ ಮೂತ್ರಪಿಂಡಗಳು ರಕ್ತವನ್ನು ಶೋಧಿಸುವುದು, ದ್ರವ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವುದು, ತ್ಯಾಜ್ಯವನ್ನು ತೆಗೆದುಹಾಕುವುದು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಂತಹ ಹಲವು ಪ್ರಮುಖ ಕಾರ್ಯಗಳನ್ನು ನಮ್ಮ ದೇಹದಲ್ಲಿ ನಿರ್ವಹಿಸುತ್ತವೆ.

ಮೂತ್ರಪಿಂಡಗಳು ದೇಹವನ್ನು ಶುದ್ಧೀಕರಿಸುವ ಪ್ರಮುಖ ಕೆಲಸವನ್ನು ಮಾಡುವುದರಿಂದ ಅವುಗಳಲ್ಲಿ ವಿಷಕಾರಿ ವಸ್ತುಗಳು ಹೆಚ್ಚಾಗಿ ಸಂಗ್ರಹವಾಗುವ ಸಾಧ್ಯತೆಯಿದೆ. ವಿಷಕಾರಿ ವಸ್ತುಗಳು ಸಂಗ್ರಹವಾದಾಗ, ಅವುಗಳನ್ನು ಆಗಾಗ ಸಂಪೂರ್ಣವಾಗಿ ಹೊರಹಾಕಬೇಕು. ಇಲ್ಲದಿದ್ದರೆ, ಆ ವಿಷಕಾರಿ ವಸ್ತುಗಳು ಸಂಗ್ರಹದಿಂದ ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗುತ್ತವೆ.

ಸಮಪರ್ಕವಾಗಿ ನೀರು ಕುಡಿಯುವುದರಿಂದ ಮೂತ್ರಪಿಂಡಗಳಿಂದ ವಿಷವನ್ನು ಹೊರಹಾಕಬಹುದಾದರೂ, ಕೆಲವು ಪಾನೀಯಗಳು ಹೆಚ್ಚು ಪರಿಣಾಮಕಾರಿಯಾಗಿ ವಿಷವನ್ನು ಕಿಡ್ನಿಗಳಿಂದ ಹೊರಹಾಕುತ್ತವೆ. ಅಂತಹ ಪಾನೀಯಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ಬೀಟ್​ರೂಟ್ ಜ್ಯೂಸ್​

ಇತರೆ ತರಕಾರಿಗಳಿಗಿಂತ ಭಿನ್ನವಾಗಿ ಬೀಟ್‌ರೂಟ್ ಮೂತ್ರಪಿಂಡ ಮತ್ತು ಯಕೃತ್ತಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೀಟ್‌ರೂಟ್‌ನಲ್ಲಿರುವ ಫೈಬರ್ ರಕ್ತವನ್ನು ಶುದ್ಧೀಕರಿಸುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೀಟ್‌ರೂಟ್, ಕ್ಯಾರೆಟ್ ಮತ್ತು ಸ್ವಲ್ಪ ಶುಂಠಿಯನ್ನು ಒಟ್ಟಿಗೆ ಜಜ್ಜಿ, ರಸವನ್ನು ಹೊರತೆಗೆದು, ಅದಕ್ಕೆ ನಿಂಬೆ ರಸವನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮೂತ್ರಪಿಂಡಗಳು ಶುದ್ಧವಾಗುತ್ತದೆ.

ಇದನ್ನೂ ಓದಿ: ಇರುವೆಗಳಿಗೆ ಸಕ್ಕರೆ ಅಂದ್ರೆ ಏಕೆ ಇಷ್ಟ? ಸಿಹಿ ಕಂಡೊಡನೆ ಮುತ್ತಿಕೊಳ್ಳುವುದೇಕೆ? ಇಲ್ಲಿದೆ ನೋಡಿ ಅಚ್ಚರಿ ಕಾರಣ! Ants Like Sugar

ಆ್ಯಪಲ್ ಸೈಡರ್ ವಿನೆಗರ್

ಯಕೃತ್ತು ಶುದ್ಧೀಕರಿಸುವ ಪಾನೀಯಗಳಲ್ಲಿ ಆ್ಯಪಲ್ ಸೈಡರ್ ವಿನೆಗರ್ ಮೊದಲ ಸ್ಥಾನದಲ್ಲಿದೆ ಮತ್ತು ದೇಹದಲ್ಲಿ ಪಿಎಚ್​ ಸಮತೋಲನವನ್ನು ಕಾಯ್ದುಕೊಳ್ಳಲು ಸಹ ಇದು ಕೆಲಸ ಮಾಡುತ್ತದೆ. ಆ್ಯಪಲ್ ಸೈಡರ್ ವಿನೆಗರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮೂತ್ರಪಿಂಡದ ಕಾರ್ಯವನ್ನು ಉತ್ತೇಜಿಸುತ್ತದೆ. ಈ ಆ್ಯಪಲ್ ಸೈಡರ್ ವಿನೆಗರ್ ಅನ್ನು ಒಂದು ಟೀ ಚಮಚ ತೆಗೆದುಕೊಂಡು, ಅದನ್ನು 1 ಗ್ಲಾಸ್ ನೀರಿನಲ್ಲಿ ಬೆರೆಸಿ, 1 ಚಿಟಿಕೆ ಮೆಣಸಿನ ಪುಡಿಯನ್ನು ಸೇರಿಸಿ ಬೆಳಿಗ್ಗೆ ಕುಡಿಯಿರಿ. ಇದು ಮೂತ್ರಪಿಂಡಗಳಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಅವುಗಳ ಆರೋಗ್ಯವನ್ನು ಸ್ಥಿರಗೊಳಿಸುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ಇನ್ನೇನು ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ! Snake

ಟ್ರ್ಯಾಕ್ಟರ್​ ಡ್ರೈವರ್​ ಮೇಲೆ ದಾಳಿ ಮಾಡಿದ ದೆವ್ವ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್! Ghost attacks

Share This Article

ಹೆಚ್ಚಾದರೆ ದೇಹದ ಬೊಜ್ಜು ಭವಿಷ್ಯವಾದೀತು ನಜ್ಜುಗುಜ್ಜು

‘ಏನಾದ್ರೂ ಮಾಡಿ ಹೇಗಾದ್ರೂ ಮಾಡಿ ಸಾರ್, ಈ ಹೊಟ್ಟೆ ಕರಗಿ ಮೊದಲಿನಂತಾದರೆ ಸಾಕು. ನನಗಿನ್ನೂ ಮದುವೆಯಾಗಿಲ್ಲ.…

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…