Ghost attacks : ಭೂಮಿಯ ಮೇಲೆ ಅನೇಕ ಕುತೂಹಲಕಾರಿ ಸಂಗತಿಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಕೆಲವು ನಿಜವೇ ಎಂಬುದು ಇನ್ನು ಬಹುತೇಕರಿಗೆ ನಂಬಲು ಆಗುತ್ತಿಲ್ಲ. ಏಕೆಂದರೆ, ಅಷ್ಟು ನಿಗೂಢವಾಗಿರುತ್ತವೆ. ಸಾಮಾನ್ಯವಾಗಿ ನಮ್ಮ ನಡುವೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಏಲಿಯನ್ಗಳ ನಿಜಕ್ಕೂ ಇದೆಯಾ? ಅಥವಾ ಇಲ್ಲವೇ?, ದೇವರು ಅಸ್ತಿತ್ವದಲ್ಲಿರುವನೇ? ಅಥವಾ ಇಲ್ಲವೇ? ಮತ್ತು ದೆವ್ವಗಳು ಇದೆಯಾ? ಅಥವಾ ಇಲ್ಲವೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಆಗಾಗ ಬಿರುಸಿನ ಚರ್ಚೆಗಳು ನಡೆಯುವುದು ಸಾಮಾನ್ಯ.
ಅದರಲ್ಲೂ ದೆವ್ವಗಳ ಇರುವಿಕೆ ಬಗ್ಗೆ ಸಾಕಷ್ಟು ಮಾತುಗಳನ್ನು ಕೇಳಿದ್ದೇವೆ. ತಮ್ಮ ಅನುಭವಕ್ಕೆ ಬಂದಂತಹ ಸಂಗತಿಗಳನ್ನು ಅನೇಕರು ಹೇಳಿದಾಗ ಕೆಲವರು ನಂಬದೇ ಕುಹಕವಾಡುತ್ತಾರೆ. ಮನುಷ್ಯ ಬೇರೆ ಬೇರೆ ಗ್ರಹಗಳತ್ತ ಹೆಜ್ಜೆ ಹಾಕುತ್ತಿರುವ ಆಧುನಿಕ ಕಾಲದಲ್ಲಿ ಇದನೆಲ್ಲ ನಂಬುವುದು ಮೂರ್ಖತನ ಎಂದು ವಾದಿಸುತ್ತಾರೆ. ಆದರೆ, ಅನುಭವಕ್ಕೆ ಬಂದವರು ದೆವ್ವ ಇದೆ ಎನ್ನುತ್ತಾರೆ.
ಇನ್ನು ಭೂತ ಅಥವಾ ದೆವ್ವಗಳು ಮನುಷ್ಯನನ್ನು ಕಾಡುವಂತಹ ದೃಶ್ಯಗಳನ್ನು ನಾವು ಕತೆಗಳಲ್ಲಿ ಕೇಳಿರುತ್ತೇವೆ ಅಥವಾ ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ, ನಿಜ ಜೀವನದಲ್ಲಿಯೂ ಇದು ನಡೆದಿದೆ ಎಂದರೆ ನೀವು ನಂಬುತ್ತೀರಾ? ಹೌದು ಅಂತಿದ್ದಾರೆ ತೆಲಂಗಾಣದ ಈ ಗ್ರಾಮದ ಜನರು.
ಪ್ರೇತಗಳಿಂದ ದಾಳಿಗಳು ನಡೆದಿವೆ ಎಂಬುದಕ್ಕೆ ನಿಜ ಜೀವನದಲ್ಲಿ ಯಾವುದೇ ಪುರಾವೆಗಳಿಲ್ಲ. ಆದರೆ, ತೆಲಂಗಾಣದ ವಾರಂಗಲ್ ಜಿಲ್ಲೆಯ ನರಸಂಪೇಟ ಮಂಡಲದಲ್ಲಿ ಪ್ರೇತವೊಂದು ದಾಳಿ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ನರಸಂಪೇಟೆ ಪುರಸಭೆಗೆ ವಿಲೀನಗೊಂಡಿರುವ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂಬ ಸುದ್ದಿ ಹೊರಬಂದಿದೆ.
ನರಸಂಪೇಟೆ ಪುರಸಭೆಯ ಮುತ್ತೋಜಿಪೇಟೆಯಿಂದ ಮುತ್ಯಾಲಮ್ಮ ತಾಂಡಾಕ್ಕೆ ಹೋಗುವ ದಾರಿಯಲ್ಲಿ ಅಕ್ಕಿ ಗಿರಣಿ ಬಳಿ ಒಂದು ದೊಡ್ಡ ಆಲದ ಮರವಿದೆ. ಈ ಪ್ರದೇಶದಲ್ಲಿ ಕೆಲವು ಸಮಯದಿಂದ ದೆವ್ವವಿದೆ ಎಂಬ ವದಂತಿ ಹರಡಿದೆ. ಈ ಹಿನ್ನೆಲೆಯಲ್ಲಿ, ಎರಡು ಅಥವಾ ಮೂರು ದಿನಗಳ ಹಿಂದೆ ಮಧ್ಯರಾತ್ರಿಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ಚಾಲಕನ ಮೇಲೆ ದೆವ್ವ ದಾಳಿ ಮಾಡಿ ಗಾಯಗೊಳಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ವೈರಲ್ ಆಗಿವೆ.
ದೆವ್ವ ದಾಳಿಯ ವದಂತಿ ತೀವ್ರಗೊಂಡಿದ್ದರೂ, ಸ್ಥಳೀಯ ಗ್ರಾಮದ ಸುತ್ತಮುತ್ತ ಯಾವುದೇ ಚಾಲಕ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಅನೇಕ ಮಾಧ್ಯಮಗಳು ಕ್ಷೇತ್ರ ಪರಿಶೀಲನೆ ಮಾಡಿದಾಗ ಇದು ಸ್ಪಷ್ಟವಾಗಿದೆ. ಆದಾಗ್ಯೂ, ಹಳ್ಳಿಗಳ ಜನರು ಭಯಭೀತರಾಗಿದ್ದಾರೆ. ಭಯ ಹುಟ್ಟಿಸಲು ಬೇಕಂತಲೇ ಕೆಲ ಕಿಡಿಗೇಡಿಗಳು ಈ ಫೋಟೋಗಳನ್ನು ಹರಿಬಿಟ್ಟಿದ್ದಾರೆ ಎಂಬ ಆರೋಪವಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿದ್ಯಾವಂತ ಜನರು ಒತ್ತಾಯಿಸುತ್ತಿದ್ದಾರೆ. (ಏಜೆನ್ಸೀಸ್)
ಗೇ ಆ್ಯಪ್ನಲ್ಲಿ ಪರಿಚಯ: ಕರೆದ ಕೂಡಲೇ ಮನೆಗೆ ಹೋದ ಯುವಕನಿಗೆ ಕಾದಿತ್ತು ಬಿಗ್ ಶಾಕ್! Gay App