More

    ಭಾವಪೂರ್ಣ ಟ್ರೇಲರ್; ಚೇತನ್ ನಿರ್ದೇಶನಕ್ಕೆ ರಮೇಶ್ ಪಂಡಿತ್ ಹೀರೋ

    ಬೆಂಗಳೂರು: ಕನ್ನಡದ ಸುಮಾರು 140ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿರುವ ರಂಗಭೂಮಿ ಕಲಾವಿದ ರಮೇಶ್ ಪಂಡಿತ್ ನಾಯಕರಾಗಿರುವ ಚಿತ್ರ ‘ಭಾವಪೂರ್ಣ’. ಚೇತನ್ ಮುಂಡಾಡಿ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವಿದು.

    ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ನಿರ್ದೇಶಕ ಚೇತನ್, ‘ಇದೊಂದು ಹಿರಿಯ ಮುಗ್ಧ ವ್ಯಕ್ತಿಯ ಕಥೆ. ಸಾವಿನ ಬಳಿಕ ತಾನು ಈ ಭೂಮಿ ಮೇಲೆ ಬದುಕಿದ್ದೆ ಎನ್ನುವ ಕುರುಹನ್ನು ಬಿಟ್ಟುಹೋಗಬೇಕು ಎಂದು ಒದ್ದಾಡುವ, ಆ ಒದ್ದಾಟದಲ್ಲಿ ಆಗುವ ಅನಾಹುತಗಳ ಸುತ್ತ ಕಥೆ ಸುತ್ತುತ್ತದೆ. ಜತೆಗೆ ಇನ್ನೊಬ್ಬ ಯುವಕನ ಪ್ರೀತಿಯ ಪಯಣವಿದೆ. ಇವರಿಬ್ಬರೂ ಹೇಗೆ ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ ಎನ್ನುವುದೇ ‘ಭಾವಪೂರ್ಣ’. ತಮಾಷೆಗಳ ಜತೆಗೆ ಭಾವನಾತ್ಮಕ ಕಥೆ’ ಎಂದು ಮಾಹಿತಿ ನೀಡಿದರು. ರಮೇಶ್ ಪಂಡಿತ್ ಜತೆ ಶೈಲಶ್ರೀ ಧರ್ಮೇಂದ್ರ ಅರಸ್, ಅಥರ್ವ ಪ್ರಕಾಶ್ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಪ್ರಸನ್ನ ಛಾಯಾಗ್ರಹಣ, ಅಕ್ಷಯ್ ಹಿನ್ನೆಲೆ ಸಂಗೀತ ಹಾಗೂ ಕೀರ್ತಿರಾಜ್ ಸಂಕಲನವಿರಲಿದೆ.

    ಸದ್ಯದಲ್ಲೆ ಚಿತ್ರವನ್ನು ರಿಲೀಸ್ ಮಾಡುವ ಆಲೋಚನೆ ಚಿತ್ರತಂಡ ಹೊಂದಿದೆ. ಇದೇ ಸಂದರ್ಭದಲ್ಲಿ ಸಿನಿಮಾ ಅಂಕಣಗಳಿಗಾಗಿ ರಾಷ್ಟ್ರಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಲಿಂಗದೇವರು ಹಾಗೂ ಸತ್ಯಪ್ರಕಾಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts