ಹುಲಿನಾಯಕ ಫಸ್ಟ್​ ಲುಕ್​ ರಿಲೀಸ್​ ; ವೀರ ಸಿಂಧೂರ ಲಕ್ಷ್ಮಣ ಜೀವನಾಧಾರಿತ ಚಿತ್ರಕ್ಕೆ ಕಿಚ್ಚನ ಬಲ

hulinayaka poster
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಟ, ನಿರ್ದೇಶಕ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್​ ಸ್ವಾತಂತ್ರ್ಯ ಸೇನಾನಿ ವೀರ ಸಿಂಧೂರ ಲಕ್ಷ್ಮಣ ಜೀವನಾಧಾರಿತ ಸಿನಿಮಾ ಮಾಡಲಿದ್ದಾರೆ ಎಂಬುದು ತಿಳಿದಿತ್ತು. ಆ ಚಿತ್ರಕ್ಕೆ "ಹುಲಿನಾಯಕ' ಎಂಬ ಟೈಟಲ್​ ಕೂಡ ಫಿಕ್ಸ್​ ಆಗಿತ್ತು. ಇತ್ತೀಚೆಗಷ್ಟೆ ನಟ ಕಿಚ್ಚ ಸುದೀಪ್​ ಚಿತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಸುದೀಪ್​ ಹುಟ್ಟುಹಬ್ಬದ ಪ್ರಯುಕ್ತ ಒಂದು ಲಕ್ಷ ಸಸಿ ನಡೆಯುವ "ಹುಲಿನಾಯಕ' ಚಿತ್ರತಂಡದ ಅಭಿಯಾನಕ್ಕೆ ಚಾಲನೆ ನೀಡಿದರು.

ಅಭಿನಯ ತಿಲಕ ಎಂಬ ಹಾಡನ್ನು ಚಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಬಿಡುಗಡೆ ಮಾಡಿದರು. ನಿರ್ದೇಶಕ ಚಕ್ರವರ್ತಿ, "ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಿಂಧೂರ ವೀರ ಲಕ್ಷ್ಮಣ ನಾಯಕ ಅವರ ಕುರಿತ ಚಿತ್ರವಿದು. ಫಸ್ಟ್​ ಲುಕ್​ ಮತ್ತು ಮೋಷನ್​ ಪೋಸ್ಟರ್​ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತೇನೆ' ಎಂದರು. "ವೀಕೆಂಡ್​' ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್​ವುಡ್​ ಡೆಬ್ಯೂ ಮಾಡಿದ, ಸದ್ಯ ಇತ್ತೀಚೆಗಷ್ಟೆ "ಅನ್​ಲಾಕ್​ ರಾಘವ' ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಮಿಲಿಂದ್​ ಗೌತಮ್​ ಲಕ್ಷ್ಮಣ ನಾಯಕನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಿಂಧೂರ ಲಕ್ಷ್ಮಣ ನಾಯಕ ಅವರ ಕುಟುಂಬದವರು ಹಾಗೂ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ರಾಜು ಗೌಡ ನಾಯಕ, ಇದೇ ಸಂದರ್ಭದಲ್ಲಿ ಡಾಲಿ ಧನಂಜಯ, ನೆನಪಿರಲಿ ಪ್ರೇಮ್​, ವಸಿಷ್ಠ ಸಿಂಹ, ಪೂಜಾಗಾಂಧಿ, ಸಂಜನಾ ಗಲ್ರಾನಿ, ವೀರಕಪುತ್ರ ಶೀನಿವಾಸ್​, ತಮಿಳು ನಿರ್ದೇಶಕ ಚೇರನ್​ ಸೇರಿ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net