ಯುವತಿಯನ್ನು ಅಪಹರಿಸಿ 14 ವರ್ಷ ಸಾವಿರಕ್ಕೂ ಹೆಚ್ಚು ಬಾರಿ ರೇಪ್​: ಕಾಮುಕನ ಮತ್ತೊಂದು ಭಯಾನಕ ರಹಸ್ಯ ಬಯಲು

Russia Accused (1)
Published on

ಮಾಸ್ಕೋ: ಮಹಿಳೆಯೊಬ್ಬಳನ್ನು ಅಪಹರಿಸಿ 14 ವರ್ಷ ಆಕೆಯನ್ನು ಒತ್ತೆಯಾಳಾಗಿ ಇರಿಸಿಕೊಂಡು ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ 51 ವರ್ಷದ ಆರೋಪಿಯನ್ನು ರಷ್ಯಾದ ಮಾಸ್ಕೋ ಪೊಲೀಸರು ಬಂಧಿಸಿದ್ದಾರೆ.

ತಾಯಿಯೇ ಸಹಾಯ 

ಬಂಧಿತ ಆರೋಪಿಯನ್ನು ವ್ಲಾಡಿಮಿರ್​ ಚೆಸ್ಕಿಡೋವ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆಗೆ ಈಗ 33 ವರ್ಷ. ಆಕೆಯನ್ನು 2009ರಲ್ಲಿ ಕಿಡ್ನ್ಯಾಪ್​ ಮಾಡಲಾಗಿತ್ತು. ಆಕೆಯ ಮೇಲೆ ಸಾವಿರಕ್ಕೂ ಹೆಚ್ಚು ಬಾರಿ ಅತ್ಯಾಚಾರ ನಡೆದಿದೆ. ಆರೋಪಿ ಮನೆಯಿಂದ ಸಂತ್ರಸ್ತೆ ತಪ್ಪಿಸಿಕೊಂಡ ಬಳಿಕವೇ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆ ತಪ್ಪಿಸಿಕೊಳ್ಳಲು ಆರೋಪಿಯ ತಾಯಿಯೇ ಸಹಾಯ ಮಾಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಮದ್ಯ ಸೇವಿಸಲು ಆಹ್ವಾನ

ಆರೋಪಿ ಚೆಸ್ಕಿಡೋವ್ ಮಾನಸಿಕ ಸಮಸ್ಯೆಗಳಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಸಂತ್ರಸ್ತೆ 19 ವರ್ಷದವಳಿದ್ದಾಗ ಆಕೆಯನ್ನು ಆರೋಪಿ ಅಪಹರಿಸಿದ್ದಾನೆ. ಯುವತಿಯನ್ನು ತನ್ನ ಮನೆಗೆ ಮದ್ಯ ಸೇವಿಸಲು ಆರೋಪಿ ಆಹ್ವಾನಿಸಿದ್ದ. ಅವಳು ಮನೆಗೆ ಬಂದ ನಂತರ, ಆಕೆಯನ್ನು ಸೆರೆಯಲ್ಲಿಟ್ಟು 14 ವರ್ಷಗಳ ಕಾಲ ನಿರಂತವಾಗಿ ಹಿಂಸಿಸಿದ್ದಾನೆ.

ಬರ್ಬರವಾಗಿ ಥಳಿತ

ಚಾಕುವಿನಿಂದ ಸಾಯಿಸುವುದಾಗಿ ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಯುವತಿಗೆ ಪದೇಪದೆ ಚಿತ್ರಹಿಂಸೆ ನೀಡುತ್ತಿದ್ದ. ಆತ ಸಣ್ಣ ಪುಟ್ಟ ವಿಷಯಗಳಿಗೂ ಆಕೆಯನ್ನು ಬರ್ಬರವಾಗಿ ಥಳಿಸುತ್ತಿದ್ದ. ಆಕೆಯನ್ನು ಬೆದರಿಸಿ ಮನೆಗೆಲಸವನ್ನೂ ಮಾಡಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

2011ರಲ್ಲಿ ಕೊಲೆ

ಆರೋಪಿ ಮತ್ತೊಂದು ಯುವತಿಯನ್ನು ಕಿಡ್ನ್ಯಾಪ್​ ಮಾಡಿದ್ದು, ಆಕೆಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎಂದು ಸಂತ್ರಸ್ತೆಯ ಹೇಳಿದ್ದಾಳೆ. 2011ರಲ್ಲಿ ನಡೆದ ಜಗಳಲ್ಲಿ ಆಕೆಯನ್ನು ಆರೋಪಿ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾಳೆ. ಆಕೆಯ ಹೇಳಿಕೆ ಬಳಿಕ ಪೊಲೀಸರು ಸ್ಮೊಲಿನೋ ಗ್ರಾಮದಲ್ಲಿರುವ ಆರೋಪಿ ಚೆಸ್ಕಿಡೋವ್​ ಮನೆಯನ್ನು ಪರಿಶೀಲಿಸಿದ್ದಾರೆ.

ಮೃತದೇಹ ಪತ್ತೆ

ಪರಿಶೀಲನೆ ವೇಳೆ ಆರೋಪಿ ಮನೆಯಲ್ಲಿ ಸೆಕ್ಸ್ ಆಟಿಕೆಗಳು ಮತ್ತು ಅಶ್ಲೀಲ ಸಿಡಿಗಳು ಪತ್ತೆಯಾಗಿವೆ. ಅವರ ಮನೆಯ ಬೇಸ್​ಮೆಂಟ್​ನಲ್ಲಿ ಮೃತದೇಹದ ಅವಶೇಷಗಳು ಸಹ ಪತ್ತೆಯಾಗಿವೆ. ಆರೋಪಿಯು ಪ್ರಸ್ತುತ ಪೊಲೀಸ್ ಕಣ್ಗಾವಲಿನಲ್ಲಿ ಮಾನಸಿಕ ಆರೋಗ್ಯ ಕೇಂದ್ರದಲ್ಲಿದ್ದಾನೆ. ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net