

ಬೆಂಗಳೂರು: ಭಾರತೀಯ ಫುಟ್‌ಬಾಲ್‌ನ ಚಿತ್ರಣವನ್ನು ಬದಲಾಯಿಸುವ ಪ್ರಯತ್ನದ ನಿಟ್ಟಿನಲ್ಲಿ ಕರ್ನಾಟಕದ ಪ್ರೀಮಿಯರ್ ಫುಟ್‌ಬಾಲ್ ಕ್ಲಬ್ ಮತ್ತು ಅಕಾಡೆಮಿಯಾದ ಕಿಕ್‌ಸ್ಟಾರ್ಟ್ ಎಫ್‌ಸಿ, ಇಂಗ್ಲಿಷ್ ಪ್ರೀಮಿಯಮ್ ಲೀಗ್ನ (ಇಪಿಎಲ್) ಟೋಟನ್‌ಹ್ಯಾಮ್ ಹಾಟ್‌ಸ್ಪರ್ ಫುಟ್‌ಬಾಲ್ ಕ್ಲಬ್‌ನೊಂದಿಗೆ ಸಹಭಾಗಿತ್ವ ಸಹಭಾಗಿತ್ವಕ್ಕೆ ಸಹಿ ಹಾಕಿದೆ. ಟೋಟನ್‌ಹ್ಯಾಮ್‌ನ ರಾಯಭಾರಿಗಳಾದ ಲೆಡ್ಲಿ ಕಿಂಗ್ ಮತ್ತು ಓಸ್ವಾಲ್ಡೊ ಆರ್ಡಿಲ್ಸ್ ಹಾಜರಿದ್ದ ಈ ಕಾರ್ಯಕ್ರಮವು ಕರ್ನಾಟಕ ಮತ್ತು ಭಾರತೀಯ ಫುಟ್‌ಬಾಲ್ ಬೆಳವಣಿಗೆಯಲ್ಲಿ ಪ್ರಮುಖ ಕ್ಷಣವಾಗಿದೆ. ಈ ಸಹಭಾಗಿತ್ವವು, ಸ್ಥಳೀಯ ಕ್ರೀಡೆಯ ಅಭಿವೃದ್ಧಿಗೆ ನೆರವಾಗಲು ಎಲ್ಲ ಫುಟ್‌ಬಾಲ್ ಅಂಶಗಳಾದ್ಯಂತ ಎಳೆಯ ಆಟಗಾರರು ಮತ್ತು ಮಹತ್ವಾಕಾಂಕ್ಷೆಯುಳ್ಳ ಕೋಚ್‌ಗಳನ್ನು ಬೆಳೆಸಲು ನೆರವಾಗಲಿದೆ.
ಈ ಸಹಭಾಗಿತ್ವದ ಮೂಲಕ ಕಿಕ್‌ಸ್ಟಾರ್ಟ್ ಎಫ್‌ಸಿ, ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನ ಜಾಗತಿಕ ಫುಟ್ಬಾಲ್ ಕೋಚಿಂಗ್ ತಂಡದಿಂದ ತಾಂತ್ರಿಕ ಬೆಂಬಲ ಪಡೆದುಕೊಳ್ಳಲ್ಲಿದ್ದು, ಇವರು ಕ್ಲಬ್‌ನ ತರಬೇತಿ ಪಠ್ಯಕ್ರಮ ಮತ್ತು ಫುಟ್‌ಬಾಲ್‌ನ ಎಲ್ಲ ಅಂಶಗಳಿಗೆ ಆಕಾರ ಒದಗಿಸಲಿದ್ದಾರೆ. ಹೆಚ್ಚುವರಿಯಾಗಿ ಟೋಟನ್‌ಹ್ಯಾಮ್ ಹಾಟ್‌ಸ್ಪರ್ ತನ್ನ ತಾಂತ್ರಿಕ ಸಿಬ್ಬಂದಿಯನ್ನು ಬೆಂಗಳೂರಿನಲ್ಲೇ ಇರಿಸಿ, ಕಿಕ್‌ಸ್ಟಾರ್ಟ್ ಎಫ್ಸಿಎ ಇಂಗ್ಲಿಷ್ ಪ್ರಬಲಪಡೆಗೆ ಅನುಗುಣವಾಗಿ ಇರುವಂತೆ ಅದರ ತರಬೇತಿ ವಿಧಾನಗಳನ್ನು ತಯಾರಿಸಲಿದೆ.
ಈಗಾಗಲೆ ಪ್ರಶಂಸನೀಯ ದಾಖಲೆ ಹೊಂದಿರುವ ಕ್ಲಬ್‌ನ ಮಹಿಳಾ ತಂಡವು, ಇತ್ತೀಚೆಗೆ ಸಂಪೂರ್ಣಗೊಂಡ ಭಾರತೀಯ ಮಹಿಳಾ ಲೀಗ್ ಟೂರ್ನಿಯಲ್ಲಿ ರನ್ನರ್ ಅಪ್ ಅಗಿದೆ. ಕಿಕ್‌ಸ್ಟಾರ್ಟ್ ಎಫ್‌ಸಿ ಯಾವಾಗಲೂ ವಿವಿಧ ವರ್ಗಗಳಾದ್ಯಂತ ಆಟಗಾರರ ಬೆಳವಣಿಗೆಗೆ ಒತ್ತು ನೀಡುತ್ತಾ ಬಂದಿದೆ. ಆದ್ದರಿಂದಲೇ ಈ ಸಹಭಾಗಿತ್ವವು ಕರ್ನಾಟಕ ರಾಜ್ಯದಲ್ಲಿ ಕ್ಲಬ್‌ನ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಲು ಅನುಕೂಲಕರವಾಗಲಿದೆ.
ಎರಡೂ ಕ್ಲಬ್‌ಗಳಿಗೆ ಪ್ರಯೋಜನಕಾರಿಯಾಗಿರುವ ಈ ಸಹಭಾಗಿತ್ವವು, ಸ್ಪರ್ಧಾತ್ಮಕತೆಯ ಮೂಲಕ ಯುವ ತಂಡಗಳನ್ನು ಬಲಪಡಿಸುವತ್ತ ಬಲವಾದ ಪ್ರೇರಣೆ ಒದಗಿಸಲಿದೆ. ಪ್ರತಿಭಾ ಅಭಿವೃದ್ಧಿಗೆ ಸಹಯೋಗಗಳನ್ನು ರಚಿಸುತ್ತಾ, ಕಿಕ್‌ಸ್ಟಾರ್ಟ್ ಎಫ್ಸಿಯ ಯುವತಂಡವು, ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನ ಯುವ ತಂಡಗಳೊಂದಿಗೆ ತರಬೇತಿ ಪಡೆದುಕೊಳ್ಳಲು ಬ್ರಿಟನ್ಗೆ ಪ್ರಯಾಣ ಬೆಳೆಸುವ ಅವಕಾಶವನ್ನೂ ಪಡೆದುಕೊಳ್ಳಲಿದೆ.
ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗಿನ ಸಹಯೋಗವು, ಕಿಕ್‌ಸ್ಟಾರ್ಟ್ ಎಫ್ಸಿಯನ್ನು ಅಂತಾರಾಷ್ಟ್ರೀಯ ರಂಗಕ್ಕೆ ವರ್ಧಿಸಲಿದ್ದು, ಅದಕ್ಕೆ ಸರಿಸಾಟಿಯಿಲ್ಲದ ಅವಕಾಶಗಳು ಮತ್ತು ಗುರುತಿಸುವಿಕೆಯನ್ನು ಒದಗಿಸಲಿದೆ. ಕಿಕ್‌ಸ್ಟಾರ್ಟ್ ಫುಟ್‌ಬಾಲ್ ಆಡಳಿತ ಮಂಡಳಿಯ ದಾರ್ಶನಿಕ ನಾಯಕತ್ವವು ಅಖಿಲ-ಭಾರತ ಮಟ್ಟದಲ್ಲಿ ಫುಟ್‌ಬಾಲ್‍ಅನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಕಿಕ್‌ಸ್ಟಾರ್ಟ್ ಎಫ್ಸಿಯ ಸ್ಥಾಪಕ ಮತ್ತು ಚೇರ್ಮನ್ ಶೇಖರ್ ರಾಜನ್ ಸಹಭಾಗಿತ್ವದ ಬಗ್ಗೆ ಉತ್ಸಾಹ ವ್ಯಕ್ತಪಡಿಸುತ್ತ, ವಿಶ್ವ ಫುಟ್‌ಬಾಲ್‌ನಲ್ಲಿ ಅತಿದೊಡ್ಡ ಕ್ಲಬ್‌ಗಳ ಪೈಕಿ ಒಂದಾದ ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ದೊಂದಿಗೆ ಈ ಸಹಭಾಗಿತ್ವ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಇದರಿಂದ ಅನೇಕ ಅತ್ಯುತ್ತಮ ಪದ್ಧತಿಗಳನ್ನು ಕಲಿತುಕೊಂಡು ನಮ್ಮ ಯುವಜನ ಅಭಿವೃದ್ಧಿ ಹಾಗೂ ಮಹಿಳೆಯರ ಫುಟ್‌ಬಾಲ್‍ಅನ್ನು ಬಲಪಡಿಸುವ ಉದ್ದೇಶ ನಮಗಿರುವುದರಿಂದ ಈ ಸಹಭಾಗಿತ್ವವು ನಮಗೆ ಮತ್ತು ಎರಡೂ ಕ್ಲಬ್‌ಗಳಿಗೆ ನೆರವಾಗುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನಂಥ ಕ್ಲಬ್‌ನಿಂದ ಕಲಿಯುವುದು ಬಹಳಷ್ಟಿದೆ ಮತ್ತು ಅವೆಲ್ಲವನ್ನೂ ಅಳವಡಿಸಿಕೊಳ್ಳಲು ನಾವು ಕಾತರರಾಗಿದ್ದೇವೆ ಎಂದು ಹೇಳಿದರು.
ಕಿಕ್‌ಸ್ಟಾರ್ಟ್ ಎಫ್ಸಿಯ ಸ್ಥಾಪಕ ಮತ್ತು ಸಿಇಒ ಲಕ್ಷ್ಮಣ್ ಭಟ್ಟಾಚಾರ್ಯ, ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗಿನ ಈ ಸಹಯೋಗವು ಭಾರತದಲ್ಲಿ ಫುಟ್‌ಬಾಲ್ ಅಭಿವೃದ್ಧಿಗೆ ಮಾನದಂಡವನ್ನು ಹೆಚ್ಚಿಸುವ ನಮ್ಮ ಬದ್ಧತೆಗೆ ಪುರಾವೆಯಾಗಿದೆ. ಹಂಚಿಕೊಂಡ ನೈಪುಣ್ಯತೆ ಮತ್ತು ಸಂಪನ್ಮೂಲಗಳು ಕೇವಲ ನಮ್ಮ ಅಕಾಡೆಮಿಗೆ ಪ್ರಯೋಜನಕಾರಿಯಾಗಿರುವುದು ಮಾತ್ರವಲ್ಲದೆ, ಭಾರತೀಯ ಫುಟ್‌ಬಾಲ್‌ನ ಒಟ್ಟಾರೆ ಬೆಳವಣಿಗೆಗೂ ಕೊಡುಗೆ ಸಲ್ಲಿಸುತ್ತದೆ ಎಂಬ ವಿಶ್ವಾಸ ನಮಗಿದೆ. ನಾವು ಅತ್ಯಂತ ಕಾತರಗೊಂಡಿದ್ದೇವೆ ಮತ್ತು ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇರಿಸಿಕೊಂಡಿದ್ದೇವೆ ಎಂದು ಹೇಳಿದರು.
ಟೋಟನ್‌ಹ್ಯಾಮ್ ಹಾಟ್‌ಸ್ಪರ್ ಎಫ್ಸಿಯ ರಾಯಭಾರಿ ಲೆಡ್ಲಿ ಕಿಂಗ್, ಕಿಕ್‌ಸ್ಟಾರ್ಟ್ ಎಫ್ಸಿಯೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದು ನಮಗೆ ಗೌರವದ ವಿಷಯ ಮತ್ತು ಈ ಕ್ರೀಡೆಯ ಜಾಗತಿಕ ಆಕರ್ಷಣೆ ಮತ್ತು ಈ ಸುಂದರ ಆಟವು ಪ್ರೇರಣೆ ನೀಡುವ ಧನಾತ್ಮಕ ಬದಲಾವಣೆಗೆ ಒಂದು ಪುರಾವೆಯಾಗಿದೆ. ನಮ್ಮ ಜಾಗತಿಕ ಫುಟ್ಬಾಲ್ ಕೋಚಿಂಗ್ ತಂಡದ ಮೂಲಕ ಈ ಪ್ರದೇಶಕ್ಕೆ ನಾವು ನಿಜವಾದ ಕೋಚಿಂಗ್ ಕಲಿಕಾವಿಧಾನ ತರಲಿದ್ದು, ಕಿಕ್‌ಸ್ಟಾರ್ಟ್ ಎಫ್ಸಿಯೊಂದಿಗೆ ಭಾರತೀಯ ಫುಟ್‌ಬಾಲ್ ಕ್ಷೇತ್ರದ ಮೇಲೆ ಧನಾತ್ಮಕವಾದ ಮತ್ತು ದೀರ್ಘಾವಧಿ ಪ್ರಭಾವ ಬೀರುವ ಗುರಿ ಹೊಂದಿದ್ದೇವೆ. ಕಿಕ್‌ಸ್ಟಾರ್ಟ್ ಎಫ್ಸಿಯಲ್ಲಿರುವ ಯುವ ಆಟಗಾರರಿಗೆ ನಮ್ಮ ಕೋಚ್‌ಗಳು ತರುವ ವಿಶಿಷ್ಟ ಬ್ರ್ಯಾಂಡ್ಅನ್ನು ವೈಯಕ್ತಿಕವಾಗಿ ನಾನೇ ಪ್ರಯೋಜನ ಪಡೆದುಕೊಂಡಿದ್ದೇನೆ. ಈ ಕ್ಲಬ್‌ನ ಅಕಾಡೆಮಿ ಮೂಲಕ ನಾನು ಪ್ರಗತಿ ಸಾಧಿಸಿ ಪ್ರಪ್ರಥಮ ತಂಡ ನಾಯಕನಾಗಿ, ಪ್ರಮುಖ ಟೂರ್ನಿಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ ಎಂದರು.
ಕಿಕ್‌ಸ್ಟಾರ್ಟ್ ಎಫ್‌ಸಿ ಕುರಿತು: ಕಿಕ್‌ಸ್ಟಾರ್ಟ್ ಎಫ್‌ಸಿ ಕರ್ನಾಟಕದ ಪ್ರೀಮಿಯರ್ ಫುಟ್‌ಬಾಲ್ ಕ್ಲಬ್ ಮತ್ತು ಅಕಾಡೆಮಿಯಾಗಿದ್ದು, ಭಾರತದಲ್ಲಿ ಫುಟ್‌ಬಾಲ್ ಪ್ರತಿಭೆಯ ಅಭಿವೃದ್ಧಿ ಮತ್ತು ಪ್ರೋತ್ಸಾಹಕ್ಕೆ ಬದ್ಧವಾಗಿದೆ. ಸಮಗ್ರವಾದ ಆಟಗಾರ ಬೆಳವಣಿಗೆ ಹಾಗೂ ಅತ್ಯುತ್ಕೃಷ್ಟತೆಯ ಬದ್ಧತೆಯ ಮೇಲೆ ಗಮನ ಕೇಂದ್ರೀಕರಿಸುತ್ತಾ ಭಾರತೀಯ ಫುಟ್‌ಬಾಲ್ ಕ್ಷೇತ್ರದ ಮೇಲೆ ದೀರ್ಘಪ್ರಭಾವ ಬೀರುವುದು ಕಿಕ್‌ಸ್ಟಾರ್ಟ್ ಎಫ್ಸಿಯ ಗುರಿಯಾಗಿದೆ.
ಟೋಟನ್‌ಹ್ಯಾಮ್ ಹಾಟ್‌ಸ್ಪರ್ ಎಫ್.ಸಿ. ಕುರಿತು: ಟೋಟನ್‌ಹ್ಯಾಮ್ ಹಾಟ್‌ಸ್ಪರ್ ಎಫ್.ಸಿ. ಲಂಡನ್‌ನಲ್ಲಿರುವ ಜಾಗತಿಕವಾಗಿ ಪ್ರಸಿದ್ಧಿ ಹೊಂದಿರುವ ಫುಟ್‌ಬಾಲ್ ಕ್ಲಬ್ ಆಗಿದ್ದು, ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಪರ್ಧಿಸುತ್ತದೆ. ಸಮೃದ್ಧ ಇತಿಹಾಸ ಮತ್ತು ಅತ್ಯುತ್ಕೃಷ್ಟತೆಗೆ ಬದ್ಧತೆ ಹೊಂದಿರುವ ಟೋಟನ್‌ಹ್ಯಾಮ್ ಹಾಟ್‌ಸ್ಪರ್, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳೆರಡಲ್ಲೂ ಫುಟ್‌ಬಾಲ್ ಕ್ರೀಡೆಗೆ ಸಲ್ಲಿಸಿರುವ ತನ್ನ ಕೊಡುಗೆಗಳಿಗಾಗಿ ಹೆಸರುವಾಸಿಯಾಗಿದೆ.