ಕಿಯಾರಾಗೆ ಮಿಸ್​ ಆದ ಅವಕಾಶ ಆಲಿಯಾಗೆ ಸಿಕ್ತು!

Aalia Bhatt -Final
Published on

ಮುಂಬೈ: ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಕೆಲವೇ ಚಿತ್ರಗಳ ಅಂತರದಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. 'ಕಬೀರ್​ ಸಿಂಗ್​' ಮತ್ತು 'ಗುಡ್​ ನ್ಯೂಜ್​' ಚಿತ್ರಗಳು ಯಶಸ್ವಿಯಾಗಿದ್ದೇ ಆಗಿದ್ದು, ಹಲವು ಚಿತ್ರಗಳಲ್ಲಿ ಕಿಯಾರಾ ನಟಿಸುತ್ತಿದ್ದಾರೆ.

2014ರಲ್ಲಿ ಬಿಡುಗಡೆಯಾದ 'ಫಗ್ಲಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಿಯಾರಾ, ಅದಕ್ಕೂ ಮುಂಚೆಯೇ ಒಂದು ಚಿತ್ರಕ್ಕೆ ಆಡಿಷನ್​ ಕೊಟ್ಟಿದ್ದರಂತೆ. ಆದರೆ, ಆ ಪಾತ್ರ ಆಲಿಯಾ ಭಟ್​ಗೆ ಹೋಗಿದೆ. ಆ ಚಿತ್ರ ಯಾವುದು ಗೊತ್ತಾ 'ಸ್ಟೂಡೆಂಟ್​ ಆಫ್​ ದಿ ಇಯರ್​'.

ಹೌದು, 'ಸ್ಟೂಡೆಂಟ್​ ಆಫ್​ ದಿ ಇಯರ್​' ಚಿತ್ರದ ಆಡಿಷನ್​ನಲ್ಲಿ ಕಿಯಾರಾ ಭಾಗವಹಿಸಿದ್ದರಂತೆ. ಆದರೆ, ಆ ಆಡಿಷನ್​ನಲ್ಲಿ ಪಾಸ್​ ಆಗಿದ್ದು ಆಲಿಯಾ ಭಟ್​. ಹಾಗಾಗಿ ಆ ಪಾತ್ರ ಅವರಿಗೆ ಸಿಕ್ಕಿದೆ. ಆ ನಂತರ ಬೇರೆ ಚಿತ್ರಗಳಲ್ಲಿ ಪ್ರಯತ್ನ ಮಾಡಿದ ಕಿಯಾರಾ, 'ಫಗ್ಲಿ' ಚಿತ್ರದ ಮೂಲಕ ಕೊನೆಗೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ನಂತರ ನಡೆದಿದ್ದೆಲ್ಲಾ ಇತಿಹಾಸ ಬಿಡಿ.

ಸದ್ಯಕ್ಕೆ ಬಾಲಿವುಡ್​ನ ಬೇಡಿಕೆಯ ನಟಿಯಾಗಿರುವ ಕಿಯಾರಾ ಅಭಿನಯದ 'ಲಕ್ಷ್ಮೀ' ಚಿತ್ರವು ಇತ್ತೀಚೆಗಷ್ಟೃ ಬಿಡುಗಡೆಯಾಗಿದೆ. ಇದಲ್ಲದೆ 'ಇಂದೂ ಕೀ ಜವಾನಿ', 'ಭೂಲ್​ ಭುಲಯ್ಯಾ', 'ಶೇರ್​ಷಾ' ಮುಂತಾದ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net