ಬೈಂದೂರು: ಖಂಬದಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಭಾನುವಾರ ನಡೆಯಿತು. ಗ್ರಾಪಂ ಉಪಾಧ್ಯಕ್ಷ ಗಣೇಶ ದೇವಾಡಿಗ ಧ್ವಜಾರೋಹಣ ನೆರವೇರಿಸಿದರು.
ಸಂಜೆ ಸಭಾ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ನಾಗಮ್ಮ ದೇವಾಡಿಗ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ರಾಧಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಕೆ. ನಾಯ್ಕ ಶಾಲಾ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು.
ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಅಧ್ಯಕ್ಷ ಶೇಖರ ಪೂಜಾರಿ, ಗ್ರಾಪಂ ಸದಸ್ಯರಾದ ಶಾರದಾ ದೇವಾಡಿಗ, ರಾಜೇಶ್ ದೇವಾಡಿಗ, ಸತೀಶ್ ದೇವಾಡಿಗ, ಸುಶೀಲಾ ಬಾಳಿಬೆಟ್ಟು, ಎಸ್‌ಡಿಎಂಸಿ ಉಪಾಧ್ಯಕ್ಷ ಮಂಜುನಾಥ ದೇವಾಡಿಗ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಗುರುರಾಜ ಹೆಬ್ಬಾರ್, ಮಂಜುನಾಥ ಕಾರಂತ್ ಹೊಳೆಬಾಗಿಲು, ಗೌರವಾಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಮಂಜುನಾಥ ಕಾರಂತ್ ಹೊಳೆಬಾಗಿಲು, ಶಿಕ್ಷಣ ಸಂಯೋಜಕ ಸತ್ಯನಾ ಕೊಡೇರಿ ಆನಂದ ಜಿ., ವಾಸುದೇವ, ರಾಘವೇಂದ್ರ ನಾಣನಮನೆ, ನಾಗರಾಜ ಕಿರುಕಿಮನೆ ಕೊಡೇರಿ ಇದ್ದರು. ಮುಖ್ಯಶಿಕ್ಷಕ ಮಹಾಬಲ ಕೆ. ವರದಿ ವಾಚಿಸಿದರು. ನಾಗ ದೇವಾಡಿಗ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಮನ್ವಿತ್ ಎಸ್. ದೇವಾಡಿಗ ವಿದ್ಯಾರ್ಥಿ ಸರ್ಕಾರದ ವರದಿ ಮಂಡಿಸಿದರು. ಶಿಕ್ಷಕಿ ಪದ್ಮಾವತಿ ನಿರೂಪಿಸಿದರು. ನಾಗರತ್ನ ಬಿ. ವಂದಿಸಿದರು.