ಮರವಂತೆ ದೇವಸ್ಥಾನದಲ್ಲಿ ಮುಷ್ಟಿ ಕಾಣಿಕೆ ಸಮರ್ಪಣೆ

musti
Published on

ಗಂಗೊಳ್ಳಿ: ಮರವಂತೆ ಮಹಾರಾಜ ಸ್ವಾಮಿಶ್ರೀ ವರಾಹ ದೇವಸ್ಥಾನದಲ್ಲಿ ಭಾನುವಾರ ಮುಷ್ಟಿ ಕಾಣಿಕೆ ಸಮರ್ಪಣೆ ನೆರವೇರಿತು.

ದೇವಸ್ಥಾನದಲ್ಲಿ ಮತ್ತು ಗಂಗಾಧರೇಶ್ವರ ದೇವಸ್ಥಾನದಲ್ಲಿ ಗಣಪತಿ ಹೋಮ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ದೇವಳದ ಅಭಿವೃದ್ಧಿ ಸಮಿತಿ ಸದಸ್ಯರು, ಮೀನುಗಾರರು ಹಾಗೂ ಭಕ್ತರು ಮುಷ್ಟಿ ಕಾಣಿಕೆ ಸಮರ್ಪಣೆ ಮಾಡಿ ಪ್ರಸಾದ ಸ್ವೀಕರಿಸಿದರು.

ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಶೇಖರ ಹೆಬ್ಬಾರ್ ಮಾತನಾಡಿ, ದೇವಾಲಯದ ಜೀಣೋದ್ಧಾರಕ್ಕೆ ಸಂಬಂಧಪಟ್ಟಂತೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಗ್ರಾಮಗಳಲ್ಲಿ, ಮನೆಗಳಲ್ಲಿ, ಕ್ಷೇತ್ರದಲ್ಲಿ ಆದಂತಹ ವಾಗ್ಧೋಶಗಳ ಪರಿಹಾರಕ್ಕಾಗಿ ಮುಷ್ಟಿ ಕಾಣಿಕೆ ಸಮರ್ಪಣೆ ನಡೆಸಲಾಗಿದೆ ಎಂದರು.

ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿದರು. ಸಮಿತಿ ಕೋಶಾಧಿಕಾರಿ ಸತೀಶ ಎಂ.ನಾಯಕ್, ಸಮಿತಿ ಸದಸ್ಯರಾದ ರಾಮಚಂದ್ರ ಹೆಬ್ಬಾರ್ ಕುರು, ರಾಜು ಪಿ.ಕುರು, ವಾಸುದೇವ ಖಾರ್ವಿ ಮರವಂತೆ, ನಾಗರಾಜ ಪಟಗಾರ್ ಮರವಂತೆ, ಜಗದೀಶ ಪೂಜಾರಿ ಹಕ್ಲಾಡಿ, ನರಸಿಂಹ ಪೂಜಾರಿ ಪಡುಕೋಣೆ, ಗಣೇಶ ಖಾರ್ವಿ ಮರವಂತೆ ಮೊದಲಾದವರು ಉಪಸ್ಥಿತರಿದ್ದರು. ಕರುಣಾಕರ ಆಚಾರ್ಯ ಸ್ವಾಗತಿಸಿದರು. ರವಿ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಬಳೆಗಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net