More

    VIDEO| ಮಂತ್ರಿಗಿರಿ ಬಂದಮೇಲೆ ಉಮಾಶ್ರೀ ದರ್ಪ ಮಿತಿಮೀರಿತ್ತು! ಗಣ್ಯವ್ಯಕ್ತಿಯ ಸ್ಫೋಟಕ ಹೇಳಿಕೆ

    ಬೆಂಗಳೂರು: “ಕನ್ನಡ ಮಾಣಿಕ್ಯ” ಹೆಸರಿನ ಯೂಟ್ಯೂಬ್​ ಚಾನಲ್ ಮೂಲಕ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್​ ಕಾಸರಗೋಡು ಅವರು ಕೆಲ ದಿನಗಳ ಹಿಂದಷ್ಟೇ ನಟ ಶಶಿಕುಮಾರ್ ಅಪಘಾತ ಪ್ರಕರಣದ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಇದೀಗ ಅವರ ಕಣ್ಣು ಹಿರಿಯ ನಟಿ ಹಾಗೂ ರಾಜಕಾರಣಿ ಉಮಾಶ್ರೀ ಅವರ ಮೇಲೆ ಬಿದ್ದಿದ್ದು, ಅಧಿಕಾರ ಅವಧಿಯಲ್ಲಿನ ಅವರ ದರ್ಪದ ಬಗ್ಗೆ ಮಾತನಾಡಿದ್ದಾರೆ.

    ಉಮಾಶ್ರೀ ಅವರು ಮಂತ್ರಿಯಾಗಿದ್ದ ಸಮಯದಲ್ಲಿ ನಡೆದು ಬಂದ ದಾರಿಯನ್ನು ಮರೆತು ಅಧಿಕಾರ ದರ್ಪವನ್ನು ತಲೆ ಗೇರಿಸಿಕೊಂಡಿದ್ದರು. ಅವರ ನಡವಳಿಕೆ ತುಂಬಾ ಬದಲಾಗಿತ್ತು ಎಂದು ಆರೋಪಿಸಿರುವ ಗಣೇಶ್, ತಮ್ಮ ವಿಡಿಯೋದಲ್ಲಿ ಉಮಾಶ್ರೀಯವರನ್ನು ಕಟುವಾಗಿ ಟೀಕಿಸಿದ್ದಾರೆ.

    37 ವರ್ಷಗಳ ಪರಿಚಯ
    ಗಣೇಶ್​ ಹಾಗೂ ಉಮಾಶ್ರೀ ಅವರದ್ದು ಸುಮಾರು 37 ವರ್ಷಗಳ ಪರಿಚಯ. ಅವರ ಒಡಲಾಳ ನಾಟಕವನ್ನು ನೋಡಿ ಗಣೇಶ್​ ಅವರು ಉಮಾಶ್ರೀ ಅವರ ಅಭಿಮಾನಿಯಾಗಿದ್ದಾಗಿ ಹೇಳಿದ್ದಾರೆ. ಆಗಿನ ನಂಬರ್​ ಒನ್​ ಮ್ಯಾಗಜಿನ್​ ಚಿತ್ರದೀಪದಲ್ಲಿ ಲೇಖನ ಬರೆದ ಬಳಿಕ ಉಮಾಶ್ರೀಯೊಂದಿಗೆ ಸ್ನೇಹ ಆರಂಭವಾಯಿತು. ನಾಟಕ, ಲಾರಿ ನಾಟಕ ಮುಂತಾದ ಕಾರ್ಯಕ್ರಮಗಳಿಗೆ ಕರೆಸಿಕೊಂಡೆವು. ಹೀಗೆ ದಿನ ಕಳೆದಂತೆ ಸ್ನೇಹ ತುಂಬಾ ಆತ್ಮೀಯವಾಯಿತು. ಸಿನಿಮಾದಲ್ಲಿ ದೊಡ್ಡ ದೊಡ್ಡ ಅವಕಾಶಗಳು ಬರುತ್ತಾ ಹಣ ಸಂಪಾದನೆ ಮಾಡುತ್ತಿದ್ದಂತೆ ಕಾರು ಖರೀದಿಸಿದ ಉಮಾಶ್ರೀ, ಗಣೇಶ್​ ಅವರನ್ನು ಕೂರಿಸಿಕೊಂಡು ಬೆಂಗಳೂರು ಸುತ್ತಾಡಿದ ಘಟನೆಯನ್ನು ಮೆಲಕು ಹಾಕಿದ್ದಾರೆ.

    ಉಮಾಶ್ರೀ ಚೈತನ್ಯಕ್ಕೊಂದು ಸಲಾಂ
    ಹೀಗೆ ಒಂದು ದಿನ ಜಯನಗರದ ಮನೆಗೆ ಕರೆಸಿಕೊಂಡು ಕುಡುಕ ಗಂಡನ ಬಗ್ಗೆ, ಆತನ ಸಾಮಾಜಿಕ ಬೇಜವಾಬ್ದಾರಿ ನಡವಳಿಕೆ ಬಗ್ಗೆ ಹಾಗೂ ಹಾಸ್ಯ ಮಾಡಿ ನಗುವ ನೇಕಾರ ಬಂಧುಗಳ ಬಗ್ಗೆ ಸೇಡು ತೀರಿಸಿಕೊಳ್ಳುವ ಮಾತನ್ನಾಡಿದ್ದರು. ದಿನ ಕಳೆದಂತೆ ಸಿನಿಮಾ ಮಾತ್ರವಲ್ಲದೆ ರಾಜಕೀಯಕ್ಕೂ ಪ್ರವೇಶ ಪಡೆದು ಶಾಸಕಿಯಾಗಿ, ಮಂತ್ರಿಯಾಗಿ ಮತ್ತು ಕಾಂಗ್ರೆಸ್​ ಪಕ್ಷದ ಗೌರವಾನ್ವಿತ ವ್ಯಕ್ತಿಯಾಗಿ ಒಂದು ಕಾಲದಲ್ಲಿ ಅವರನ್ನು ನೋಡಿ ಲೇವಡಿ ಮಾಡಿದ ನೇಕಾರ ಸಮಾಜಕ್ಕೆ ಸವಾಲು ಹಾಕಿ ಗೆದ್ದು ಬಿಟ್ಟರು. ಅವರ ಚೈತನ್ಯಕ್ಕೆ ಒಂದು ಸಲಾಂ ಎಂದಿದ್ದಾರೆ.

