'ರಣಧೀರ' ನಟಿ ಖುಷ್ಬೂ ಗಂಡಸಿನಂತೆ ಕಾಣುತ್ತಿದ್ದಾರೆ!

Khushbhu
Published on

ಕ್ರೇಜಿ ಸ್ಟಾರ್​ ರವಿಚಂದ್ರನ್ ನಟನೆಯ 'ರಣಧೀರ' ಸಿನಿಮಾದ ನಾಯಕಿ ಖುಷ್ಬೂ ಗಂಡಸಿನಂತೆ ಕಾಣುತ್ತಿದ್ದಾರೆ!

ಅರೆ, ಏನಾಯ್ತು ಖುಸ್ಬೂ ಅವರಿಗೆ? ಎಂದು ಹುಬ್ಬೇರಿಸಬೇಡಿ. ಇತ್ತೀಚೆಗೆ ಟ್ವಿಟರ್​ನಲ್ಲಿ ಖುಸ್ಬೂ

ಶೇರ್​ ಮಾಡಿಕೊಂಡಿರುವ ಫೋಟೋವೊಂದು ಆ ರೀತಿ ಇದೆಯಷ್ಟೆ. ಖುಷ್ಬೂ, ತನ್ನ ಫೋಟೋವನ್ನು ಗಂಡಸಿನ ಲುಕ್​ ಕಾಣುವಂತೆ ಫೇಸ್ ಆ್ಯಪ್ ಮೂಲಕ ಎಡಿಟ್ ಮಾಡಿಕೊಂಡಿದ್ದು, ಅದನ್ನು ಟ್ವಿಟರ್​ನಲ್ಲಿ ಹಾಕಿದ್ದಾರೆ. ಆ ಫೋಟೋಗೆ 'ನಾನು ಪುರುಷನಾಗಿದ್ದರೆ, ಅಷ್ಟೇನೂ ಕೆಟ್ಟದಾಗಿ ಕಾಣುತ್ತಿರಲಿಲ್ಲ' ಎಂದು ಟ್ಯಾಗ್​ಲೈನ್​ ಕೊಟ್ಟಿದ್ದಾರೆ. ಜತೆಗೆ ನಗುವ ಎಮೋಜಿ ಹಾಕಿಕೊಂಡಿದ್ದಾರೆ. ಈ ಪೋಟೋ ಪಕ್ಕಾ ಗಂಡಸಿನ ರೀತಿ ಕಾಣುತ್ತಿದೆ.

ಗಂಡಸಿನ ಲುಕ್​ನಲ್ಲಿರುವ ಖುಷ್ಬೂ ಅವರ ಫೋಟೋಗೆ ವಿಧವಿಧವಾದ ಕಮೆಂಟ್‌ಗಳು ಬರುತ್ತಿವೆ. ಕೆಲವರು ಫೋಟೋ ನೋಡಿ ಅಚ್ಚರಿಪಟ್ಟಿದ್ದಾರೆ. ಇನ್ನೂ ಕೆಲವರು ಪುರುಷ ಖುಷ್ಬೂ ಸುಂದರವಾಗಿ ಕಾಣಿಸುತ್ತಾರೆ ಎಂದಿದ್ದಾರೆ. ಅಮೀರ್ ಖಾನ್ ರೀತಿ ಕಾಣುತ್ತಿದ್ದೀರಿ, ಯೂಟ್ಯೂಬ್ ಚಾನೆಲ್ ಆರಂಭಿಸಿ ಬ್ಯೂಟಿ ಟಿಪ್ಸ್ ನೀಡಿ ಎಂದೆಲ್ಲ ಕಮೆಂಟ್ಸ್ ಮಾಡಿದ್ದಾರೆ. ಖುಷ್ಬೂ ಸುಂದರ್ ಅವರು ಕೆಲದಿನಗಳ ಹಿಂದೆ ಸಣ್ಣಗಾಗಿರುವ ವಿಚಾರ ಸುದ್ದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net