ಮೀರಾಬಾಯಿ ಸ್ಫೂರ್ತಿ: ವೇಟ್​ ಲಿಫ್ಟ್ ಮಾಡಿದ ಪುಟಾಣಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಚಾನು

meera
Published on

ನವದೆಹಲಿ: ಜಪಾನ್​ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಪೂರ್ತಿ ದೇಶವೇ ಅವರನ್ನು ಹಾಡಿ ಹೊಗಳಲಾರಂಭಿಸಿದೆ. ಅನೇಕರು ಆಕೆ ದೇಶದ ಯುವಜನತೆಗೆ ಸ್ಫೂರ್ತಿ ಎಂದು ಹೇಳಲಾರಂಭಿಸಿದ್ದಾರೆ. ಅದೇ ರೀತಿ ಇಲ್ಲೊಬ್ಬ ಬಾಲಕಿ ಮೀರಾಬಾಯಿಯನ್ನು ಯಾವ ರೀತಿಯಲ್ಲಿ ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾಳೆ ನೀವೇ ನೋಡಿ.

ಪುಟಾಣಿಯೊಬ್ಬಳು ಮನೆಯಲ್ಲಿ ವೇಟ್​ ಲಿಫ್ಟಿಂಗ್ ಮಾಡಿದ್ದಾಳೆ. ಹಿಂದಿರುವ ಟಿವಿಯಲ್ಲಿ ಮೀರಾಬಾಯಿ ವೇಟ್ ಲಿಫ್ಟ್ ಮಾಡಿರುವ ವಿಡಿಯೋ ಪ್ಲೇ ಆಗುತ್ತಿದ್ದು, ಅದರ ಮುಂದೆ ನಿಂತ ಬಾಲಕಿ ಅವಳಂತೆಯೇ ವೇಟ್ ಲಿಫ್ಟ್ ಮಾಡಿದ್ದಾಳೆ. ಮೀರಾಬಾಯಿ ಗೆಲುವಿನ ಖುಷಿಯೊಂದಿಗೆ ಕೈ ಬೀಸಿದಂತೆಯೇ ಬಾಲಕಿಯೂ ಕೈ ಬೀಸಿದ್ದಾಳೆ.

ಈ ವಿಡಿಯೋವನ್ನು ವೇಟ್​ ಲಿಫ್ಟರ್ ಸತೀಶ್ ಶಿವಲಿಂಗಂ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಜೂನಿಯರ್ ಮೀರಾಬಾಯಿ ಎಂದು ಹೇಳಿರುವ ಅವರು ಇದುವೇ ನಿಜವಾದ ಪ್ರೇರಣೆ ಎಂದು ಬರೆದುಕೊಂಡಿದ್ದಾರೆ. ಅದನ್ನು ಮೀರಾಬಾಯಿ ಕೂಡ ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಸೋ ಕ್ಯೂಟ್, ಜಸ್ಟ್​ ಲವ್ ದಿಸ್ ಎಂದು ಹೇಳಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net