    ಇದನ್ನೂ ಓದಿ: ಅಪಘಾತ ಬಗ್ಗೆ ಇದುವರೆಗೂ ನಟ ಶಶಿಕುಮಾರ್ ಹೇಳಿದ್ದು ಸುಳ್ಳಂತೆ: ಅಸಲಿ ಕಾರಣ ಇಲ್ಲಿದೆ..!

    ಮೊದಲಿನ ಸೌಜನ್ಯವನ್ನೇ ಮರೆಬಿಟ್ಟಿರಿ
    ಇಷ್ಟೆಲ್ಲಾ ಮಾಡಿದ ನೀವು ಮೊದಲಿದ್ದ ಸೌಜನ್ಯವನ್ನೇ ಮರೆತುಬಿಟ್ಟಿರಿ, ನಿಮ್ಮ ನಡವಳಿಕೆ, ನಡೆ-ನುಡಿಯಲ್ಲಿ ಬದಲಾವಣೆಯಾಗಿತ್ತು. ಬಡತನ ಬೇಗೆಯಿಂದ ಬಂದವರು ಹೇಗಿರಬೇಕಿತ್ತೋ ಆಗಿರಲಿಲ್ಲ. ತುಂಬಾ ಬದಲಾಗಿಬಿಟ್ಟಿರಿ. ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಪ್ರದರ್ಶನ ಏರ್ಪಿಡಿಸಿದಾಗ ಅಲ್ಲಿಗೆ ಭೇಟಿ ನೀಡಿದ ನೀವು ಥೇಟ್​ ದುಷ್ಟ ರಾಜಕಾರಣಿ ಶೈಲಿಯಲ್ಲಿ ನಡೆದುಕೊಂಡಿರಿ. ನಮ್ಮ ಸ್ಟಾಲ್​ ಬಳಿ ನಿಂತಿರುವಾಗ ನೋಡಿಯೂ ನೋಡದಂತೆ ನಟಿಸಿದ್ದನ್ನು ಗಮನಿಸಿದ್ದೆ. ಈ ವೇಳೆ ಎಂಟು ಪುಸ್ತಕಗಳನ್ನು ನಿಮಗೆ ನೀಡಿದೆವು. ಕನಿಷ್ಠ 500 ರೂ. ಆದರೂ ಸಿಗಬಹುದು ಎಂದು ಆಸೆಯಿತ್ತು. ನನ್ನ ಆರ್ಥಿಕ ಬಡತನದ ಬಗ್ಗೆಯೂ ನಿಮಗೆ ತಿಳಿದಿತ್ತು. ನಾನೊಬ್ಬ ನಿಷ್ಠೆಯ ವ್ಯಕ್ತಿ ಎಂಬುದು ಗೊತ್ತಿತ್ತು. ಆದರೆ, ನಾನು ಕೊಟ್ಟ ಪುಸ್ತಕದ ದರವನ್ನು ಸಹ ನೀಡಲಿಲ್ಲ. ಹಾಗೇ ಹೊರಬಿಟ್ಟಿರಿ ಎಂದು ಟೀಕಿಸಿದ್ದಾರೆ.

    ಹೆಸರು ಕೆಡಿಸುವ ಹುನ್ನಾರ ನನ್ನದಲ್ಲ
    ಕೊನೆಯಲ್ಲಿ ಸ್ಪಷ್ಟನೆ ನೀಡಿರುವ ಗಣೇಶ್​ ಕಾಸರಗೋಡು, ಸಾರ್ವಜನಿಕವಾಗಿ ಹೆಸರು ಕೆಡಿಸುವ ಹುನ್ನಾರ ನನ್ನದಲ್ಲ. ನನ್ನ ಗಾಢ ನೋವನ್ನು ಬರೆದುಕೊಂಡಿದ್ದೇನೆ. ಬೇಜಾರು ಮಾಡಿಕೊಳ್ಳಬೇಡಿ. ನನ್ನ ಬೇಜಾರು ಹೇಳಿಕೊಳ್ಳುವ ಮೂಲಕ ನಿಮಗೆ ಬೇಜಾರಾದ್ರೆ ವಿಷಾದ ವ್ಯಕ್ತಪಡಿಸುತ್ತೇನೆ. ಎಲ್ಲವನ್ನು ಈ ಪತ್ರದಲ್ಲಿ ಬರೆದು ಮನಸ್ಸು, ಹೃದಯ ಹಗುರ ಮಾಡಿಕೊಂಡಿದ್ದೇನೆಂದು ಹೇಳಿ ಮಾತು ಮುಗಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts